Karnataka Rain | ಬೆಳೆಗೆ ಜೀವ ಕಳೆ ತಂದ ಮಳೆ, ಸಂತಸದಲ್ಲಿ ರೈತಾಪಿ ವರ್ಗ

Written by malnadtimes.com

Published on:

Karanataka Rain | ಇಂದು ಬೆಳಗ್ಗೆಯಿಂದ ಶಿವಮೊಗ್ಗ ಜಿಲ್ಲಾದ್ಯಂತ ಜೋರು ಮಳೆಯಾಗುತ್ತಿದ್ದು ಮಳೆಗಾಗಿ ಆಗಸದ ಕಡೆ ನೋಡುತ್ತಿದ್ದ ರೈತಾಪಿ ವರ್ಗದಲ್ಲಿ ಮಂದಹಾಸ ಮೂಡಿಸಿದೆ.

WhatsApp Group Join Now
Telegram Group Join Now
Instagram Group Join Now

ಇನ್ನೂ ಹೈನುಗಾರಿಕೆ, ಕೃಷಿ ಬಳಕೆಗೆ ಹಾಗೂ ಕುಡಿಯುವ ನೀರಿಲ್ಲದೆ ಪರಿತಪಿಸುತ್ತಿದ್ದ ಜನ ನಿಟ್ಟುಸಿರು ಬಿಡುವಂತಾಗಿದೆ.

ಕಳೆದ 15 ದಿನಗಳ ಹಿಂದೆ ಗುಡುಗು ಸಿಡಿಲಾರ್ಭಟದಿಂದ ಬಂದ ಮಳೆಯಿಂದಾಗಿ ಒಣ ಹೋಗಿದ್ದ ಅಡಿಕೆ ತೋಟ, ಶುಂಠಿ ಬೇಸಿಗೆ ಭತ್ತದ ಬೆಳೆ, ಅಂತರ್ಜಲ ಇಲ್ಲದೆ ತಳ ಕಂಡ ಬೋರ್‌ವೆಲ್, ತೆರೆದ ಬಾವಿಗಳಲ್ಲಿ ನೀರು ತುಂಬಿ ರೈತರಲ್ಲಿ ಹರ್ಷ ಮೂಡುವಂತೆ ಮಾಡಿದೆ.

Karnataka Rain
Karnataka Rain

ಕಳೆದ ವರ್ಷದ ಆಗಸ್ಟ್ – ಸೆಪ್ಟಂಬರ್ ತಿಂಗಳಿಂದ ಮಳೆಯಿಲ್ಲದೆ ಭತ್ತದ ಬೆಳೆ, ಅಡಿಕೆ, ಮುಸುಕಿನಜೋಳ, ಬಾಳೆ, ಕಬ್ಬು, ಕಾಳುಮೆಣಸು ಸೇರಿದಂತೆ ಇನ್ನಿತರ ಬೆಳೆ ಕೈಗೆ ಸಿಗುತ್ತದೋ ಇಲ್ಲವೋ ಎಂಬ ಚಿಂತೆಯಲ್ಲಿ ಅಲ್ಪಸ್ವಲ್ಪ ಬಂದ ಬೆಳೆಯನ್ನು ಕಟಾವು ಮಾಡಿಕೊಂಡು ರೈತರು ಬೆಲೆ ಇಲ್ಲದೆ ಸಾಕಷ್ಟು ಸಂಕಷ್ಟ ಸ್ಥಿತಿ ಎದುರಿಸುವಂತಾಗಿದ್ದು ಬೇಸಿಗೆಯ ರಣ ಬಿಸಿಲಿನಿಂದಾಗಿ ಬೆಳೆ ಉಳಿಸಿಕೊಳ್ಳುವ ಕೆಲಸದಲ್ಲಿ ಹರಸಾಹಸ ಪಡುವಂತಾಗಿದ್ದು ಈಗ್ಗೆ ಹದಿನೈದು ದಿನಗಳ ಹಿಂದೆ ಬಂದ ಮಳೆಯಿಂದಾಗಿ ರೈತಾಪಿವರ್ಗ ನಿಟ್ಟುಸಿರು ಬಿಟ್ಟಿದ್ದರು.

ಇಂದು ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿದ್ದು ನಂತರ ಜೋರು ಮಳೆ ಸುರಿಯುತ್ತಿರುವುದನ್ನು ಕಂಡ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

Read More

ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರ ನಿವಾಸಕ್ಕೆ ನಟ ಶಿವರಾಜಕುಮಾರ್‌ ಅಭಿಮಾನಿಗಳ ಮುತ್ತಿಗೆ!

Rain Damage | ಬಿರುಗಾಳಿ ಸಹಿತ ಮಳೆ, ಮನೆ ಮೇಲೆ ಮರ ಬಿದ್ದು ಹಾನಿ

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ, ಹೊರಜಿಗಿದು ಪ್ರಾಣ ಉಳಿಸಿಕೊಂಡ ಪ್ರಯಾಣಿಕರು !

Accident | ಕಾರು ಮತ್ತು ಓಮ್ನಿ ನಡುವೆ ಭೀಕರ ಅಪಘಾತ, ಓರ್ವ ಸ್ಥಳದಲ್ಲಿಯೇ ಸಾವು !

Leave a Comment