RIPPONPETE ; ಶಿವಮೊಗ್ಗದಲ್ಲಿ ಇಂದು ನಡೆದ 14 ವರ್ಷ ವಯೋಮಿತಿಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಹೊಸನಗರ ತಾಲೂಕಿನ ಸ.ಹಿ.ಪ್ರಾ. ಶಾಲೆ ಕೋಟೆತಾರಿಗ ಶಾಲೆಯ ವಿದ್ಯಾರ್ಥಿಗಳಾದ ಸಾನಿಕ ಟಿ.ಎನ್. ತಟ್ಟೆ ಎಸೆತ ಸ್ಪರ್ಧೆಯಲ್ಲಿ ಹಾಗೂ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಪ್ರೀತಿ ಕೆ.ಎನ್. ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಾನಿಕ ತಮ್ಮಡಿಕೊಪ್ಪ ನಿವಾಸಿ ಸುಮಾ ಮತ್ತು ನಾಗರಾಜ್ ದಂಪತಿಗಳ ಪುತ್ರಿ, ಪ್ರೀತಿ ತಾರಿಗ ಗ್ರಾಮದ ನಂದಿಗ ನಿವಾಸಿ ನಳಿನಾ ಮತ್ತು ಕುಬೇರ ದಂಪತಿಗಳ ಪುತ್ರಿ.

ಅಭಿನಂದನೆ :
ವಿದ್ಯಾರ್ಥಿನಿಯರ ಈ ಸಾಧನೆಗೆ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಎಚ್.ಆರ್, ಸಮನ್ವಯಾಧಿಕಾರಿ ರಂಗನಾಥ್ ಎಂ, ದೈಹಿಕ ಪರಿವೀಕ್ಷಕ ಸಿ ಬಾಲಚಂದ್ರ ರಾವ್, ಶಿಕ್ಷಣ ಸಂಯೋಜಕ ಶ್ರೀಮೂರ್ತಿ ನಾಯಕ್, ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್, ತರಬೇತುದಾರ ಶಿಕ್ಷಕ ಮಹೇಶ್ವರ ಆಚಾರ್, ಮುಖ್ಯ ಶಿಕ್ಷಕ ಮಂಜಯ್ಯ ಟಿ, ಸಹ ಶಿಕ್ಷಕ ಗಂಗನಾಯಕ್ ಹಾಗೂ ಅತಿಥಿ ಶಿಕ್ಷಕಿ ಮೇದಿನಿ, ಎಸ್.ಡಿ.ಎಂ.ಸಿ ಅಧ್ಯಕ್ಷ ನವೀನ್ ಕುಮಾರ್, ಸದಸ್ಯರು, ವಿದ್ಯಾರ್ಥಿಗಳು, ಶಾಲೆ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.