ಆರೋಗ್ಯ ಅನ್ನುವುದು ಶ್ರೀಮಂತರಿಗೆ ಮಾತ್ರಾನಾ ?

Written by malnadtimes.com

Published on:

RIPPONPETE | ಬಡ ಮತ್ತು ಮಧ್ಯಮ ವರ್ಗದ ಕೂಲಿ ಕಾರ್ಮಿಕರು ಆರೋಗ್ಯವಾಗಿರುವಂತಹ ನಿತ್ಯದ ಆಹಾರ ಪದಾರ್ಥಗಳು ಮತ್ತು ಬಳಸುವ ಅಡುಗೆ ಎಣ್ಣೆ ಬೆಲೆಗಳನ್ನು ಹೆಚ್ಚಿಸಿ ಸರ್ಕಾರಗಳು ಬಡವರ ಆರೋಗ್ಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮಲ್ಲಾಪುರ ಗ್ರಾಮದ ಗೃಹಣಿ ಎಂ.ಎನ್. ಸಂಗೀತಾ ತೀವ್ರ ಅಸಮದಾನ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೊಬ್ಬ ಮಧ್ಯಮ ವರ್ಗದ ಸಾಮಾನ್ಯ ಗೃಹಣಿಯಾಗಿದ್ದು ನನ್ನ ಕೆಲಸ ಪ್ರತಿದಿನ ನನ್ನ ಕುಟುಂಬವನ್ನು ಆರೋಗ್ಯ ಮತ್ತು ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು. ಅದಕ್ಕಾಗಿ ನಾನು ಪ್ರತಿ ನಿಮಿಷ ಶ್ರಮಿಸುತ್ತಿರುತ್ತೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಉತ್ತರವೇ ಸಿಗದ ಪ್ರಶ್ನೆಗಳು ಕಾಡುತ್ತಿರುತ್ತವೆ. ಕುಟುಂಬದಲ್ಲಿರುವವರಿಗೆ ಒಳ್ಳೆಯ ಆರೋಗ್ಯ ಸಿಗಬೇಕಾದರೆ. ಒಳ್ಳೆಯ ಆಹಾರ ನನ್ನ ಪ್ರಥಮ ಆದ್ಯತೆ. ಇದನ್ನು ಆಯುರ್ವೇದದಲ್ಲೂ ಉಲ್ಲೇಖಿಸಿದ್ದಾರೆ. ಆದ್ದರಿಂದ ಹೊರಗಿನ ತಿಂಡಿ ತಿನಸುಗಳನ್ನು ಮನೆಯಲ್ಲಿ ಶುದ್ಧವಾಗಿ ಸಿದ್ದಪಡಿಸುತ್ತಾ ಮಕ್ಕಳಿಗೆ ಇಷ್ಟವಾಗುವ ತಿನಿಸುಗಳನ್ನು ತಯಾರಿಸಿ ಕೊಡುತ್ತೇನೆ. ಆದರೆ ಯಾವ ಅಡುಗೆ ಎಣ್ಣೆ ಬಳಸಿದರೆ ಉತ್ತಮ ಎಂದೆಲ್ಲ. ಆದಕ್ಕಾಗಿ ಈಗ ನಾನು ರೀಫೈಂಡ್ ಆಯಿಲ್ ಬಿಟ್ಟು ಕಡಲೆ ಬೀಜದ ಎಣ್ಣೆಗೆ ಬದಲಾಗಿದ್ದೇನೆ. ಹೀಗೆ ಬದಲಾಗುತ್ತಾ ಹೋದಂತೆಲ್ಲಾ ಅವುಗಳ ಬೆಲೆಯಲ್ಲೂ ತುಂಬಾ ವ್ಯತ್ಯಾಸಗಳು ಸಿಗುತ್ತವೆ. ಈ ಎಣ್ಣೆ ಬೆಲೆಗಳಲ್ಲಿ 180 ರಿಂದ 350 ರೂ., ಉಪ್ಪು 25 ರೂ., ಸಕ್ಕರೆ 50 ಬೆಲ್ಲ 65 ರೂ. ಹೀಗೆ ಬೆಲೆ ಏರಿಕೆಯಿಂದಾಗಿ ಬಡವರು ಬದುಕು ದುಸ್ಥರವಾಗಿದೆ.

ಇದು ಕೇವಲ ದಿನಸಿ ಪದಾರ್ಥಗಳಿಗೆ ಸೀಮಿತವಲ್ಲ ಹಣ್ಣು ತರಕಾರಿ ಸೊಪ್ಪುಗಳದ್ದು ಇದೇ ಪರಿಸ್ಥಿತಿ ಆರ್ಗಾನಿಕ್ ಆಗಿ ಬೆಳದಿದ್ದು ಜಾಸ್ತಿ ಬೆಲೆ ಕಲಬೆರಕೆ ಆಗಿರೋದು ಕಮ್ಮಿ ಬೆಲೆ ಈಗ ನನ್ನ ಸಮಸ್ಯೆ ಏನೆಂದರೆ ಹೆಲ್ದಿಫುಡ್‌ನ ಖರೀದಿಸಲು ಹೋದರೆ ಹೆಚ್ಚು ಬೆಲೆ ನಮ್ಮ ತಿಂಗಳ ಬಜೆಟ್ ಮೀರಿ ಹೋಗುವಂತದ್ದು. ಬೆಲೆ ಜಾಸ್ತಿ ಅಂತ ಕೈ ಬಿಟ್ಟರೆ ಆರೋಗ್ಯ ಸಮಸ್ಯೆ ಕಾಡುವುದೇನೋ ಅನ್ನುವ ಭಯ.

ಈಗ ನೀವ್ ಹೇಳಬಹುದು ಇನ್ಶುರೆನ್ಸ್ ಇದೆಯಲ್ಲ ಅಂತ ದುಡಿದ ದುಡ್ಡೆಲ್ಲಾ ಇನ್ಶುರೆನ್ಸ್ ಹಾಕಿದರೆ ಹೇಗೆ ? ಇರಲಿ ಮಾಡಿಸೋಣ ಅಂತ ಇನ್ಶುರೆನ್ಸ್ ಮಾಡಿಸಿದರೆ ಕಾಯಿಲೆ ಬಂದಾಗ ಕ್ಲೈಮ್ ಮಾಡುತ್ತಾರೆ. ಹೊರತು ಖಾಯಿಲೆ ಅನುಭವಿಸೋರು ನಾವೇ ತಾನೇ. ಇದನ್ನೆಲ್ಲಾ ನೋಡಿದಾಗ ನನಗೆ ಕಾಡುವ ಕೊನೆಯ ಪ್ರಶ್ನೆ ಆರೋಗ್ಯ ಅನ್ನುವುದು ಶ್ರೀಮಂತರಿಗೆ ಮಾತ್ರಾನಾ…….?

ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಆಹಾರದಲ್ಲಾಗುವ ಕಲಬೆರಕೆಯನ್ನು ನಿಲ್ಲಿಸಬೇಕು ಮತ್ತು ಹೆಲ್ದಿ ಓಪ್ಪನ್ ಸಾಮಾಗ್ರಿಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದರೆ ಅವುಗಳೆಲ್ಲ ಬಡವರಿಗೂ ಕೂಲಿಕಾರ್ಮಿಕರಿಗೂ ದೊರೆಯುವ ಮೂಲಕ ಉತ್ತಮ ಆರೋಗ್ಯದಾಯಕ ಆಹಾರವನ್ನು ಕೊಂಡುಕೊಳ್ಳಲು ಸಹಕಾರಿಯಾಗುವುದೆಂದರು.

Leave a Comment