HOSANAGARA ; ನಾವು ಯಾವ ಕೆಲಸ ಮಾಡುತ್ತಿದ್ದೇವೆ ಎಂಬುವುದು ಮುಖ್ಯವಲ್ಲ ದೇವರಿಗೆ ಜನರಿಗೆ ಮೋಸ ಮಾಡದೇ ಮಾಡುವ ಕೆಲಸದಲ್ಲಿ ತೃಪ್ತಿ ಪಡಬೇಕು ಎಂದು ಸಾಮಾಜಿಕ ಹೋರಾಟಗಾರ ರಿಪ್ಪನ್‌ಪೇಟೆ ಟಿ.ಆರ್. ಕೃಷ್ಣಪ್ಪ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿರುವ ಚೌಡಮ್ಮ ಆಟೋರಿಕ್ಷಾ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶನಿವಾರ ಬೆಳಗ್ಗೆ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಧ್ವಜಾರೋಹಣ ನೇರವೇರಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾವು ಮಾಡುವ ಕೆಲಸ ಜೀವನ ಸಾಗಿಸುವ ಉದ್ದೇಶದಿಂದ ಮಾಡಬೇಕಾಗಿದೆ ಕೆಲಸ ಮಾಡುವುದರಲ್ಲಿ ಮೇಲು ಕೀಳು ಎಂಬುದಿರುವುದಿಲ್ಲ. ನಾವು ಮಾಡುವ ಕೆಲಸದಲ್ಲಿ ಯಾವುದೇ ಮೋಸವಿಲ್ಲದಂತೆ ಕೆಲಸ ಮಾಡಬೇಕು ಎಂದರು.
ಆಟೋ ಚಾಲನೆ ಉತ್ತಮ ಕೆಲಸ :
ಆಟೋಚಾಲನೆ ಮಾಡುವುದು ಸಾರ್ವಜನಿಕರ ಅನುಕೂಲಕ್ಕಾಗಿ ಇರುವಂಥದ್ದು ಆಟೋಗಳಿಂದ ಸಾರ್ವಜನಿಕರಿಗೆ ಇಲ್ಲಿಯವರೆಗೆ ಅನುಕೂಲವಾಗಿದೇಯೇ ಹೊರತು ಯಾರಿಗೂ ತೊಂದರೆಯಾಗಿಲ್ಲ. ಈ ಕೆಲಸ ಸಮಾಜದಲ್ಲಿ ಸಾರ್ವಜನಿಕರಿಗೆ ಉತ್ತಮವಾಗಿ ಸೇವೆ ಮಾಡುತ್ತಿದ್ದು ಯಾವುದೇ ಕಪ್ಪು ಚುಕ್ಕಿ ಇಲ್ಲದಂತೆ ಮುಂದುವರೆಸಿಕೊಂಡು ಹೋಗಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದರು.
ಕನ್ನಡದ ಚಲನಚಿತ್ರ ನಿರ್ದೇಶಕ ನಟ ದಿ||ಶಂಕರ್‌ನಾಗ್‌ರವರ ಭಾವಚಿತ್ರಕ್ಕೆ ಚೌಡಮ್ಮ ಆಟೋರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಅಣ್ಣಪ್ಪನವರು ಪೂಜೆ ಸಲ್ಲಿಸಿ ನಂತರ ಕನ್ನಡ ಧ್ವಜಾರೋಹಣ ನೇರವೇರಿಸಲಾಯಿತು.
ಸುಮಾರು 25 ಕ್ಕಿಂತಲ್ಲೂ ಹೆಚ್ಚು ಆಟೋ ರಿಕ್ಷಾಗಳಿಗೆ ಮಾಲೀಕರು ಚಾಲಕರು ಶೃಂಗಾರಗೊಳಿಸಿ ಹೊಸನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಿಹಿ ಹಂಚಿದರು.