Shivamogga

ಶಿವಮೊಗ್ಗ ; ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಜಗದೀಶ್ ಎನ್.ಕೆ. ಆಯ್ಕೆ

ಶಿವಮೊಗ್ಗ ; ಜಿಲ್ಲೆಯ ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಜಗದೀಶ್ ಎನ್.ಕೆ. ಆಯ್ಕೆಯಾಗಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಈ ಹಿಂದೆ ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದ್ದ ಎನ್.ಕೆ.ಜಗದೀಶ್ ಅವರು ಶಿವಮೊಗ್ಗ ಜಿಲ್ಲಾ ಬಿಜೆಪಿಯ ನೂತನ‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ರುದ್ರೇಗೌಡ ಆಯ್ಕೆಯಾಗಿದ್ದಾರೆ.

ರಾಜ್ಯ ಚುನಾವಣಾಧಿಕಾರಿ ಆದೇಶದ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿ ಸಿ.ಆರ್.ಪ್ರೇಮ್ ಕುಮಾರ್ ಅವರು, ಚುನಾವಣಾ ಪ್ರಕ್ರಿಯೆ ನಡೆಸಿ ಜಿಲ್ಲಾ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರತಿನಿಧಿಯ ಆಯ್ಕೆಯನ್ನು ಘೋಷಿಸಿದ್ದಾರೆ.

ಅದೇ ರೀತಿ ಜಿಲ್ಲಾ ಬಿಜೆಪಿಯ 10 ಮಂಡಲಗಳ ಅಧ್ಯಕ್ಷರನ್ನು ಸಹ ನೇಮಕ ಮಾಡಲಾಗಿದೆ.

  • ತೀರ್ಥಹಳ್ಳಿ – ನವೀನ್ ಹೆದ್ದೂರು
  • ಹೊಸನಗರ – ಕೆ.ವಿ.ಸುಬ್ರಹ್ಮಣ್ಯ
  • ಸಾಗರ ನಗರ – ಕೆ.ಆರ್.ಗಣೇಶ್ ಪ್ರಸಾದ್
  • ಸಾಗರ ಗ್ರಾಮಾಂತರ – ದೇವೇಂದ್ರ ಯಲಕುಂದ್ಲಿ
  • ಸೊರಬ – ಪ್ರಕಾಶ್ ಅಗಸನಹಳ್ಳಿ
  • ಶಿಕಾರಿಪುರ – ಹನುಮಂತಪ್ಪ.ಎಸ್
  • ಭದ್ರಾವತಿ – ಜಿ.ಧರ್ಮಪ್ರಸಾದ್
  • ಹೊಳೆಹೊನ್ನೂರು – ಮಲ್ಲೇಶಪ್ಪ.ಎಂ.
  • ಶಿವಮೊಗ್ಗ ಗ್ರಾಮಾಂತರ – ಎಸ್.ಈ.ಸುರೇಶ್
  • ಶಿವಮೊಗ್ಗ ನಗರ – ಡಿ.ಮೋಹನ್ ರೆಡ್ಡಿ

ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>