RIPPONPETE ; ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದ 39ನೇ ವಾರ್ಷಿಕೋತ್ಸವ ಹಾಗೂ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡದ ಕಹಳೆ ಮೊಳಗಿತು.
ತಾಯಿ ಭುವನೇಶ್ವರಿ ದೇವಿಯ ಅಲಂಕೃತ ಭಾವಚಿತ್ರದ ಮೆರವಣಿಗೆ ಮತ್ತು ಶಾಲಾ, ಕಾಲೇಜ್ ವಿದ್ಯಾರ್ಥಿಗಳ ಚಂಡೆಯ ತಾಳಮದ್ದಲೆಯ ಶಬ್ದಕ್ಕೆ, ಪುಟಾಣಿ ಮಕ್ಕಳ ವಿವಿಧ ವೇಷಭೂಷಣ ಕನ್ನಡಾಭಿಮಾನಿಗಳನ್ನು ಆಕರ್ಷಿಸಿತು.
ಗಣಪತಿ ದೇವಸ್ಥಾನದ ಬಳಿ ರಿಪ್ಪನ್‌ಪೇಟೆ ನಾಡಕಛೇರಿಯ ರೆವಿನ್ಯೂ ಇನ್ಸ್‌ಪೆಕ್ಟರ್ ಸೈಯದ್ ಆಪ್ರೋಜ್ ಕನ್ನಡ ಧ್ವಜವನ್ನು ಎತ್ತಿಹಿಡಿಯುವ ಮೂಲಕ ಮೆರವಣಿಗಗೆ ಚಾಲನೆ ನೀಡಿದರು.
ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಶಿವಮೊಗ್ಗ ರಸ್ತೆಯಿಂದ ಹೊರಟ ಕನ್ನಡ ಭುವನೇಶ್ವರಿ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಕನ್ನಡ ಪರಘೋಷಣೆ ಮುಗಿಲು ಮುಟ್ಟುವಂತೆ ಇದ್ದು ಮೆರವಣಿಗೆಯಲ್ಲಿ ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ, ಪ್ರಧಾನಕಾರ್ಯದರ್ಶಿ ಪಿ.ಸುಧೀರ್, ಪಿ.ಎಸ್.ಐ ಎಸ್.ಪಿ.ಪ್ರವೀಣ್‌ಕುಮಾರ್, ಎಂ.ಬಿ. ಮಂಜುನಾಥ, ಎಂ.ಸುರೇಶ್ ಸಿಂಗ್, ರಾಮಚಂದ್ರ ಬಳೆಗಾರ್, ನಾಗರತ್ನ ದೇವರಾಜ್, ಈಶ್ವರಶೆಟ್ಟಿ, ಪದ್ಮಸುರೇಶ್, ಲೀಲಾಶಂಕರ್, ಶೈಲಾ ಆರ್,ಪ್ರಭು, ರೇಖಾರವಿ, ಉಮಾಸುರೇಶ್, ಗೀತಾಆಣ್ಣಪ್ಪ, ಲಕ್ಷ್ಮಿ ಶ್ರೀನಿವಾಸ್ ಆಚಾರ್, ಸೀತಾರಾಜಪ್ಪ, ಗೀತಾಕರಿಬಸಪ್ಪ, ಅಶ್ವಿನಿ, ರಾಜುಭಂಡಾರಿ, ಹೆಚ್.ಸಿ.ಪರಶುರಾಮ, ಸೋಮಣ್ಣ, ನರಸಿಂಹ, ಮುರುಳೀಧರ, ಪಿ.ರಮೇಶ್, ನವೀನ, ಆಶಾ ಬಸವರಾಜ, ಇನ್ನಿತರಿದ್ದರು.
ಕನ್ನಡಾಭಿಮಾನ ಹೆಚ್ಚಿಸಿಕೊಂಡಲ್ಲಿ ಭಾಷೆಯ ಉಳಿವು :
ಕನ್ನಡ ಭಾಷೆಯನ್ನು ತಪ್ಪಿಲ್ಲದೇ ಮಾತನಾಡುವುದು ಹಾಗೂ ಬರೆಯುವುದನ್ನು ಕಲಿಯುವ ಮೂಲಕ ಭಾಷೆ ಮೇಲೆ ಅಭಿಮಾನ ಹೆಚ್ಚಿಸಿಕೊಂಡರೆ ಮಾತ್ರ ಕನ್ನಡ ಭಾಷೆ ಉಳಿಸಲು ಸಾಧ್ಯವಿದೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಪಿ.ಪ್ರವೀಣ್ ಕುಮಾರ್ ಹೇಳಿದರು
ರಿಪ್ಪನ್‌ಪೇಟೆಯ ಕಲಾ ಕೌಸ್ತುಭ ಕನ್ನಡ ಸಂಘದವರು ಭೂಪಾಳಂ ಚಂದ್ರಶೇಖರಯ್ಯ ಸಭಾ ಭವನದಲ್ಲಿ ಆಯೋಜಿಸಲಾದ 39ನೇ ವಾರ್ಷಿಕೋತ್ಸವ ಹಾಗೂ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಆಧ್ಯಕ್ಷತೆಯನ್ನು ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ ವಹಿಸಿದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜ್ ಉಪನ್ಯಾಸಕಿ ಗೋಪಮ್ಮ ಉಪನ್ಯಾಸ ನೀಡಿ, ನಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಮಾತೃಭಾಷೆಯಲ್ಲಷ್ಟೆ ಸಾಧ್ಯ. ಶಾಲೆಗಳಲ್ಲಿ ಕನ್ನಡಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಕನ್ನಡ ಮನೆ ಮನದ ಭಾಷೆಯಾಗಿ ಬೆಳೆಸುವಂತಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ರೆವಿನ್ಯೂ ಇನ್ಸ್‌ಪೆಕ್ಟರ್ ಸೈಯದ್ ಆಪ್ರೋಜ್, ಗ್ರಾಮ ಪಂಚಾಯ್ತಿ ಸದಸ್ಯರಾದ ಮಂಜುಳಾ, ಮಹಾಲಕ್ಷ್ಮಿ, ದೀಪಾ, ಅಶ್ವಿನಿ, ದಾನಮ್ಮ, ವನಮಾಲ, ಜಿ.ಡಿ.ಮಲ್ಲಿಕಾರ್ಜುನ ಇದ್ದರು.
ನಾಗರತ್ನ ದೇವರಾಜ್ ಸ್ವಾಗತಿಸಿದರು. ಸುರೇಶ್‌ಸಿಂಗ್ ನಿರೂಪಿಸಿದರು. ಉಮಾಸುರೇಶ್ ವಂದಿಸಿದರು.
ಜಪಾನ್‌ನಿಂದ ಮರಳಿದ ಆರಗ ಜ್ಞಾನೇಂದ್ರರಿಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ
RIPPONPETE ; ಜಪಾನ್ ದೇಶದವರು ಕೊಡಮಾಡಿದ ಅತ್ಯುತ್ತಮ ಪ್ರಶಸ್ತಿಗೆ ಭಾಜನರಾಗಿದ್ದ ಮಾಜಿ ಸಚಿವ ಹಾಲಿ ಶಾಸಕ ಆರಗ ಜ್ಞಾನೇಂದ್ರ ಇಂದು ಮರಳುತ್ತಿದ್ದಂತೆ ರಿಪ್ಪನ್‌ಪೇಟೆಯಲ್ಲಿ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿ ಶಾಲು, ಹಾರ ಹಾಕಿ ಅಭಿನಂದಿಸಿದರು.
ಕಲಾಕೌಸ್ತೂಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ, ಪಿ.ಸುಧೀರ್, ಕೆ.ವಿ.ಲಿಂಗಪ್ಪ ಕಗ್ಗಲಿ, ರಾಮಚಂದ್ರ ಬಳೆಗಾರ್, ಟಿ.ಆರ್.ಕೃಷ್ಣಪ್ಪ, ಪತ್ರಕರ್ತ ಕೆ.ಎಂ.ಬಸವರಾಜ್, ಹೇಮಚಂದ್ರ ಜೈನ್, ಶೋಭಾ ಹೇಮಚಂದ್ರ ಜೈನ್, ಆನಂದಣ್ಣ ಇನ್ನಿತರರು ಹಾಜರಿದ್ದರು.