ಹೊಸನಗರ

ಕೋಡೂರಿನಲ್ಲಿ ಅ. 31 ಮತ್ತು ನ. 1ರಂದು ‘ಕೋಡೂರು ಉತ್ಸವ’ ಹಾಗೂ ‘ಕೆಪಿಎಲ್ ಸೀಸನ್-6’ ಕ್ರಿಕೆಟ್ ಹಬ್ಬ

ಅಕ್ಟೋಬರ್ 31 ಮತ್ತು ನವೆಂಬರ್ 1 ರಂದು ಕೋಡೂರು ಹೈಸ್ಕೂಲ್ ಮೈದಾನದಲ್ಲಿ 6ನೇ ವರ್ಷದ 'ಕೋಡೂರು ಪ್ರೀಮಿಯರ್ ಲೀಗ್' (KPL ಸೀಸನ್-6) ಕ್ರಿಕೆಟ್ ಪಂದ್ಯಾವಳಿ ಹಾಗೂ ಅದ್ದೂರಿ 'ಕೋಡೂರು ಉತ್ಸವ'ವನ್ನು ಆಯೋಜಿಸಲಾಗಿದೆ.

Koduru Uthsava 2026

ಹೊಸನಗರ: ‘ಫ್ರೆಂಡ್ಸ್ ಕೋಡೂರು’ ಇವರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇದೇ ಅಕ್ಟೋಬರ್ 31 ಮತ್ತು ನವೆಂಬರ್ 1ರಂದು ಕೋಡೂರು ಹೈಸ್ಕೂಲ್ ಮೈದಾನದಲ್ಲಿ 6ನೇ ವರ್ಷದ ‘ಕೋಡೂರು ಪ್ರೀಮಿಯರ್ ಲೀಗ್’ (KPL ಸೀಸನ್-6) ಕ್ರಿಕೆಟ್ ಪಂದ್ಯಾವಳಿ ಹಾಗೂ ಅದ್ದೂರಿ ‘ಕೋಡೂರು ಉತ್ಸವ’ವನ್ನು ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಸಂಭ್ರಮದಲ್ಲಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನವಾಗಲಿದೆ.

WhatsApp Group Join Now
Telegram Group Join Now
Instagram Group Join Now

ರಾಜ್ಯೋತ್ಸವ ಕಪ್-2026 (ಕೆಪಿಎಲ್ ಸೀಸನ್-6) ಕ್ರಿಕೆಟ್ ಪಂದ್ಯಾವಳಿ:

ಲೀಗ್ ಮಾದರಿಯಲ್ಲಿ ನಡೆಯುವ ಈ 6ನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೇವಲ 12 ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.

ಬಹುಮಾನಗಳು:

ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ ₹1,00,000 ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ದ್ವಿತೀಯ ಬಹುಮಾನವಾಗಿ ₹60,000 ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು. ಇದರೊಂದಿಗೆ ಸರಣಿ ಶ್ರೇಷ್ಠ, ಬೆಸ್ಟ್ ಬ್ಯಾಟ್ಸ್‌ಮ್ಯಾನ್, ಬೆಸ್ಟ್ ಕೀಪರ್, ಬೆಸ್ಟ್ ಬೌಲರ್ ಮತ್ತು ಬೆಸ್ಟ್ ಫೀಲ್ಡರ್ ವೈಯಕ್ತಿಕ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ.

ಪ್ರಮುಖ ನಿಯಮಗಳು:

  • ಪ್ರತಿ ಪಂದ್ಯವು 6 ಓವರ್‌ಗಳಿಗೆ ಸೀಮಿತವಾಗಿರುತ್ತದೆ ಹಾಗೂ ಚೆಕ್ ಬೌಲಿಂಗ್ ಅನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
  • ಶನಿವಾರ ಒಂದು ತಂಡ ಹಾಗೂ ಭಾನುವಾರ ಒಂದು ತಂಡ ಫೈನಲ್ ಪ್ರವೇಶಿಸಲಿದೆ.
  • ತಂಡದ ಮಾಲೀಕರು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ಐಕಾನ್ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
  • ಆಟಗಾರರಿಗೆ ಸಮವಸ್ತ್ರವನ್ನು ಆಯೋಜಕರೇ ನೀಡಲಿದ್ದು, ಸಮವಸ್ತ್ರ ಧರಿಸುವುದು ಕಡ್ಡಾಯವಾಗಿದೆ.
  • ಪಂದ್ಯಾವಳಿಯಲ್ಲಿ ಭಾಗವಹಿಸುವವರಿಗೆ ಊಟದ ವ್ಯವಸ್ಥೆ ಇರಲಿದೆ.
  • ಅಂಪೈರ್ ಮತ್ತು ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತ್ತದೆ.

ಕೋಡೂರು ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು:

ಅಕ್ಟೋಬರ್ 31ರ ಶನಿವಾರ ಸಂಜೆ 6:00 ಗಂಟೆಯಿಂದ ಸಾಂಸ್ಕೃತಿಕ ಸಂಭ್ರಮ ಆರಂಭವಾಗಲಿದೆ.

ರಸಮಂಜರಿ ಕಾರ್ಯಕ್ರಮ:

ಮಲೆನಾಡಿನ ಹೆಸರಾಂತ ತಂಡವಾದ ‘ಸಂಗೀತ ಕಲ್ಚರಲ್ ಇವೆಂಟ್ಸ್’ ವತಿಯಿಂದ, ರಾಜ್ಯಮಟ್ಟದ ಖ್ಯಾತ ಗಾಯಕರಾದ ಸಂಗೀತ ಮತ್ತು ಗಿರೀಶ್ ಅವರಿಂದ ಸುಮಧುರ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ನೃತ್ಯ ವೈಭವ:

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ವಿಜೇತ ಮತ್ತು ಟಿವಿ ರಿಯಾಲಿಟಿ ಶೋಗಳ ಮೂಲಕ ಖ್ಯಾತಿ ಪಡೆದಿರುವ ‘ಟೀಮ್ ಯುನಿಕ್ ಅಂಪಾರು ಮೂಡುಬಗೆ’ (TEAM UNIQUE AMPARU MOODUBAGE) ತಂಡದಿಂದ ವಿಶೇಷ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಸಾಗರದ ‘ಡಯಾಸ್ ಸೌಂಡ್ಸ್’ (DIAS SOUNDS) ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಇರಲಿದೆ.

ಇಡೀ ಪಂದ್ಯಾವಳಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನೇರಪ್ರಸಾರವು ಯೂಟ್ಯೂಬ್ ಲೈವ್ (YouTube Live) ಹಾಗೂ ಮಲ್ನಾಡ್ ನೆಟ್‌ವರ್ಕ್ ಎಚ್‌ಡಿ (Malnad Network HD) ಮೂಲಕ ಪ್ರಸಾರವಾಗಲಿದೆ. ಈ ಎರಡು ದಿನಗಳ ಕ್ರಿಕೆಟ್ ಹಬ್ಬ ಮತ್ತು ಮನರಂಜನಾ ಉತ್ಸವಕ್ಕೆ ಸರ್ವರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮನು ಕೋಡೂರು (9535952756) ಅಥವಾ ಸನತ್ ಕೋಡೂರು (88802 94213) ಅವರನ್ನು ಸಂಪರ್ಕಿಸಬಹುದಾಗಿದೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!