Hosanagara

ಹೊಸನಗರ ದಸರಾ ; ಅ.10ಕ್ಕೆ ಮಹಿಳೆಯರಿಗೆ ವಿವಿಧ ಸ್ಪರ್ಧಾಕೂಟ ಆಯೋಜನೆ

HOSANAGARA ; 2024-25ನೇ ಸಾಲಿನ ದಸರಾ ಪ್ರಯುಕ್ತ ಮಹಿಳೆಯರಿಗಾಗಿ ಹಲವು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದೇ ಅಕ್ಟೋಬರ್ 10ರ ಗುರುವಾರ ಸ್ಪರ್ಧೆಗಳು ನಡೆಯಲಿದ್ದು, ತೆಂಗಿನಕಾಯಿ ಅಲಂಕಾರ, ಕೃಷ್ಣನ ಕಿರೀಟ ಅಲಂಕಾರ, ಕನ್ನಡಿ ಅಲಂಕಾರ, ಜಡೆ ಮಾಡಿಕೊಂಡು ಬರುವುದು, ಮಕ್ಕಳಿಗೆ ದೇವಿ ಅಲಂಕಾರ, ಪ್ಲಾಸ್ಟಿಕ್ ಶೀಟ್ ಮೇಲೆ ಕುಂದನ್ ಅಲಂಕಾರ, ವೀಳ್ಯದೆಲೆ ಮೇಲೆ ಅಲಂಕಾರ, ಬಾಗಿನ ಸಾಮಾನು ಬಳಸಿ ಆರತಿ ತಟ್ಟೆ ಮಾಡುವುದು, ಸೀಮೆ ಅಕ್ಕಿಯಿಂದ ಖಾದ್ಯ ತಯಾರಿ, ನ್ಯೂಸ್ ಪೇಪರ್ ನಿಂದ ಮಕ್ಕಳಿಗೆ ಫ್ಯಾನ್ಸಿ ಡ್ರೆಸ್ ತಯಾರಿಕೆ, ಜಾನೂರು ಕಲೆ) ತೆಂಗಿನ ಗರಿ ಬಳಸಿ, ಡ್ರೈ ಫ್ರೂಟ್ಸ್ ಬಳಸಿ ಹಾರ ತಯಾರಿಕೆ, 5ರಿಂದ 10 ವರ್ಷದ ಮಕ್ಕಳಿಗೆ ತರಕಾರಿ, ಹಣ್ಣುಗಳ ಫ್ಯಾನ್ಸಿಡ್ರೆಸ್ ಸ್ಪರ್ಧೆ ಮಹಿಳೆಯರಿಗೆ ಹೇರ್ ಸ್ಟೈಲ್ ಸ್ಪರ್ಧೆ, ಮಹಿಳೆಯರಿಗೆ ಫ್ಯಾಷನ್ ಶೋ ಏರ್ಪಡಿಸಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅಲ್ಲದೆ, ಸ್ಥಳದಲ್ಲೇ ಕಚ್ಚೆ ಸೀರೆ ಉಡುವುದು, ಮ್ಯೂಸಿಕಲ್ ಚೇರ್, ನಿಂಬೆಹಣ್ಣು ಮತ್ತು ಸ್ಪೂನ್ ಆಟ, ಲೋಟದಲ್ಲಿ ಬಾಲ್ ಹಾಕುವುದು, ಹೂ ಕಟ್ಟುವ ಸ್ಪರ್ಧೆ, ಹಣತೆಗೆ ಅಲಂಕಾರ, ಕಾಳು, ಬೇಳೆ, ಅಕ್ಕಿ ಬಳಸಿ ರಂಗೋಲಿ ಸ್ಪರ್ಧೆ, ಹಗ್ಗ ಜಗ್ಗಾಟ, ಹತ್ತಿ ಬಳಸಿ ಗೆಜ್ಜೆವಸ್ತ್ರ ತಯಾರಿಕೆ, ನವಿಲು ಗರಿ ಅಲಂಕಾರ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪಟ್ಟಣ ಪಂಚಾಯತಿ ಸದಸ್ಯೆ ಸಿಂಥಿಯಾ ಸೆರಾವೋ (9353429785) ಹಾಗೂ ಆಶ್ರಯ ಸಮಿತಿ ಸದಸ್ಯೆ ರಾಧಿಕ ಶ್ರೇಷ್ಠಿ (9482477954) ಸಂಪರ್ಕಿಸಲು ದಸರಾ ಆಚರಣೆ ಸಮಿತಿ ಕೋರಿದೆ.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>