ಹೊಸನಗರ

ಎಂ.ಗುಡ್ಡೇಕೊಪ್ಪ ಗ್ರಾಮಸಭೆ ಮಾ.13 ಕ್ಕೆ ಮುಂದೂಡಿಕೆ | ವಯೋನಿವೃತ್ತಿ, ಬೀಳ್ಕೊಡುಗೆ

ಹೊಸನಗರ ; ಇಂದು ನಡೆಯಬೇಕಿದ್ದ ತಾಲೂಕಿನ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿಯ ಸಾಮಾಜಿಕ ಪರಿಶೋಧನೆ ಮತ್ತು 15ನೇ ಹಣಕಾಸು ಸಾಮಾಜಿಕ ಪರಿಶೋಧನೆ ಗ್ರಾಮ ಸಭೆಯು ಕೋರಂ ಕೊರತೆ ಹಿನ್ನಲೆಯಲ್ಲಿ ಇದೇ ಮಾರ್ಚ್ 13ಕ್ಕೆ ಮುಂದೂಡಲಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ನೋಡಲ್ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಎನ್. ಪ್ರವೀಣ್ ಜೊತೆಗೆ ಸದಸ್ಯರಾದ ಕಾಲಸಸಿ ಸತೀಶ್, ಓಂಕೇಶ್, ಶ್ರೀಧರ್, ಸವಿತಾ, ಕಾರ್ಯದರ್ಶಿ ಹಾಗು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


ವಯೋನಿವೃತ್ತಿ, ಬೀಳ್ಕೊಡುಗೆ ;

ಹೊಸನಗರ ; ಕರ್ನಾಟಕ ಗ್ರಾಮೀಣ
ಬ್ಯಾಂಕ್‌ನ ಜಿಲ್ಲೆಯ ವಿವಿಧ ಶಾಖೆಗಳಲ್ಲಿ ನಿರಂತರ 38 ವರ್ಷಗಳ ಸೇವೆ ಸಲ್ಲಿಸಿ ಇದೇ ಫೆಬ್ರವರಿ 28ರಂದು ವಯೋ ನಿವೃತ್ತರಾದ ಸಿಬ್ಬಂದಿ ಡಿ.ಕೆ.ಸೋಮನಾಥ್ ಅವರನ್ನು ಬ್ಯಾಂಕ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಸೋಮನಾಥ್ ಮೂಲತಃ ತೀರ್ಥಹಳ್ಳಿ ತಾಲ್ಲೂಕಿನ ಸಾಲೂರಿನ ಸಮೀಪದ ಕಣಕಲಬೈಲು ಗ್ರಾಮದವರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]