Bangalore

ಕಪ್ಪೆಗಳಿಗೂ ಬಂತು ರಾಜಮರ್ಯಾದೆ: ಮಲೆನಾಡಿನ ‘ಪೆಟು’ವಿಗೆ ಸಿಕ್ಕ ಅಧಿಕೃತ ಸ್ಥಾನವೇನು ಗೊತ್ತಾ?

ಜೀವವೈವಿಧ್ಯದ ತವರೂರಾದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಪರೂಪದ 'ಮಲೆನಾಡಿನ ಮರಗಂತಿ ಕಪ್ಪೆ'ಯನ್ನು (Malabar Tree Toad) ಕರ್ನಾಟಕದ ಅಧಿಕೃತ ಉಭಯಜೀವಿಯಾಗಿ ಘೋಷಿಸಲಾಗಿದೆ.

Malabar Tree Toad

ಬೆಂಗಳೂರು: ಜೀವವೈವಿಧ್ಯದ ತವರೂರಾದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಪರೂಪದ ‘ಮಲೆನಾಡಿನ ಮರಗಂತಿ ಕಪ್ಪೆ’ಯನ್ನು (Malabar Tree Toad) ಕರ್ನಾಟಕದ ಅಧಿಕೃತ ಉಭಯಜೀವಿಯಾಗಿ ಘೋಷಿಸಲಾಗಿದೆ. ಈ ಮಹತ್ವದ ನಿರ್ಧಾರದೊಂದಿಗೆ ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಉಭಯಜೀವಿಯನ್ನು ಅಧಿಕೃತವಾಗಿ ಘೋಷಿಸಿದ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

WhatsApp Group Join Now
Telegram Group Join Now
Instagram Group Join Now

ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಲಾಗಿದೆ.

ವೈಜ್ಞಾನಿಕ ಮಹತ್ವ:

ವೈಜ್ಞಾನಿಕವಾಗಿ Pedostibes tuberculosus ಎಂದು ಕರೆಯಲ್ಪಡುವ ಈ ಕಪ್ಪೆಯನ್ನು ಸಂಶೋಧಕರು ಪ್ರೀತಿಯಿಂದ ‘ಪೆಟು’ (Petoo) ಎಂದೂ ಕರೆಯುತ್ತಾರೆ.

ಮರವಾಸಿ ಜೀವಿ:

ಸಾಮಾನ್ಯವಾಗಿ ಕಪ್ಪೆಗಳು ನೆಲ ಅಥವಾ ನೀರಿನಲ್ಲಿ ಹೆಚ್ಚು ಕಾಣಸಿಗುತ್ತವೆ. ಆದರೆ ಈ ಪ್ರಭೇದವು ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳ ಮರ, ಪೊದೆಗಳ ಮೇಲೆಯೇ ಬಹುತೇಕ ಸಮಯ ಕಳೆಯುತ್ತದೆ. ಮರಗಳನ್ನು ಸುಲಭವಾಗಿ ಏರಲು ಅನುಕೂಲವಾಗುವಂತೆ ಇದರ ಕಾಲ್ಬೆರಳುಗಳ ತುದಿಯಲ್ಲಿ ವಿಶೇಷವಾದ ಅಂಟಿಕೊಳ್ಳುವ ಪ್ಯಾಡ್‌ಗಳಿರುತ್ತವೆ.

ಪರಿಸರ ಸಮತೋಲನ:

ಮಳೆಗಾಲದ ಆರಂಭದಲ್ಲಿ ಸಂತಾನೋತ್ಪತ್ತಿಗಾಗಿ ಮಾತ್ರ ನೆಲಕ್ಕೆ ಇಳಿಯುವ ಈ ಉಭಯಜೀವಿಗಳು, ಕೀಟ ನಿಯಂತ್ರಣ ಮತ್ತು ಪರಿಸರ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ‘ಜೈವಿಕ ಸೂಚಕ’ಗಳಾಗಿ (Bio-indicators) ಕಾರ್ಯನಿರ್ವಹಿಸುತ್ತವೆ.

ಈ ಮಾನ್ಯತೆಯಿಂದಾಗಿ ಪಶ್ಚಿಮ ಘಟ್ಟದ ಸೂಕ್ಷ್ಮ ಆವಾಸಸ್ಥಾನಗಳ ರಕ್ಷಣೆ, ನಿತ್ಯಹರಿದ್ವರ್ಣ ಕಾಡುಗಳ ಉಳಿವು ಹಾಗೂ ಉಭಯಜೀವಿಗಳ ಕುರಿತ ಸಂಶೋಧನೆ ಮತ್ತು ಜನಜಾಗೃತಿ ಅಭಿಯಾನಗಳಿಗೆ ಇನ್ನಷ್ಟು ವೇಗ ಸಿಗಲಿದೆ ಎಂದು ಪರಿಸರವಾದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]