ತೀರ್ಥಹಳ್ಳಿ

ತೀರ್ಥಹಳ್ಳಿ ; ಲಕ್ಷ್ಮೀಶ್‌ ಪತ್ರಿಕೆ ಸಂಪಾದಕ ಕಾ.ಸು. ಲಕ್ಷ್ಮೀಶ್ ಇನ್ನಿಲ್ಲ !

THIRTHAHALLI ; ತನ್ನ ಮೊನಚು ಬರವಣಿಗೆಯ ಮೂಲಕ ಮನೆಮಾತಾಗಿದ್ದ ಲಕ್ಷ್ಮೀಶ್‌ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಾ.ಸು. ಲಕ್ಷ್ಮೀಶ್ (62) ಮಂಗಳವಾರ ನಿಧನರಾದರು.

inshot_20250101_1302048305939384257540012564.jpg

ಸೋಮವಾರ ರಾತ್ರಿ ಬ್ರೈನ್ ಹ್ಯಮರೇಜ್ ಆಗಿದೆ. ಕೂಡಲೇ ತೀರ್ಥಹಳ್ಳಿಯ ಕಿರಣ್ ಹೆಲ್ತ್ ಕೇರ್ ಗೆ ಕರೆತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

inshot_20250101_13023873277244301393721165.jpg

ಲಕ್ಷ್ಮೀಶ್‌ ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ತೀರ್ಥಹಳ್ಳಿಯ ಬೊಬ್ಬಿ ಸಮೀಪದ ಮಾಕೋಡಿನಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬೆಳಗ್ಗೆ ತೀರ್ಥಹಳ್ಳಿಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಿತು.

Leave a Comment