ಜಂಬಳ್ಳಿ ಬಂಡಿಯಮ್ಮ ದೇವಿಯ ಪ್ರತಿಷ್ಟಾಪನಾ ಪೂಜೆ

Written by Mahesha Hindlemane

Published on:

RIPPONPETE ; ಬೇಡಿ ಬರುವ ಭಕ್ತರ  ಬೇಡಿಕೆಯನ್ನು ಈಡೇರಿಸುವ ಬಂಡಿಯಮ್ಮ ದೇವಿಯ ಪ್ರತಿಷ್ಟಾಪನಾ ಪೂಜೆ ಶ್ರದ್ದಾಭಕ್ತಿಯಿಂದ ಸಂಭ್ರಮದೊಂದಿಗೆ ನೆರವೇರಿತು.

WhatsApp Group Join Now
Telegram Group Join Now
Instagram Group Join Now

ದೀಪಾವಳಿ ಹಬ್ಬದ ವರ್ಷತೊಡಕಿನ ದಿನದಂದು ಜಂಬಳ್ಳಿಯಲ್ಲಿ ಪುರಾತನ ಕಾಲದ ರಥದ ಕಲ್ಲಿನ ಚಕ್ರದ ಬಂಡಿಯನ್ನು ಬಾಳೆಕಂದು, ಕಬ್ಬಿನ ಸುಳಿ, ತಳಿರು ತೋರಣದೊಂದಿಗೆ ಶೃಂಗರಿಸಿ ಅದರಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಟಾಪಿಸಿ ಚಿನ್ನದ ಮಾಂಗಲ್ಯ ಸರವನ್ನು ಹಾಕಿ ಹೂವಿನ ಅಲಂಕಾರದೊಂದಿಗೆ ಹುಂಚದ ವೇ.ವಿ.ಶಾಂತಯ್ಯಶಾಸ್ತ್ರಿಯವರ ಪುರೋಹಿತ್ವದಲ್ಲಿ ಬಂಡಿಯಮ್ಮನ ವಿಶೇಷ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಜಂಬಳ್ಳಿಯ ಜೆ.ಎಂ.ಶಾಂತಕುಮಾರ, ಸಹನ ಶಾಂತಕುಮಾರ್, ಗಾಯಿತ್ರಿ ಮುರುಗೇಂದ್ರಪ್ಪಗೌಡ, ನಾಗಭೂಷಣಗೌಡ, ಜೆ.ಜಿ.ಸದಾನಂದ, ಕಮಲಾಕ್ಷ, ನಟರಾಜ, ಜಯಪ್ರಕಾಶ, ಟೂಕಪ್ಪ, ಇಂದ್ರಮ್ಮ, ವಸಂತಮ್ಮ, ಮೈತ್ರಿ ಕಮಲಾಕ್ಷ, ಮಿತ್ರಸದಾನಂದ, ಚಂದ್ರಮಾಲ, ಹುಗುಡಿ ರಾಜು, ಸಂಪಳ್ಳಿ ಜಯಪ್ಪಗೌಡ, ಅರ್ಚನ, ರೇಣುಕಾ ಸದಾನಂದ, ರೇಖಾನಟರಾಜ್, ಈರು(ವೀರು) ಇದ್ದರು.


ಬಿ.ವೈ.ವಿಜಯೇಂದ್ರರ ಹುಟ್ಟುಹಬ್ಬಕ್ಕೆ ಕೋಡೂರು ಶಂಕರೇಶ್ವರ ಸ್ವಾಮಿಗೆ ವಿಶೇಷ ಪೂಜೆ

RIPPONPETE ; ರಾಜ್ಯ ಬಿಜೆಪಿ ಆಧ್ಯಕ್ಷ ಹಾಗೂ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ವೈ.ವಿಜಯೇಂದ್ರರವರ ಜನ್ಮದಿನದ ಅಂಗವಾಗಿ ಕೋಡೂರು ಶಂಕರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದೀಪೋತ್ಸವವನ್ನು ಬಿಜೆಪಿ ಶಿವಮೊಗ್ಗ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಅಬ್ಬಿ ಕಿರಣ್ ಬಿ.ಇ. ಕುಟುಂಬದವರು ಆಚರಿಸಿ ಸಂಭ್ರಮಿಸಿದರು.

ವೈ.ಎಂ.ಶ್ರೀದೇವಿ ಮತ್ತು ಕೋಡೂರು ಗ್ರಾಮಸ್ಥರು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Leave a Comment