ರಿಪ್ಪನ್‌ಪೇಟೆ ; ವಿದ್ಯಾವಂತ ಯುವಕ ಯುವತಿಯರು ಸರ್ಕಾರಿ ಉದ್ಯೋಗವನ್ನು ಅವಲಂಭಿಸದೆ ಸ್ವಾವಲಂಬಿ ಉದ್ಯೋಗದಿಂದ ಸಾಕಷ್ಟು ಲಾಭಗಳಿಸುವ ಮೂಲಕ ಆರ್ಥಿಕ ಸ್ವಾವಲಂಬನೆ ಹೊಂದಲು ಸಾಧ್ಯವೆಂದು ಜನಶಿಕ್ಷಣ ಸಂಸ್ಥೆಯ ನಿರ್ದೇಶಕಿ ಬಿ.ವೈ. ಅರುಣಾದೇವಿ ಕರೆ ನೀಡಿದರು.
ರಿಪ್ಪನ್‌ಪೇಟೆಯ ವೀರ ಸಾರ್ವಕರ್ ರಸ್ತೆಯಲ್ಲಿರುವ ಶ್ರೀ ದುರ್ಗಾ ಬ್ಯೂಟಿ ಪಾರ್ಲರ್‌ನಲ್ಲಿ ಆಯೋಜಿಸಲಾದ ಕೌಶಲ್ಯಾಭಿವೃದ್ದಿ ಯೋಜನೆಯಡಿ ಮಹಿಳೆಯರಿಗೆ ಹೊಲಿಗೆ ತರಬೇತಿ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕೇಂದ್ರ ಸರ್ಕಾರ ಕೌಶಲ್ಯಾಭಿವೃದ್ದಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವಕ ಯುವತಿಯರಿಗಾಗಿ ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗಿದ್ದು ಈ ಯೋಜನೆಯಿಂದ ಶ್ರಮಿಕರಿಗಾಗಿ ವೃತ್ತಿ ಕೌಶಲ್ಯ ತರಬೇತಿಯಲ್ಲಿ ಮಹಿಳೆಯರು ಶುಭ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಅಲಂಕಾರ ಮಾಡುವುದು ಮತ್ತು ಹೊಲಿಗೆ ತರಬೇತಿ ಸೇರಿದಂತೆ 70ಕ್ಕೂ ಅಧಿಕ ಬಗೆಯಲ್ಲಿ ತರಬೇತಿಗಳಲ್ಲಿವೆ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಶ್ರೀ ಸಾಮಾನ್ಯರಿಗೂ ತಲುಪುವಂತಾಗಬೇಕು ಎಂದ ಅವರು, ಮುದ್ರಾ ಯೋಜನೆ ಮತ್ತು ಶ್ರಮಿಕ ಕೌಶಲ್ಯಗಳ ಕುರಿತು ಸಾಕಷ್ಟು ಯೋಜನೆಗಳಿವೆ ಇದರ ತರಬೇತಿ ಪಡೆದು ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಸಾಲಸೌಲಭ್ಯವನ್ನು ಪಡೆದು ಸಾಧ್ಯವೆಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಕಗ್ಗಲಿ ಲಿಂಗಪ್ಪ, ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ರಾಘವೇಂದ್ರ, ಜಯಂತಿ ಅಶೋಕ, ಜನಶಿಕ್ಷಣ ಸಂಸ್ಥೆಯ ಅನುಷ್ಟಾನಾಧಿಕಾರಿ ಸುಮನಾ ಮತ್ತು ಸಹಾಯಕ ಅನುಷ್ಟಾನಾಧಿಕಾರಿ ಅಧಿಕಾರಿ ಶೋಭಾ ಇನ್ನಿತರರು ಪಾಲ್ಗೊಂಡಿದ್ದರು.
ತರಬೇತಿ ಶಿಬಿರದಲ್ಲಿ ಸುಮಾರು 25ಕ್ಕೂ ಅಧಿಕ ಮಹಿಳೆಯರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.