HOSANAGARA ; ಸಾಗರದಿಂದ ಹೊಸನಗರಕ್ಕೆ ಬರುವ 33 ಕೆವಿ ಲೈನ್ ಮಾರ್ಗದ ಸಾಗರ 110/33 ಕೆ.ವಿ MUSS ನ 20 MVA ಪರಿವರ್ತಕ ವಿಫಲವಾಗಿದ್ದು ಇದನ್ನು ಸರಿಪಡಿಸಲು ಇನ್ನೂ 10-15ದಿನಗಳ ಕಾಲ ಬೇಕಾಗುತ್ತದೆ ಎಂದು ತಿಳಿದುಬರುತಿದೆ.
ಮೆಸ್ಕಾಂ ಹೊಸನಗರ ಶಾಖಾ ವ್ಯಾಪ್ತಿಯಲ್ಲಿ ಈಗ ಬೇರೆ ಬೇರೆ ಫೀಡರ್ ಗಳಿಂದ ವಿದ್ಯುತ್ ನೀಡಲಾಗಿದ್ದು ಈ ಮಾರ್ಗಗಳು ಓವರ್ ಲೋಡ್ ಆಗಿ ಲೋ ವೋಲ್ಟೇಜ್ ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಹಾಗೂ ಅತೀ ಅಗತ್ಯವಿದ್ದಲ್ಲಿ ಮಾತ್ರ ಕೃಷಿ ಪಂಪ್‌ಸೆಟ್ ಬಳಸಿ. ಕುಡಿಯುವ ನೀರಿನ ಪಂಪ್‌ಸೆಟ್ ಗೆ ವೋಲ್ಟೇಜ್ ತೊಂದರೆ ಆಗುತ್ತದೆ. ಆದ್ದರಿಂದ ಅನಗತ್ಯ ವಿದ್ಯುತ್ ಬಳಕೆ ಬೇಡ ಮಿತವಾಗಿ ವಿದ್ಯುತ್ ಬಳಸಿ ಸಹಕರಿಸಿ ಎಂದು ಹೊಸನಗರ ಮೆಸ್ಕಾಂ ಇಲಾಖೆ ಪ್ರಕಟಣೆ ಮೂಲಕ ಕೋರಿದೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.