HOSANAGARA | ವಿವಿಧೆಡೆ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

Written by malnadtimes.com

Updated on:

HOSANAGARA | ತಾಲೂಕಿನ ವಿವಿಧೆಡೆ 78ನೇ ಸ್ವಾತಂತ್ರ್ಯೋತ್ಸವವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು‌.

WhatsApp Group Join Now
Telegram Group Join Now
Instagram Group Join Now

ಹೊಸನಗರ ಪ.ಪಂ. :

ಪಟ್ಟಣ ಪಂಚಾಯತಿ ಆವರಣದಲ್ಲಿ ಆಡಳಿತಾಧಿಕಾರಿ ತಹಶೀಲ್ದಾರ್ ರಶ್ಮಿ ಹಾಲೇಶ್‌ 78ನೇ ವರ್ಷದ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಉಮೇಶ್ ಎಸ್ ಗುಡ್ಡದ್ ಹಾಗೂ ಎಲ್ಲ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಪಟ್ಟಣ ಪಂಚಾಯತಿಯ ಸದಸ್ಯರು ಪೌರ ನೌಕರ ವರ್ಗದವರು ಉಪಸ್ಥಿತರಿದ್ದರು.

Anna Bhagya: ಇನ್ನು ಮುಂದೆ ಸಿಗುವುದಿಲ್ಲ ಅನ್ನಭಾಗ್ಯ ಹಣ, ಬದಲಾಗಲಿದೆ ನಿಯಮ !

ಕೋಡೂರು ಗ್ರಾಪಂ :

ಕೋಡೂರು ಗ್ರಾ.ಪಂ.ನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಗ್ರಾ.ಪಂ. ಅಧ್ಯಕ್ಷ ಕೆ‌‌.ಎಸ್. ಉಮೇಶ್ ನೆರವೇರಿಸಿದರು‌.

ಈ ವೇಳೆ ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ, ಸದಸ್ಯರಾದ ಯೋಗೇಂದ್ರಪ್ಪ, ಶೇಖರಪ್ಪ, ಮಂಜಪ್ಪ, ಜಯಪ್ರಕಾಶ, ಅನ್ನಪೂರ್ಣ, ಚಂದ್ರಕಲಾ, ಪ್ರೀತಿ, ರೇಖಾ, ಸವಿತಾ, ಸುನಂದಾ, ಪಿಡಿಒ ನಾಗರಾಜ್, ಸಿಬ್ಬಂದಿ ವರ್ಗದವರು, ಕೋಡೂರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟು ಮಿಂಚಿದರು.

ನಂತರ ಅಮೃತ ಸರೋವರ ಯೋಜನೆಯಡಿ ನಿರ್ಮಾಣವಾದ ಕಾರಕ್ಕಿ ಗ್ರಾಮದ ತಿಪ್ಪಯ್ಯನಕೆರೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.
ಗ್ರಾಮದ ಹಿರಿಯರಾದ ದುಗ್ಗನಾಯ್ಕ ಧ್ವಜಾರೋಹಣ ನೆರವೇರಿಸಿದರು. ನಂತರ ಭಾರಿ ಮಳೆಗೆ ಕೋಡಿ ಬಿದ್ದ ಈ ಕೆರೆಗೆ ಗ್ರಾಪಂ ವತಿಯಿಂದ ಬಾಗಿನ ಅರ್ಪಿಸಲಾಯಿತು. ಇದೇ ವೇಳೆ ಗ್ರಾಮ ಪಂಚಾಯತಿ ಮಹಿಳಾ ಸದಸ್ಯರಿಗೆ ಉಡಿ ತುಂಬಲಾಯಿತು‌.

ಬದ್ರಿಯಾ ಜುಮ್ಮಾ ಮಸೀದಿ :

ಸೌಹಾರ್ಧ ಸಹಿಷ್ಟತೆ ದೇಶ ಪ್ರೇಮ ಈ ಭಾರತ ದೇಶದ ಮಣ್ಣಿನ ಭಾಗವಾಗಿದೆ ಎಂದು ಬದ್ರಿಯ ಜುಮ್ಮಾ ಮಸೀದಿಯ ಧರ್ಮ ಗುರುಗಳಾದ ಬದರುದ್ದೀನ್ ಝೋಹರಿ ಹೇಳಿದರು.

ಹೊಸನಗರ ಟೌನ್ ಬದ್ರಿಯ ಜುಮ್ಮಾ ಮಸೀದಿಯ ಆವರಣದಲ್ಲಿ ಅದ್ದೂರಿಯಾಗಿ 78ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

MGNREGA ಪಶು ಶೆಡ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ, ಮಾನದಂಡಗಳೇನು ಇಲ್ಲಿದೆ ಮಾಹಿತಿ

ನಾವು ಪೈಗಂಬರ್‌ರವರ ಮಾರ್ಗದರ್ಶನದಲ್ಲಿ ಜೀವನ ಸಾಗಿಸುತ್ತಿದ್ದು ನಮಗೆ ಈ ದೇಶದ ಜನರ ಜೊತೆಗೆ ಯಾವ ರೀತಿಯಲ್ಲಿ ಬದುಕಬೇಕು ಸೌಹಾರ್ಧ ರೀತಿಯಲ್ಲಿ ಬದಕುವುದನ್ನು ದೇಶ ಪ್ರೇಮ ಬೆಳಸಿಕೊಂಡು ಬದುಕುವುದು ಕಲಿಸಿದ್ದಾರೆ ಈ ಭಾರತ ದೇಶದ ಮಣ್ಣಿ ಭಾಗವಾಗಿದೆ ನಮ್ಮ ಸುತ್ತ-ಮುತ್ತಲಿನ ಜನರೊಂದಿಗೆ ಯಾವ ರೀತಿ ಜೀವನ ಸಾಗಿಸಬೇಕು, ಸುತ್ತಮುತ್ತ ಜನರನ್ನು ಯಾವ ರೀತಿಯಲ್ಲಿ ನೋಡಿಕೊಳ್ಳಬೇಕು ದೇಶ ಪ್ರೇಮ ಯಾವ ರೀತಿ ಬೆಳೆಸಿಕೊಳ್ಳಬೇಕು ಎಂಬುವುದು ಕಲಿಸಿದ್ದು ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಪೈಗಂಬರ್ ಮಾರ್ಗದರ್ಶನ ಭಾರತ ದೇಶದ ಜನರ ಪ್ರೀತಿ ವಿಶ್ವಾಸದಿಂದ ಎಲ್ಲ ಧರ್ಮಗಳೊಂದಿಗೆ ಈ ಪ್ರಜಾಪ್ರಭುತ್ವ ದೇಶವನ್ನು ಉಳಿಸೋಣ, ಬೆಳೆಸೋಣ ಹಾಗೂ ನಾವು ನಡೆದ ದಾರಿಯಲ್ಲಿ ಹಿಂದಿನ ಪೀಳಿಗೆಯನ್ನು ಬೆಳೆಸೋಣ ಎಂದರು.

ಜುಮ್ಮಾ ಮಸೀದಿ ಅಧ್ಯಕ್ಷರಾದ ಕೆ. ಅಮನುಲ್ಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹಬ್ಬಾಳ್, ಪಟ್ಟಣ ಪಂಚಾಯಿತಿ ಸದಸ್ಯರಾದ ಅಶ್ವಿನಿಕುಮಾರ್ ಶಾಹೀನ ನಸೀರ್ ಮುಂಖಂಡರಾದ ಶ್ರೀಧರ ಉಡುಪ, ಸಮಿತಿಯ ಅಹಮದ್, ಮಹಮದ್ ಆಲಿ, ಜುಬೇರ್ ಸೈಯದ್, ಯಾಸೀರ್ ಊರಿನ ಪ್ರಮುಖರಾದ ಮಹಮದ್ ಹಾಜೀ, ನಸೀರ್ ಯೂಸುಫ್, ರಫೀಕ್, ಫಾರೂಕ್ ಇನ್ನು ಮುಂತಾದ ಗಣ್ಯರು ಭಾಗವಹಿಸಿದ್ದರು.

78ನೇ ಸ್ವಾತಂತ್ರ್ಯೋತ್ಸವ ವಿಶೇಷ ಕಾರ್ಯಕ್ರಮವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಶುಶ್ರೂಷಕಿ ಶೈಲಜಾ ಹಾಗೂ ಆಶಾ ಕಾರ್ಯಕರ್ತೆ ಸವಿತಾರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮದರಸದಲ್ಲಿ ನಡೆಸಿದ ಸ್ವರ್ಧಾ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾಂಗ್ರೆಸ್ ಕಛೇರಿ :

ಹೊಸನಗರದ ಗಾಂಧಿ ಮಂದಿರದಲ್ಲಿರುವ ಕಾಂಗ್ರೆಸ್ ಕಛೆರಿಯ ಆವರಣದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ‌ ಚಂದ್ರಮೌಳಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾದ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ಶ್ರೀನಿವಾಸ್ ಕಾಮತ್, ರಾಜಮೂರ್ತಿ, ಜಯನಗರ ಗುರು, ಮಹಳ ಘಟಕದ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಕೆ ಇಲಿಯಾಸ್, ನೇತ್ರಾ ಸುಬ್ರಾಯಭಟ್, ಎಂ.ಪಿ. ಸುರೇಶ್, ಮೈನಾವತಿ ರಾಜಮೂರ್ತಿ, ರಾಧಿಕಾ, ಚಂದ್ರಕಲಾ ನಾಗರಾಜ್, ಪ್ರಭಾಕರ್, ಜಯಶೀಲಪ್ಪ ಗೌಡ, ಮಹಮದ್ ಸಾಬ್, ಸುರೇಶ್‌ಕುಮಾರ್, ನಿತ್ಯಾನಂದ ಹೆಚ್.ಎಂ, ಉಬೆದ್ದುಲ್ಲಾ, ನಸೀರ್, ಶಾಹಿನ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು :

ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಡಾ. ಉಮೇಶ್ ಕೆ. ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಪ್ರಭಾಕರ್ ರಾವ್ ಕೆ. ಅವರು ಭಾರತದ ಸ್ವಾತಂತ್ರ್ಯದ ಚಳವಳಿಯ ಕುರಿತಾದ ವಿಶೇಷ ಉಪನ್ಯಾಸವನ್ನು ನೀಡಿದರು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಮಾಸ್ತಿಕಟ್ಟೆ ಮತ್ತು ಸದಸ್ಯರಾದ ಶ್ರೀಧರ್ ಹಳಗುಂದ, ಡಾ. ಕವಿತಾ ಭಾಗವಹಿಸಿದ್ದರು.

ಕು. ಮಂದಾರ ಟಿ. ಕಾರ್ಯಕ್ರಮದ ನಿರೂಪಿಸಿದರು. ದೊಡ್ಡಯ್ಯ ಹೆಚ್. ಸ್ವಾಗತಿಸಿದ್ದರು. ಡಾ. ಬಸವರಾಜಪ್ಪ ಎಂ. ಟಿ. ವಂದಿಸಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಬರ ಪರಿಹಾರದ ಪಟ್ಟಿ ಬಿಡುಗಡೆ, ಇದರಲ್ಲಿ ನಿಮ್ಮ ಹೆಸರಿದ್ಯಾ ಎಂದು ಚೆಕ್ ಮಾಡುವುದು ಹೇಗೆ ?

Leave a Comment