ಹೊಸನಗರ

ಡಿಸಿಸಿ ಬ್ಯಾಂಕ್ ನೂತನ ಉಪಾಧ್ಯಕ್ಷ ಜಿ.ಎನ್. ಸುಧೀರ್ ಹಾಗೂ ‘ಸಹಕಾರ ರತ್ನ’ ಪುರಸ್ಕೃತ ವಾಟಗೋಡು ಸುರೇಶ್ ಅವರಿಗೆ ಅಭಿನಂದನೆ

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಜಿ.ಎನ್. ಸುಧೀರ್ ಹಾಗೂ ಪ್ರತಿಷ್ಠಿತ ‘ಸಹಕಾರ ರತ್ನ’ ಪ್ರಶಸ್ತಿಗೆ ಭಾಜನರಾಗಿರುವ ವಾಟಗೋಡು ಸುರೇಶ್ ಅವರಿಗೆ ಬ್ರಹ್ಮೇಶ್ವರದ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Hosanagara news

ಹೊಸನಗರ: ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಜಿ.ಎನ್. ಸುಧೀರ್ ಹಾಗೂ ಪ್ರತಿಷ್ಠಿತ ‘ಸಹಕಾರ ರತ್ನ’ ಪ್ರಶಸ್ತಿಗೆ ಭಾಜನರಾಗಿರುವ ವಾಟಗೋಡು ಸುರೇಶ್ ಅವರಿಗೆ ಬ್ರಹ್ಮೇಶ್ವರದ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

​ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಚಿಕ್ಕಮಣತಿ ಹಾಲಪ್ಪ, “ಜಿ.ಎನ್. ಸುಧೀರ್ ಅವರಿಗೆ ದೊರೆತಿರುವ ಈ ಸ್ಥಾನ ಅತ್ಯಂತ ಮಹತ್ತರವಾದದ್ದು. ಅವರ ತಂದೆ ದಿವಂಗತ ಜಿ.ಎನ್. ನಂಜುಂಡಪ್ಪ ಅವರೂ ಸಹ ಸಾರ್ವಜನಿಕ ಸೇವೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ಸುಧೀರ್ ಅವರು ಹಲವು ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ, ಅನುಭವ ಹಾಗೂ ಕೆಲಸದ ಬದ್ಧತೆಯೇ ಅವರನ್ನು ಇಂದು ಬ್ಯಾಂಕಿನ ಉಪಾಧ್ಯಕ್ಷ ಸ್ಥಾನಕ್ಕೆ ಏರಿಸಿದೆ,” ಎಂದು ಪ್ರಶಂಸಿಸಿದರು.

​”ನೂತನ ಆಡಳಿತ ಮಂಡಳಿಯಿಂದ ಜಿಲ್ಲೆಯ ರೈತರು, ಕೃಷಿ ಕಾರ್ಮಿಕರು, ವರ್ತಕರು ಹಾಗೂ ಸಹಕಾರಿ ಸಂಘಗಳಿಗೆ ಇನ್ನಷ್ಟು ಬಲ ಸಿಗುವಂತಾಗಲಿ. ಬ್ಯಾಂಕ್ ಮತ್ತಷ್ಟು ಗ್ರಾಹಕ ಸ್ನೇಹಿ ಸೇವೆಗಳನ್ನು ನೀಡುವಂತಾಗಲಿ ಎನ್ನುವುದು ನಮ್ಮ ಆಶಯವಾಗಿದೆ,” ಎಂದರು.

​ದೇವಸ್ಥಾನ ಸಮಿತಿಯ ಅಧ್ಯಕ್ಷ ಜಬಗೋಡು ಹಾಲಪ್ಪ ಗೌಡ ಮಾತನಾಡಿ, “ಕಳೆದ 35 ವರ್ಷಗಳಿಂದ ಸಹಕಾರಿ ಸಂಘಗಳ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿರುವ ವಾಟಗೋಡು ಸುರೇಶ್ ಅವರಿಗೆ ಸಹಕಾರಿ ಕ್ಷೇತ್ರದ ಬಗ್ಗೆ ಅಪಾರ ಜ್ಞಾನ ಮತ್ತು ಅನುಭವವಿದೆ. ಅವರ ನಿಸ್ವಾರ್ಥ ಸೇವೆಗೆ ‘ಸಹಕಾರ ರತ್ನ’ ಪ್ರಶಸ್ತಿ ಅತ್ಯಂತ ಸೂಕ್ತವಾಗಿ ಲಭಿಸಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಜಬಗೋಡು ಹಾಲಪ್ಪಗೌಡ, ಜಯಶೀಲಪ್ಪಗೌಡ, ಉಮೇಶ್, ಹಾಲಗುಡ್ಡೆ ರವಿಗೌಡ, ಹೀಲಗೋಡು ಅಶೋಕ್, ಲೋಕೇಶ್, ಡಿ.ಆರ್. ವಿನಯ್‌ಕುಮಾರ್ ದುಮ್ಮ, ಶಿವಾನಂದ ಮಾವಿನಕಟ್ಟೆ, ಡಿ.ವಿ.ಆರ್. ಮಲ್ಲಿಕ ಜಬಗೋಡು, ಮಹೇಂದ್ರ, ಸಂತೋಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]