ಹೊಸನಗರ

ಎಂ.ಗುಡ್ಡೇಕೊಪ್ಪ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಮಾತಿನ ಚಕಮಕಿ, ಭ್ರಷ್ಟಾಚಾರ ಎಲ್ಲಿ ನಡೆದಿದೆ ಸಭೆಗೆ ಮಾಹಿತಿ ನೀಡಿ ; ಸದಸ್ಯರ ಆಗ್ರಹ

ಹೊಸನಗರ ; ಸದಸ್ಯರ ಗಮನಕ್ಕೆ ಬಾರದೇ ಹಲವು ಕಾರ್ಯಗಳು ಈ ಹಿಂದೆ ನಡೆದಿವೆ. ಇದನ್ನು ತಪಿಸುವ ಸಲುವಾಗಿ ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆದ ನಂತರವಷ್ಟೇ ಕಾಮಗಾರಿಗಳನ್ನು ನಡೆಸಬೇಕು ಮತ್ತು ಯಾವುದೇ ಕಡತಗಳನ್ನು ಅಧ್ಯಕ್ಷರು ಪರಿಶೀಲಿಸದ ನಂತರವೇ ಕಡತ ಮುಂದುವರೆಯಬೇಕು ಎಂದು ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಎಂ ಗುಡ್ಡೇಕೊಪ್ಪ ಗ್ರಾಮ ಪಂಚಾಯತಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಸಾರ್ವಜನಿಕರಿಂದ ಚುನಾಯಿತ ಪ್ರತಿನಿಧಿಗಳಾಗಿ ಪಂಚಾಯಿತಿ ಕಛೇರಿಯಲ್ಲಿ ನಡೆಯುವ ಕಾರ್ಯಗಳ ಮಾಹಿತಿ ಇಲ್ಲದಿದ್ದಲ್ಲಿ ಸಾರ್ವಜನಿಕ ವಲಯದಲ್ಲಿ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಈ ಕಾರಣಕ್ಕೆಎಲ್ಲಾ ವಿಚಾರಗಳನ್ನೂ ಇನ್ನು ಮುಂದಿನ ದಿನಗಳಲ್ಲಿ ಸಭೆಯ ಗಮನಕ್ಕೆ ತಂದ ಬಳಿಕವಷ್ಟೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು. ತುರ್ತು ಸಂದರ್ಭಗಳಲ್ಲಿ ಇದನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿರುವ ಖಾಸಗಿ ಲೇಔಟ್‌ಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿಲ್ಲ. ಇದರಿಂದ ಲೇಔಟ್ ಸಮೀಪದ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. ನಿಯಮಾನುಸಾರ ಲೇಔಟ್ ನಿರ್ಮಾಣ ಮಾಡಿದವರು ರಸ್ತೆ, ಚರಂಡಿ ಅಭಿವೃದ್ಧಿಪಡಿಸಬೇಕು. ಆದರೆ ಜನರಿಗೆ ಇದರ ಅರಿವಿಲ್ಲದೇ ಪಂಚಾಯಿತಿಯನ್ನು ದೂರುತ್ತಾರೆ. ಇಂತಹ ಲೋಪಗಳು ಆಗದಂತೆ ಬಿಗಿ ನಿಲುವು ತಳೆಯುವ ಅಗತ್ಯವಿದೆ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಮಾತಿನ ಚಕಮಕಿ ;

ಸಭೆ ಆರಂಭದಲ್ಲಿಯೇ ತೀವ್ರ ಮಾತಿನ ಚಕಮಕಿ ನಡೆಯಿತು. ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಠಾಚಾರ ತಡೆಯುವುದಾಗಿ ಹಿಂದೆ ಅಧ್ಯಕ್ಷರು ಹೇಳಿದ್ದರು. ಆದರೆ ಯಾವ ಭ್ರಷ್ಟಾಚಾರ ನಡೆದಿದೆ, ಯಾರಿಂದ ನಡೆದಿದೆ ಎಂದು ಬಹಿರಂಗಗೊಳಿಸಬೇಕು ಎಂದು ಸದಸ್ಯ ಕಾಲಸಸಿ ಸತೀಶ್, ಚಿಕ್ಕನಕೊಪ್ಪ ಶ್ರೀಧರ ಹಾಗೂ ಓಂಕೇಶ್ ಗೌಡ ಸಭೆಯಲ್ಲಿ ಆಗ್ರಹಿಸಿ ಸಾಮಾನ್ಯ ಸಭೆ ಮುಂದುವರೆಸಬೇಕು ಎಂದು ಪಟ್ಟು ಹಿಡಿದಿದ್ದು ಈ ವಿಚಾರವಾಗಿ ಹೆಚ್ಚಿನ ಸದಸ್ಯರು ಏರುಧ್ವನಿಯಲ್ಲಿ ಮಾತಿಗಾರಂಭಿಸಿ ಇಡೀ ಸಭೆ ಗೊಂದಲದ ಗೂಡಾಯಿತು. ಒಂದು ಹಂತದಲ್ಲಿ ಅಭಿವೃದಿ ಅಧಿಕಾರಿ ರವಿಕುಮಾರ್ ಮಧ್ಯ ಪ್ರವೇಶಿಸಿ, ಸಭೆ ಅಜೆಂಡಾ ಪ್ರಕಾರ ನಡೆಯದಿದ್ದಲ್ಲಿ, ಸಭೆಯನ್ನು ರದ್ದುಪಡಿಸಬೇಕಾಗುತ್ತದೆ ಗ್ರಾಮದ ಸಾರ್ವಜನಿಕರ ಕಡತಗಳನ್ನು ತುಂಬಾ ಬಾಕಿ ಇದ್ದು ಸಾರ್ವಜನಿಕರಿಗೆ ನೀವೇ ಉತ್ತರ ನೀಡಿ ಎಂದು ಸಭಗೆ ತಿಳಿಸಿದ ನಂತರ ಸಭೆ ಮುಂದುವರೆಯಿತು.

ಗ್ರಾಮ ಪಂಚಾಯತಿಯ ಉಪಾಧ್ಯಕ್ಷೆ ಸುಧಾ ನಂದಾಕುಮಾರಿ ಸದಸ್ಯರಾದ ಕಾಲಸಸಿ ಸತೀಶ, ಮಹೇಂದ್ರ, ದಿವ್ಯಾ ಪ್ರವೀಣ್, ಓಂಕೇಶ್, ಚಿಕ್ಕನಕೊಪ್ಪ ಶ್ರೀಧರ, ಬೇಬಿ, ಸವಿತಾ ರಮೇಶ್, ರಾಘವೇಂದ್ರ, ಶಶಿಕಲಾ, ನಿರ್ಮಾಲ, ಅಭಿವೃದ್ಧಿ ಅಧಿಕಾರಿ ರವಿ ಎಸ್, ಧರ್ಮಪ್ಪ, ರೇಖಾ, ದಿವಾಕರ, ಮೋಹನ್ ರಾಜ್, ಗೀತಾ, ಶಶಿಕಲಾ ಇನ್ನೂ ಮತ್ತಿತರರು ಇದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]