ರಿಪ್ಪನ್‌ಪೇಟೆ ; ಕಾರು ಚಲಾಯಿಸುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃ*ತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಪಟ್ಟಣದ ಸರ್ಕಲ್ ನಲ್ಲಿ ಶುಕ್ರವಾರ ನಡೆದಿದೆ.
ರಿಪ್ಪನ್‌ಪೇಟೆ ಪಟ್ಟಣದ ಹೊಸನಗರ ರಸ್ತೆಯ ನಿವಾಸಿ ಕಬೀರ್ (54) ಮೃ*ತ ದುರ್ದೈವಿ. ರಿಪ್ಪನ್‌ಪೇಟೆಯಿಂದ ಶಿವಮೊಗ್ಗಕ್ಕೆ ಕಾರ್ಯನಿಮಿತ್ತ ಕಾರಿನಲ್ಲಿ ತೆರಳುತಿದ್ದಾಗ ಆಯನೂರು ಸರ್ಕಲ್ ನಲ್ಲಿ ಕಾರು ಚಾಲನೆಯಲ್ಲಿದ್ದಾಗಲೇ ಏಕಾಏಕಿ ಎದೆ ನೋವು ಎಂದು ಪಕ್ಕದಲ್ಲಿದ್ದ ವ್ಯಕ್ತಿಯ ಬಳಿ ಹೇಳಿ ಕೂಡಲೇ ಮೂರ್ಚೆ ಹೋಗಿದ್ದಾರೆ. ತಕ್ಷಣ ಸಹಸವಾರ ಕಾರಿನ ಬ್ರೇಕ್ ಹಾಕಿ ನಿಲ್ಲಿಸಿ ಏನಾಗಿದೆ ಎಂದು ವಿಚಾರಿಸಿದ್ದಾರೆ. ನಂತರ ಸ್ಥಳೀಯರ ನೆರವಿನಿಂದ ಆಯನೂರು ಸಮುದಾಯ ಆಸ್ಪತ್ರೆಗೆ ಕರೆತಂದು ಕೂಡಲೇ ಆಂಬುಲೆನ್ಸ್ ಮೂಲಕ ಶಿವಮೊಗ್ಗದ ನಂಜಪ್ಪ ಲೈಫ಼್ ಕೇರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ಕಬೀರ್ ಸಾ*ವನ್ನಪ್ಪಿದ್ದರು.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

