ಹೊಸನಗರ

ಹೊಸನಗರ ; ದಸರಾ ಆಚರಣೆ ಜಮಾ ಖರ್ಚು ಮಂಡನೆ

HOSANAGARA ; ಈ ಬಾರಿಯ ನಾಡಹಬ್ಬ ದಸರಾ ತಾಲೂಕಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಸಂಪನ್ನಗೊಳ್ಳಲು ಸಾರ್ವಜನಿಕರ ಸಹಕಾರವೇ ಕಾರಣ ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಗುರುವಾರ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ದಸರಾ ಆಚರಣಾ ಸಮಿತಿ ಜಮಾ ಖರ್ಚು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ದಸರಾ ಆಚರಣೆ ಕುರಿತಾದ ಜಮಾ ಖರ್ಚು ಮಂಡಿಸಿದರು.

ಈ ಬಾರಿ ಒಟ್ಟಾರೆ 5,45,550 ರೂ. ಸಂಗ್ರಹವಾಗಿದ್ದು, 4,94,500 ರೂ. ವ್ಯಯವಾಗಿದೆ. ಚಂಡೆ, ರೋಡ್ ಆಕೇಷ್ಟ್ರಾ ಗೊಂಬೆ ಕುಣಿತ, ನಾದಸ್ವರ, ಡೊಳ್ಳು ಕುಣಿತ, ಹುಲಿ ಕುಣಿತ, ಭಜನೆ, ಪೇಟ, ದಸರಾ ಕ್ರೀಡಾಕೂಟದ ವಿಜೇತರಿಗೆ ಬಹುಮಾನ, ಪಟಾಕಿ, ಧ್ವನಿವರ್ಧಕ, ಹೂವು-ಹಾರ, ದೇವಾಲಯಕ್ಕೆ ಸುಣ್ಣ-ಬಣ್ಣ ಸೇರಿದಂತೆ ಇತರೆ ಕಾರ್ಯಗಳಿಗೆ ಹಣ ವ್ಯಯವಾಗಿ, 51,500 ರೂ. ಹೆಚ್ಚುವರಿ ಖರ್ಚಾಗಿದೆ ಎಂದು ಸಭೆಗೆ ತಿಳಿಸಿದರು. ಈ ಕುರಿತು ಸಾರ್ವಜನಿಕರಿಗೆ ಯಾವುದೇ ಮಾಹಿತಿ ಬೇಕಾದಲ್ಲಿ ತಹಶೀಲ್ದಾರ್ ಕಚೇರಿ ನಾಮಫಲಕ ವೀಕ್ಷಿಸುವಂತೆ ತಿಳಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ದಸರಾ ಯಶಸ್ವಿಗೆ ಕಾರಣೀಭೂತರಾದ ಸಾರ್ವಜನಿಕರಿಗೆ 2024-25ನೇ ಸಾಲಿನ ದಸರಾ ಆಚರಣೆ ಸಮಿತಿ ಅಧ್ಯಕ್ಷ ದುಮ್ಮ ವಿನಯ್ ಗೌಡ ಇದೇ ಸಂದರ್ಭದಲ್ಲಿ ಕೃತಜ್ಞತೆ ಸಮರ್ಪಿಸಿದರು.

ಈ ವೇಳೆ ನಾಡಹಬ್ಬ ಸಮಿತಿ ಸದಸ್ಯರಾದ ಶ್ರೀನಿವಾಸ ಕಾಮತ್, ಶ್ರೀಧರ ಉಡುಪ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜುನಾಥ್, ಪ್ರಮಯಖರಾದ ಜಯನಗರ ಗೋಪಿನಾಥ್, ಕಚ್ಚಿಗೆಬೈಲು ಸಾಧಿಕ್, ನಾಸೀರ್, ಉಬೇದ್ ಸಾಬ್,‌ ಬ್ರಹ್ಮೇಶ್ವರ ಸುಧೀರ್, ಖಜಾಂಚಿ ವರ್ಣೇಕರ್, ಕಸಬಾ ಶಿರಸ್ತೇದಾರ್ ಕಟ್ಟೆ ಮಂಜುನಾಥ್ ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]