ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ದಶಧರ್ಮ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕ | ಅಂಗನವಾಡಿ ಅಡುಗೆ ಸಿಲಿಂಡರ್ ಕಳವು ; ದೂರು ದಾಖಲು

Written by malnadtimes.com

Published on:

ರಿಪ್ಪನ್‌ಪೇಟೆ ; ಇತರರಿಗೆ ಒಳ್ಳೆಯದನ್ನು ಮಾಡಿ. ಅದು ಅನಿರೀಕ್ಷಿತ ರೀತಿಯಲ್ಲಿ ನಿಮಗೆ ಹಿಂತಿರುಗುತ್ತದೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now

ನೆವಟೂರು ಗ್ರಾಮದ ಕಾಶಿವಿಶ್ವನಾಥ ಸ್ವಾಮಿ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಆಯೋಜಿಸಲಾದ ಧರ್ಮ ಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಗುರು-ಹಿರಿಯರಿಗೆ ತಂದೆ ತಾಯಿಯರಿಗೆ ಗೌರವಿಸಿ ಸತ್ಕರಿಸುವುದು ನಿಜವಾದ ಸಂಸ್ಕಾರವಾಗಿದೆ. ಪರಶಿವನಿಂದ ದೊರೆತ ಪಂಚಭೂತಗಳನ್ನು ಜೀವನದಲ್ಲಿ ಸದುಪಯೋಗಪಡಿಸಿಕೊಂಡು ಯೌವನದಲ್ಲಿ ಪರಮಾತ್ಮನನ್ನು ಸ್ಮರಿಸುತ್ತಾ ಸುಖ ಜೀವನವನ್ನು ಸಾಗಿಸಬೇಕೆಂದು ತಿಳಿಸಿದರು.

ಶ್ರೀಜಗದ್ಗುರು ರೇಣುಕಾಚಾರ್ಯರೂ ಪ್ರತಿಯೊಬ್ಬರಿಗೂ ಅನುಕೂಲವಾಗಲೆಂದು ದಶಧರ್ಮ ಸೂತ್ರಗಳನ್ನು ಮನುಕುಲ ಉದ್ದಾರಕ್ಕಾಗಿ ಭೋಧಿಸಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮಾನವ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ನೆವಟೂರು ಗ್ರಾಮಸ್ಥರು ದೇವಸ್ಥಾನ ಸೇವಾ ಸಮಿತಿಯವರು ಭಕ್ತರು ಪಾಲ್ಗೊಂಡಿದ್ದರು.


ಗುರಿಮುಟ್ಟಲು ಸಮರ್ಥ ಗುರುವಿನ ಮಾರ್ಗದರ್ಶನ ಅಗತ್ಯ ;

ಓದು ವಕ್ಕಾಲು ಬುದ್ದಿ ಮುಕ್ಕಾಲು. ಬುದ್ದಿ ಮನಸನ್ನು ಸದ್ದುಣಗಳ ಸಹವಾಸದಲ್ಲಿಸಿಕೊಂಡು ಜೀವನವನ್ನು ಸಾಗಿಸಿದ್ದಾದರೆ ಬದುಕು ಪಾವನವಾಗುವುದರ ಜೊತೆಯಲ್ಲಿ ಶಾಂತಿ ನೆಮ್ಮದಿ ಪಡೆಯಲು ಸಾಧ್ಯ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯ ಪಟ್ಟರು.

ಹಾಲುಗುಡ್ಡೆ ಗ್ರಾಮದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಹಾಲುಗುಡ್ಡೆ ಶ್ರೀಹಾಲೇಶ್ವರ ದೇವಸ್ಥಾನ ಸಮಿತಿಯವರು ಆಯೋಜಿಸಲಾದ ಧರ್ಮಜಾಗೃತಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಹಿಂದಿನ ಹಿರಿಯರು ಜೇನವದಲ್ಲಿ ಒಂದು ಗುರಿ. ಆ ಗುರಿಮುಟ್ಟಲು ಸಮರ್ಥ ಗುರುವಿನ ಮಾರ್ಗದರ್ಶನ ಇರಬೇಕೆಂದು ತಿಳಿಸಿ, ನಿರ್ಧಿಷ್ಟ ಗುರಿಯನ್ನು ಹೊಂದಿ ಬದುಕನ್ನು ಸಾಗಿಸಬೇಕು. ಅದೃಷ್ಟ ಎಂದರೆ ಆವಕಾಶವನ್ನು ಪಡೆಯುವವನು ಬುದ್ದಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನ್ನು ಎಂದರು.

ಶ್ರೀಹಾಲೇಶ್ವರ ದೇವಸ್ಥಾನ ಸೇವಾ ಸಮಿತಿಯವರು ಹಾಗೂ ಗ್ರಾಮದ ಹಿರಿಯರು ಪುರೋಹಿತ ವರ್ಗ ಹಾಜರಿದ್ದರು.


ಅಂಗನವಾಡಿ ಅಡುಗೆ ಸಿಲಿಂಡರ್ ಕಳವು ; ದೂರು ದಾಖಲು

ರಿಪ್ಪನ್‌ಪೇಟೆ ; ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಬ್ಬಳ್ಳಿ ಅಂಗನವಾಡಿಯಲ್ಲಿನ ಅಡುಗೆ ಸಿಲಿಂಡರ್‌ ಅನ್ನು ಕಳವು ಮಾಡಿಕೊಂಡು ಪರಾರಿಯಾದ ಪ್ರಕರಣದ ಬಗ್ಗೆ ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಂದು ಬೆಳಗ್ಗೆ ಅಂಗನವಾಡಿ ಕಾರ್ಯಕರ್ತೆ ಎಂದಿನಂತೆ ಅಂಗನವಾಡಿ ಬಾಗಿಲು ತೆಗೆಯಲು ಹೋದಾಗ ಬೀಗ ಮುರಿದಿರುವುದು ಕಂಡು ಗಾಬರಿಗೊಂಡು ಅಕ್ಕಪಕ್ಕದ ಮನೆವರಿಗೂ ಮತ್ತು ಊರಿನವರ ಗಮನಕ್ಕೆ ತರಲಾಗಿ ಅವರು ಬಂದು ನೋಡಿದಾಗ ಸಿಲಿಂಡರ್ ಮತ್ತು ಇನ್ನಿತರ ವಸ್ತುಗಳು ಕಳವು ಮಾಡಿಕೊಂಡು ಹೋಗಿರುವುದು ದೃಢಪಡಿಸಿಕೊಂಡು ನಂತರ ಠಾಣೆಗೆ ದೂರು ನೀಡಿರುವುದಾಗಿ ಹೇಳಲಾಗಿದೆ.

Leave a Comment