ಶಿವಮೊಗ್ಗ:ಶಿವಮೊಗ್ಗ–ಭದ್ರಾವತಿ ನಡುವಿನ ರೈಲು ಮಾರ್ಗದ ಲೆವೆಲ್ ಕ್ರಾಸಿಂಗ್‌ಗಳ ತಾಂತ್ರಿಕ ಪರಿಶೀಲನೆ ಮತ್ತು ಎಲ್‌ಸಿ ಓಪನ್ ಪರೀಕ್ಷೆಗಾಗಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಪರಿಶೀಲನೆ ಹಿನ್ನೆಲೆಯಲ್ಲಿ ಎಲ್‌ಸಿ ನಂ. 42, 46 ಮತ್ತು 47 ಮಾರ್ಗಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ಕುರಿತಂತೆ ಆದೇಶ ಹೊರಡಿಸಿದ್ದಾರೆ.
ಬದಲಿ ಮಾರ್ಗಗಳ ವಿವರ:
1️⃣ ಎಲ್‌ಸಿ 43 – ಯಲವಟ್ಟಿ ರಸ್ತೆ:ಅಕ್ಟೋಬರ್ 28ರ ಬೆಳಿಗ್ಗೆ 8 ಗಂಟೆಯಿಂದ ಅಕ್ಟೋಬರ್ 29ರ ಸಂಜೆ 6 ಗಂಟೆಯವರೆಗೆ ಈ ರಸ್ತೆ ಮುಚ್ಚಲ್ಪಡಲಿದೆ. ಬದಲಿ ಮಾರ್ಗವಾಗಿ ಎಲ್‌ಸಿ 46 ಮುಖಾಂತರ ಹೊಸೊಡಿ ರಸ್ತೆ–ಯಲವಟ್ಟಿ ರಸ್ತೆ ಸಂಪರ್ಕ ಮಾರ್ಗ ಬಳಸಬಹುದು.
2️⃣ ಎಲ್‌ಸಿ 46 – ಚಿತ್ರದುರ್ಗ ರಸ್ತೆ:ಅಕ್ಟೋಬರ್ 30ರ ಬೆಳಿಗ್ಗೆ 8ರಿಂದ ಅಕ್ಟೋಬರ್ 31ರ ಸಂಜೆ 6ರವರೆಗೆ ವಾಹನ ಸಂಚಾರ ನಿಷೇಧ. ಬದಲಿ ಮಾರ್ಗವಾಗಿ ಹೊಸದಾಗಿ ನಿರ್ಮಿಸಲಾದ ಮೇಲ್ಸೇತುವೆ ಮತ್ತು ಚಿತ್ರದುರ್ಗ ಸಂಪರ್ಕ ರಸ್ತೆ ಮಾರ್ಗ ಬಳಸಬಹುದು.
3️⃣ ಎಲ್‌ಸಿ 47 – ಮಲ್ಲೇಶ್ವರನಗರ ರಸ್ತೆ:ನವೆಂಬರ್ 2ರ ಬೆಳಿಗ್ಗೆ 8ರಿಂದ ನವೆಂಬರ್ 3ರ ಸಂಜೆ 6ರವರೆಗೆ ಸಂಚಾರ ನಿಷೇಧ. ಬದಲಿ ಮಾರ್ಗವಾಗಿ ಮಲ್ಲೇಶ್ವರನಗರ ರಸ್ತೆ–ಹೊನ್ನಾಳಿ ರಸ್ತೆ–ಸಂಗೊಳ್ಳಿ ರಾಯಣ್ಣ ಸರ್ಕಲ್–ಶಂಕರಮಠ ಸಂಪರ್ಕ ಮಾರ್ಗ ಬಳಸಬಹುದು.
🛑 ಭಾರಿ ವಾಹನಗಳಿಗೆ ನಿರ್ಬಂಧ:
ಮಲ್ಲೇಶ್ವರನಗರ ರಸ್ತೆಯು ಕಚ್ಚಾ ಮಣ್ಣಿನ ರಸ್ತೆಯಾಗಿರುವುದರಿಂದ, ಅಲ್ಲಿ ದ್ವಿಚಕ್ರ ವಾಹನಗಳಿಗೆ ಮಾತ್ರ ಸಂಚಾರ ಅನುಮತಿ ನೀಡಲಾಗಿದ್ದು, ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಸಾರ್ವಜನಿಕರಿಗೆ ವಿನಂತಿ:
ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳ ತಾಂತ್ರಿಕ ಪರಿಶೀಲನೆ ಕಾರ್ಯಗಳು ಶೀಘ್ರ ಪೂರ್ಣಗೊಳ್ಳಬೇಕಿರುವುದರಿಂದ, ಈ ಅವಧಿಯಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ಈ ಆದೇಶವನ್ನು ಮೋಟಾರು ವಾಹನ ಕಾಯ್ದೆ 1988ರ ಕಲಂ 115ರನ್ವಯ ಹೊರಡಿಸಲಾಗಿದ್ದು, ಪರಿಷ್ಕೃತ ದಿನಾಂಕಗಳಲ್ಲಿಯೇ ಬದಲಿ ಮಾರ್ಗಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ.

