ಸಾವಿನಲ್ಲೂ ಸಾರ್ಥಕತೆ ಮೆರೆದ ಪತ್ರಕರ್ತ ಎಸ್.ಜಿ.ರಂಗನಾಥ !

Written by Mahesha Hindlemane

Published on:

RIPPONPETE | ಭಾನುವಾರ ಸಂಜೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಹಿರಿಯ ಪತ್ರಕರ್ತ ಹಾಗೂ ಸಹಕಾರಿ ಧುರೀಣ ಅರಸಾಳು ಎಸ್.ಜಿ.ರಂಗನಾಥ ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ನಾಲ್ಕು ಐದು ದಶಕಗಳ ಕಾಲ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡು ಹತ್ತು ಹಲವು ಸಹಕಾರ ಸಂಘದಲ್ಲಿನ ಲೋಪದೋಷಗಳನ್ನು ಪತ್ತೆ ಹಚ್ಚಿ ರೈತ ಸದಸ್ಯರಿಗೆ ಸರ್ಕಾರದಿಂದ ದೊರೆಯುವಂತಹ ಹಲವು ಸೌಲಭ್ಯಗಳನ್ನು ಕೊಡಿಸುವ ಕಾರ್ಯದಲ್ಲಿ ಸದಾ ಶ್ರಮಿಸುತ್ತಿದ್ದು ತಮ್ಮ 93 ವಸಂತ ಕಾಲದಲ್ಲಿಯೂ ಯಾರ ಬಳಿ ಕೈ ಚಾಚದೇ ಸ್ವಾವಲಂಬಿ ಬದುಕು ಕಟ್ಟಿಕೊಂಡು ಸರಳ ಜೀವನ ನಡೆಸಿದ ವ್ಯಕ್ತಿತ್ವ ಎಸ್.ಜಿ.ರಂಗನಾಥರದು.

ಆಡಂಬರ, ಐಶಾರಾಮಿ ಜೀವನ ನಡೆಸುವ ಬದಲು ಸರಳವಾಗಿ ಇನ್ನೊಬ್ಬರಿಗೆ ಮಾದರಿಯಾಗಿ ಬದುಕಬೇಕು ಎಂಬ ಧ್ಯೇಯವಾಕ್ಯದೊಂದಿಗೆ ಅಪ್ಪಟ ಗಾಂಧಿಯಂತಾಗಿ ಖಾದಿ ಬಟ್ಟೆ ಹಾಕಿಕೊಂಡು ಸದಾ ಗ್ರಾಮೀಣ ಬಡ ರೈತಾಪಿ ವರ್ಗದದವರ ಹಿತಚಿಂತನೆಯಲ್ಲಿ ಕಡಿಮೆ ಖರ್ಚಿನಲ್ಲಿ ರಾಜಧಾನಿಗೆ ಹೋಗಿ ಬರುವ ರೈಲ್ವೆಗೆ ಜನಪ್ರತಿನಿಧಿಗಳಿಗೆ ಪತ್ರವನ್ನು ಬರೆಯುವುದರ ಮೂಲಕ ಎಚ್ಚರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡವರು.

ಕಣ್ಣುಗಳು ಮಣ್ಣಾಗುವ ಬದಲು ನನ್ನ ಕಣ್ಣುಗಳು ಇನ್ನೊಬ್ಬರಿಗೆ ಬೆಳಕಾಗುವಂತಾಗಲಿ ಎಂಬ ಧ್ಯೇಯದೊಂದಿಗೆ ತಮ್ಮ ಮರಣ ನಂತರ ಕಣ್ಣುಗಳನ್ನು ದಾನವಾಗಿ ಕೊಡುವುದರೊಂದಿಗೆ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

Read More

Karnataka Rain |  ಇನ್ನೆರಡು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ !

Malenadu Rain | ಕಳೆದ 24 ಗಂಟೆಗಳಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆ ಸುರಿದಿದೆ ?

ಹಿರಿಯ ಪತ್ರಕರ್ತ, ಸಹಕಾರಿ ಧುರೀಣ ಎಸ್.ಜಿ.ರಂಗನಾಥ ಇನ್ನಿಲ್ಲ !

Leave a Comment