Hosanagara | ಕಲ್ಲುಹಳ್ಳ ಸೇತುವೆ ಪಿಚ್ಚಿಂಗ್ ಕುಸಿತ !

Written by malnadtimes.com

Published on:

HOSANAGARA | ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಪಟ್ಟಣ ಹೊರವಲಯದ ಕಲ್ಲುಹಳ್ಳ ಸೇತುವೆಯ ಪಿಚ್ಚಿಂಗ್ ಕುಸಿತವಾಗಿದೆ‌. ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

SHIVAMOGGA ಕೃಷಿ-ಶಿಕ್ಷಣ ವಲಯ ಮತ್ತು ಸಾಮಾಜಿಕ ಭದ್ರತಾ ಯೋಜನೆಯಡಿ ಸಾಧನೆ ತೋರಲು ಸಂಸದ ಬಿವೈಆರ್ ಸೂಚನೆ

ರಾಣೆಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿ (766c)ಯ ಕಲ್ಲುಹಳ್ಳಕ್ಕೆ ಇತ್ತೀಚೆಗೆ ಹೊಸ ಸೇತುವೆ ನಿರ್ಮಿಸಲಾಗಿದೆ. ಸೇತುವೆಯ ಎರಡು ಬದಿ ಮಣ್ಣು ತುಂಬಿ ಪಿಚ್ಚಿಂಗ್ ಕಾಮಗಾರಿ ನಡೆಸಲಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸುರಿದ ಮಳೆಗೆ ಮಣ್ಣು ಕುಸಿದಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ‌‌‌.

Hosanagara

ಸೇತುವೆ ಬದಿಯ ಇಕ್ಕೆಲಕ್ಕೆ ಮಣ್ಣನ್ನ ತುಂಬಿದ್ದು ಅದು ಇನ್ನೂ ಸೆಟ್ಟಿಂಗ್ ಆಗುವ ಮೊದಲೇ ಜೆಸಿಬಿ, ಹಿಟಾಚಿ ಯಂತ್ರ ಬಳಸಿ ಸಮತಟ್ಟು ಮಾಜಲಾಗಿದೆ. ಅಲ್ಲದೇ ಡ್ರೈ ಮಣ್ಣಿಗೆ ಪಿಚ್ಚಿಂಗ್ ಕಟ್ಟಿರುತ್ತಾರೆ. ಈಗ ನೀರು ಇಳಿದ ಹಾಗೆಲ್ಲಾ, ಮಣ್ಣು ಸೆಟ್ಟಿಂಗ್ ಆಗದ ಕಾರಣ ಕುಸಿದಿದೆ. ಇದಕ್ಕೂ ಹೆಚ್ಚು ಮಳೆಗೂ ಏನು ಸಂಬಂಧವಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

Hosanagara

ಒಟ್ಟಾರೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸೇತುವೆಯ ಪಿಚ್ಚಿಂಗ್ ಕುಸಿದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.

Malenadu Rain | ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ದಾಖಲಾದ ಟಾಪ್ 10 ಸ್ಥಳಗಳಿವು

Leave a Comment