ರಿಪ್ಪನ್‌ಪೇಟೆ ; ಇಲ್ಲಿನ ಪುರಾಣ ಪ್ರಸಿದ್ಧ ಶ್ರೀಸಿದ್ದಿವಿನಾಯ ಸ್ವಾಮಿ ಮತ್ತು ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಸಾಮೂಹಿಕ ಗಣಹೋಮ ಮತ್ತು ದೇವರಿಗೆ ಕುಂಭಾಭಿಷೇಕ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ವಿಧ್ಯುಕ್ತವಾಗಿ ನೆರವೇರುವುದರೊಂದಿಗೆ ಸಂಪನ್ನಗೊಂಡಿತು.
ಶಿವಮೊಗ್ಗದ ವೇ.ಬ್ರ.ವಸಂತಭಟ್ಟರು ಮತ್ತು ಸಂಗಡಿಗರು ಹಾಗೂ ರಿಪ್ಪನ್‌ಪೇಟೆ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಚಂದ್ರಶೇಖರಭಟ್, ಗುರುರಾಜಭಟ್ ಇವರ ಪುರೋಹಿತತ್ವದಲ್ಲಿ ಸಿದ್ದಿವಿನಾಯಕ ಸ್ವಾಮಿ ಮತ್ತು ಅನ್ನಪೂರ್ಣೇಶ್ವರಿ ಅಮ್ಮನವರಿಗೆ ವಿಶೇಷ ಪೂಜಾ ಕಾರ್ಯಗಳು ಸಾಂಗೋಪ ಸಾಂಗವಾಗಿ ನೆರವೇರಿದವು.
ಕುಂಭಾಭಿಷೇಕ ಮತ್ತು ಗಣಹೋಮ ದೇವರಿಗೆ ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ನಂತರ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರಶೆಟ್ಟಿ, ಎಂ.ಡಿ.ಇಂದ್ರಮ್ಮ, ತುಳೋಜಿರಾವ್, ಆಶಾ.ಸ್ವಾಮಿ ದೊಡ್ಡಿನಕೊಪ್ಪ, ವೈ.ಜೆ.ಕೃಷ್ಣ, ಮಂಜನಾಯ್ಕ್, ಗಣೇಶ ಎನ್.ಕಾಮತ್, ಸಿದ್ದಿವಿನಾಯಕ ಸೇವಾ ಸಮಿತಿಯ ಅಧ್ಯಕ್ಷ ಎನ್.ಸತೀಶ್, ಆರ್.ಹೆಚ್.ದೇವದಾಸ ಆಚಾರ್, ಕೆ.ವಿ.ಅರವಿಂದ, ಸಿ.ಚಂದ್ರುಬಾಬು, ಸುಧೀಂದ್ರ ಪೂಜಾರಿ, ಸುರೇಶಸಿಂಗ್, ಸುಧೀಂದ್ರ ಹೆಬ್ಬಾರ್, ಕೋಮಲ ಕೇಶವ, ಸರಸ್ವತಿ ರಾಘವೇಂದ್ರ, ಬ್ಯಾಂಕ್ ರತ್ನಾಕರ್, ಪದ್ಮಾ ಸುರೇಶ, ನಾಗರತ್ನ ದೇವರಾಜ್, ರವೀಂದ್ರ ಕೆರೆಹಳ್ಳಿ, ಸಂಧ್ಯಾ ಪೈ, ಜಯಲಕ್ಷ್ಮಿ ಮೋಹನ್, ತಾನಾರಾಮ ಪಟೇಲ್, ಎಸ್.ವಿ.ಕಾಶಿನಾಥ, ಚಂದ್ರುಬಾಬು, ರಾಮಚಂದ್ರಪ್ಪ ಇನ್ನಿತರರು ಹಾಜರಿದ್ದರು.