ರಿಪ್ಪನ್‌ಪೇಟೆ ; ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಮಹಾಶಿವರಾತ್ರಿ ಅಂಗವಾಗಿ ವಿವಿಧ ಶಿವಾಲಯಗಳಲ್ಲಿ ಮಹಾ ಶಿವರಾತ್ರಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಅರಸಾಳು ಗ್ರಾಮದ ಶ್ರೀ ಈಶ್ವರ ಬಸವಣ್ಣ ದೇವಸ್ಥಾನದಲ್ಲಿ ಪರಿವಾರ ದೇವತೆಗಳಿಗೆ ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ರುದ್ರಭಿಷೇಕ ಹಾಗೂ ಅಷ್ಟೋತ್ತರ ಶತನಾವಳಿಗಳು ಹಾಗೂ ಅಲಂಕಾರ ಪೂಜೆ ಮಹಾಮಂಗಳಾರತಿ ತೀರ್ಥಪ್ರಸಾದ ವಿತರಣೆ ಆಲವಳ್ಳಿ ವೀರಕ್ತಮಠದ ವೇ.ಮಹೇಶ್ವರಯ್ಯ ನೇತೃತ್ವದಲ್ಲಿ ಜರುಗಿತು.
ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಮನಗದ್ದೆಯ ಉಮಾಮಹೇಶ್ವರ, ನಾಗಯಕ್ಷಿ, ಚೌಡೇಶ್ವರಿ ಪರಿವಾರ ದೇವತೆಗಳ ಪ್ರತಿಷ್ಠ ವರ್ಧಂತ್ಯೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.
ಲೇಖನವನ್ನು ಮುಂದುವರಿಸಿ ಓದಿ
ಗುಳುಗುಳಿ ಶಂಕರೇಶ್ವರ ದೇವಸ್ಥಾನದಲ್ಲಿ
ಸೋಮವಾರ ಸಾಮೂಹಿಕ ಸತ್ಯನಾರಾಯಣ ಪೂಜೆ ರುದ್ರಾಭಿಷೇಕ, ಹೋಮ-ಹವನಗಳು ಜರುಗಿದವು.
ಸಿದ್ದಪ್ಪನಗುಡಿ ಕಂತೆ ಸಿದ್ದೇಶ್ವರ ಸ್ವಾಮಿಯ ಸನ್ನಿಧಾನದಲ್ಲಿಯೂ ಸಹ ಅತ್ಯಂತ ವಿಜೃಂಭಣೆಯಿಂದ ಪೂಜೆ ಪುನಸ್ಕಾರಗಳು ಜರುಗಿದವು.
ಎಲ್ಲೆಡೆ ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಸಾಮೂಹಿಕ ಅನ್ನಸಂತರ್ಪಣೆಗಳು ನೆರವೇರಿದವು.

