ಹೊಸನಗರ ಗುಬ್ಬಿಗ ಹಾರ್ಡ್‌ವೇರ್ ಮಾಲಿಕ ಜಿ.ಎಸ್ ಸುಬ್ರಹ್ಮಣ್ಯ ಇನ್ನಿಲ್ಲ !

Written by Mahesha Hindlemane

Published on:

Hosanagara | ಪಟ್ಟಣದ ಚೌಡಮ್ಮ ರಸ್ತೆಯ ಗುಬ್ಬಿಗ ಹಾರ್ಡ್‌ವೇರ್ ಮಾಲಿಕ ಜಿ.ಎಸ್ ಸುಬ್ರಹ್ಮಣ್ಯ (78) ಭಾನುವಾರ ರಾತ್ರಿ ಉಸಿರಾಟದ ತೊಂದರೆಯಿಂದಾಗಿ ತೀವ್ರ ಹೃದಯಾಘಾತದಿಂದ ನಿಧನರಾದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದು, ಅಂತ್ಯಕ್ರಿಯೆ ಗುಬ್ಬಿಗದ ಅವರ ಜಮೀನಿನಲ್ಲಿ ನಡೆಯಲಿರುವುದಾಗಿ ಕುಟುಂಬದ ಮೂಲಗಳು ತಿಳಿಸಿದೆ.

ಗುಬ್ಬಿಗ ಸುಬ್ರಮಣ್ಯರವರು ಜೇನಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ, ಹೊಸನಗರ ಪಟ್ಟಣದ ಭೂ ಅಭಿವೃದ್ಧಿ ಬ್ಯಾಂಕ್ ಹಾಗೂ ಕಳೂರು ಸೇವಾ ಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು, ಅಲ್ಲದೆ ಮೊಟ್ಟ ಮೊದಲ ಬಾರಿಗೆ ಗ್ರಾಮೀಣ ಪ್ರದೇಶಕ್ಕೆ ಬಸ್ ಸಂಚಾರ ಸೌಲಭ್ಯ ಕಲ್ಪಿಸಿದ್ದು ಹಾಗೂ ಪಟ್ಟಣದ ಪ್ರತಿಷ್ಠಿತ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಪ್ರಾರಂಭಕ್ಕೆ ಶಿವಪ್ಪನಾಯಕ ರಸ್ತೆಯ ತಮ್ಮ ಕಟ್ಟಡದಲ್ಲಿ ಸ್ಥಳಾವಕಾಶ ಕಲ್ಪಿಸಿ ಶಾಲೆ ಆರಂಭಕ್ಕೆ ನೆರವಾಗಿದ್ದರು.

ಗುಬ್ಬಿಗ ಸುಬ್ರಹ್ಮಣ್ಯರಾಯರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಅವರ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು.

ಸಂತಾಪ :ತಾಲೂಕು ಬ್ರಾಹ್ಮಣ ಸಮಾಜ, ಭೂ ಅಭಿವೃದ್ಧಿ ಬ್ಯಾಂಕ್, ಕಳೂರು ಸೇವಾ ಸಹಕಾರ ಬ್ಯಾಂಕ್ ಹಾಗೂ ಶ್ರೀರಾಮಕೃಷ್ಣ ಶಾಲೆ ಆಡಳಿತ ಮಂಡಳಿಯವರು ಗುಬ್ಬಿಗ ಸುಬ್ರಮಣ್ಯ ರಾಯರ ನಿಧನಕ್ಕೆ ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Comment