ಹೊಸನಗರ ವಿಧಾನಸಭಾ ಕ್ಷೇತ್ರ ಹೋರಾಟಕ್ಕೆ ಕೋಟೆಗಾರ್ ವಿದ್ಯಾವರ್ಧಕ ಸಂಘ ಸಂಪೂರ್ಣ ಬೆಂಬಲ

Written by Mahesha Hindlemane

Published on:

ಹೊಸನಗರ ; ನಗರದಿಂದ ನಾಳೆ ಪ್ರಾರಂಭವಾಗಿ ಸಂಜೆ ಹೊಸನಗರದಲ್ಲಿ ವಾಸ್ತವ್ಯ ನಡೆಸಿ ಭಾನುವಾರ ಬೆಳಿಗ್ಗೆ ಹೊಸನಗರದಿಂದ ಪಾದಯಾತ್ರೆಯ ಮೂಲಕ ರಿಪ್ಪನ್‌ಪೇಟೆಯಲ್ಲಿ ಬಹಿರಂಗ ಸಭೆಯಲ್ಲಿ ಹೊಸನಗರ ಕ್ಷೇತ್ರ ಬೇಕು ಎಂಬ ಹೋರಾಟಕ್ಕೆ ಹೊಸನಗರ ಕೋಟೆಗಾರ್ ವಿದ್ಯಾವರ್ಧಕ ಸಂಘ ಸಂಪೂರ್ಣ ಬೆಂಬಲ ನೀಡುತ್ತೇವೆಂದು ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶಶಿಧರ್ ನಾಯ್ಕ್ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಸೀತಾರಾಮಚಂದ್ರ ಸಭಾಭವನದ ಆವರಣದಲ್ಲಿ ಹೊಸನಗರ ಕ್ಷೇತ್ರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಬೇಕು ಎಂದು ಕಲಗೋಡು ರತ್ನಾಕರ್ ಹಾಗೂ ಅನೇಕರು ಮನವಿಯ ಮೇರೆಗೆ ನಮ್ಮ ಕೋಟೆಗಾರ್ ವಿದ್ಯಾವರ್ಧಕ ಸಂಘ ಕೋಟೆಗಾರ್ ಮಹಿಳಾ ಸಂಘ ಹಾಗೂ ಕೋಟೆಗಾರ್ ಯುವಕ ಸಂಘದವರು ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ಘೋಷಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಹೋರಾಟ ಸಮಿತಿಯ ಸದಸ್ಯ ಕಲಗೋಡು ರತ್ನಾಕರ್, ಎನ್.ಆರ್. ದೇವಾನಂದ್, ಹೋರಾಟ ಸಮಿತಿಯ ಸಂಚಾಲಕ ಚಿದಂಬರ, ಕೋಟೆಗಾರ್ ವಿದ್ಯಾವರ್ಧಕ ಸಂಘ ಪ್ರಧಾನ ಕಾರ್ಯದರ್ಶಿ ಕೆ.ಜಿ. ನಾಗೇಶ್ ಹಾಗೂ ಕೋಟೆಗಾರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮಾವಿನಕೊಪ್ಪ ಸತೀಶ್, ಮಹಿಳಾ ಸಂಘದ ಅಧ್ಯಕ್ಷೆ ಶ್ರೀದೇವಿ ಹನುಮಂತ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Comment