ಹುಂಚದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಯಶಸ್ವಿ — 62 ಯೂನಿಟ್‌ ರಕ್ತ ಸಂಗ್ರಹ

Written by Koushik G K

Published on:

ಹುಂಚ : ಹುಂಚ ಗ್ರಾಮ ಪಂಚಾಯತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹುಂಚಾ ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 29ರಂದು ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ಬಹುತ್ ರಕ್ತದಾನ ಶಿಬಿರ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಒಟ್ಟು 62 ಯೂನಿಟ್‌ಗಳ ರಕ್ತ ಸಂಗ್ರಹಿಸಲಾಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಶಿಬಿರದಲ್ಲಿ ಸ್ಥಳೀಯ ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ಮಾನವೀಯತೆಯ ನಿಜವಾದ ಸಂದೇಶ ಸಾರಿದರು. ರಕ್ತದಾನದ ಮಹತ್ವವನ್ನು ಸಾರುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಶಿಬಿರವು ಮೆಗ್ಗಾನ್ ಬ್ಲಡ್ ಬ್ಯಾಂಕ್, ಶಿವಮೊಗ್ಗ ಇವರ ಸಹಯೋಗದಲ್ಲಿ ನಡೆದಿತು.

ಮಾನವೀಯತೆಗೂ ಸ್ಪಂದಿಸಿದ ಯುವಕರು

“ಒಬ್ಬ ರಕ್ತದಾತ ನೀಡುವ ರಕ್ತದಿಂದ ಮೂವರು ಜೀವಗಳು ಉಳಿಯಬಹುದು. ಈ ನಿಟ್ಟಿನಲ್ಲಿ ಹುಂಚಾ ಗ್ರಾಮವು ಸಾಮಾಜಿಕ ಬದ್ಧತೆಯ ಮಾದರಿಯಾಗಿದೆ” ಎಂದು ಸಂತೋಷ ವ್ಯಕ್ತಪಡಿಸಿದರು.

ಆಯೋಜಕರು:

ಈ ಶಿಬಿರವನ್ನು ಹುಂಚಾ ಗ್ರಾಮ ಪಂಚಾಯತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಹುಂಚಾ, ಹಾಗೂ ಮೆಗ್ಗಾನ್ ಬ್ಲಡ್ ಬ್ಯಾಂಕ್, ಶಿವಮೊಗ್ಗ ಇವರ ಸಹಯೋಗದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿದ ಯುವಕರು ಹಾಗೂ ಸಾರ್ವಜನಿಕರಿಗೆ ಧನ್ಯವಾದಗಳು. 62 ಯೂನಿಟ್‌ಗಳ ರಕ್ತ ಸಂಗ್ರಹವು ನಮ್ಮ ಸಮಾಜದ ಮಾನವೀಯತೆಯ ನಿಜವಾದ ಪ್ರತೀಕವಾಗಿದೆ” ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಗವದ್ಗೀತೆ ಬದುಕನ್ನೇ ಉಜ್ವಲಗೊಳಿಸುತ್ತದೆ ; ಜಗದ್ಗುರು ಗಂಗಾಧರೇಂದ್ರ ಸ್ವಾಮೀಜಿ

Leave a Comment