ರಿಪ್ಪನ್‌ಪೇಟೆ ; ಹೆಣ್ಣು ಮಕ್ಕಳ ಆರೋಗ್ಯದ ಸಮಸ್ಯೆಗಳು, ಋತುಚಕದ ವಿಳಂಬದ ಸಮಸ್ಯೆ, ಹಾರ್ಮೋನ್ ಬದಲಾವಣೆಗಳ ಕುರಿತು ವಿದ್ಯಾರ್ಥಿನಿಯರಲ್ಲಿ ಜಾಗೃತಿ ಅಗತ್ಯವೆಂದು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಆರ್.ಬಿ.ಎಸ್.ಕೆ.ಯ ತಜ್ಞೆ ಡಾ.ಸಜೀನಿ ಪಿ.ಶೆಟ್ಟಿ ತಿಳಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಐ.ಕ್ಯೂ.ಎ.ಸಿ.ಯುವ ರೆಡ್‌ಕ್ರಾಸ್ ಘಟಕ ಮಹಿಳಾ ಸಬಲೀಕರಣ ಕೋಶ ಮತ್ತು ಎನ್.ಎಸ್.ಎಸ್.ಘಟಕ ಹಾಗೂ ತಾಲ್ಲೂಕು ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯ ಮಾಹಿತಿ ಕಾರ್ಯಾಗಾರ ಮತ್ತು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾಹಿತಿ ನೀಡಿದರು.
ಈ ಮಾಹಿತಿ ಕಾರ್ಯಾಗಾರದಲ್ಲಿ ಮಹಿಳಾ ತಜ್ಞೆ ಡಾ.ಪುಷ್ಪ ಎಸ್.ಶೆಟ್ಟಿ ಭಾಗವಹಿಸಿ ಮಾತನಾಡಿ, ಹೆಣ್ಣು ಮಕ್ಕಳ ದೈಹಿಕ ಬದಲಾವಣೆ, ಋತುಚಕ್ರದ ಬಗ್ಗೆ ಮಾನಸಿಕ ಬದಲಾವಣೆಗಳ ಬಗ್ಗೆ ವಿವರಿಸಿ, ಹೆಣ್ಣು ಮಕ್ಕಳು ಹದಿಹರೆಯದ ವಯಸ್ಸಿನಲ್ಲಿ ಯಾವ ರೀತಿಯ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಅಂದ ಚಂದಕ್ಕಿಂತ ವೈಯಕ್ತಿಕ ಮತ್ತು ದೈಹಿಕ ಆರೋಗ್ಯ ಮುಖ್ಯ .ಹೆಣ್ಣು ಮಕ್ಕಳು ಯಾವುದೇ ಬ್ಲಾಕ್ ಮೇಲ್‌ಗೆ ಭಯ ಪಡದೆ ಅವುಗಳನ್ನು ದಿಟ್ಟ ತನದಿಂದ ಎದುರಿಸಬೇಕು ಮತ್ತು ಹೆಣ್ಣು ಮಕ್ಕಳ ನಡುವಳಿಕೆಯ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.
ಕೋಡೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎವಲಿನ್ ಎಂ.ಎಂ.ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿ, Menstrual Cup ಬಳಕೆಯ ಬಗ್ಗೆ ಮಾಹಿತಿ ನೀಡಿದರು.
ಶಿಬಿರದ ಅಧ್ಯಕ್ಷತೆಯನ್ನು ಸರ್ಕಾರಿ ಪದವಿ ಕಾಲೇಜ್ ಪ್ರಾಚಾರ್ಯ ಪ್ರೋ.ಹೆಚ್.ಎಸ್.ವಿರೂಪಾಕ್ಷಪ್ಪ ವಹಿಸಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಬಿ.ಎಲ್.ರಾಜು, ಸಿಡಿಸಿ ಸದಸ್ಯರಾದ ಮಂಜುನಾಥ ಕಾಮತ್, ಪಿಯೂಸ್ ರೋಡ್ರಿಗಸ್, ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ಡಾ.ರಜನಿಕಾಂತ್, ಮಹಿಳಾ ಸಬಲೀಕರಣ ಕೋಶ ಸಮಿತಿಯ ಸಂಚಾಲಕರಾದ ಡಾ.ಟಿ.ವಿದ್ಯಾ ಟಿ.ಪವಾರ್, ಡಾ.ಸೌಮ್ಯ ಜಿ. ಹಾಗೂ ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಡಾ.ಕುಮಾರ್ ಎಂ. ಮತ್ತು ನಯನ ಹೆಚ್.ಇನ್ನಿತರರು ಹಾಜರಿದ್ದರು.