ಹೊಸನಗರ

ಹೊಸನಗರದಲ್ಲಿ ಫೆ.04 ರಿಂದ 09 ದಿನಗಳ ಕಾಲ ಮಾರಿಜಾತ್ರೆ ; ಲಕ್ಷ್ಮಿನಾರಾಯಣ

ಹೊಸನಗರ ; ಫೆ.04 ಮಂಗಳವಾರದಿಂದ ಫೆ.12ರವರೆಗೆ ಹೊಸನಗರದ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಅದ್ಧೂರಿ ರೀತಿಯಲ್ಲಿ ಮಾರಿಜಾತ್ರೆ ನಡೆಯಲಿದೆ ಎಂದು ಮಾರಿಕಾಂಬಾ ಜಾತ್ರಾ ಸಮಿತಿಯ ಅಧ್ಯಕ್ಷ ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ಮಾರಿಗುಡ್ಡದ ದೇವಸ್ಥಾನದ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಫೆ. 4ರ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಮಾರಿಯಮ್ಮ ತಾಯಿ ಮನೆಯೆಂದೇ ಕರೆಯಲ್ಪಡುವ ಹಳೇ ಸಾಗರ ರಸ್ತೆಯಲ್ಲಿರುವ ದುರ್ಗಾಂಬಾ ದೇವಿ ದೇವಸ್ಥಾನದಲ್ಲಿ ಮಾರಿಯಮ್ಮ ದೇವಿಯನ್ನು ಪ್ರತಿಷ್ಠಾಪಿಸಿ ಸಂಜೆ 9 ಗಂಟೆಯವರೆಗೆ ಅಲ್ಲಿ ಪೂಜೆ ನಡೆಯುತ್ತದೆ. ನಂತರ ಮಾರಿಯಮ್ಮ ದೇವಿಯ ಮೂರ್ತಿಯನ್ನು ಮಾರಿಗುಡ್ಡದಲ್ಲಿರುವ ಗಂಡನ ಮನೆಯೆಂದೇ ಖ್ಯಾತಿ ಪಡೆದಿರುವ ಮಾರಿಗುಡ್ಡದಲ್ಲಿ 8 ದಿನಗಳ ಕಾಲ ಜಾತ್ರೆ ನಡೆಯಲಿದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ :

ಫೆ.6 ರ ಗುರುವಾರದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಾಗರ-ಹೊಸನಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಉದ್ಘಾಟಿಸಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್.ಜಿ. ಲಕ್ಷ್ಮಿನಾರಾಯಣರಾವ್ ವಹಿಸಲಿದ್ದು ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ ರಾಘವೇಂದ್ರ, ತೀರ್ಥಹಳ್ಳಿ-ಹೊಸನಗರ ಶಾಸಕ ಆರಗ ಜ್ಞಾನೇಂದ್ರ ವಿಧಾನ ಪರಿಷತ್ ಸದಸ್ಯ ಧನಂಜಯ ಸರ್ಜಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗಪ್ಪ ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್‌ ಆಗಮಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಸಾಗರ ಮಾರಿಕಾಂಬ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಎನ್ ನಾಗೇಂದ್ರ ಹಾಗೂ ಶಿರಸಿ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ರವೀಂದ್ರ ಜಿ.ನಾಯಕ್‌ ಆಗಮಿಸಲಿದ್ದು ಬೆಂಗಳೂರಿನ ಉದ್ಯಮಿ ಎನ್.ವಿ. ದಿನೇಶ್, ಮಕ್ಕಳ ತಜ್ಞರಾದ ಡಾ|| ನಾಗರಾಜ್, ಹೊಸನಗರದ ಸುನಂದಮ್ಮ ಲಕ್ಷ್ಮಿನಾರಾಯಣರಾವ್, ಹೆಚ್.ಎನ್ ಪೂಜಾ ವಿನೀತ್, ಶಾರದಾ ಶೇಷಯ್ಯ, ನಿರ್ಮಲ ಉಮೇಶ್, ಶೇಷಮ್ಮ ವೆಂಕಟೇಶ್ ಹಾಗೂ ಮಾರಿಕಾಂಬಾ ಜಾತ್ರಾ ಸಮಿತಿಯ ನಿರ್ದೇಶಕ ಗಿರೀಶ್‌ ಸನ್ಮಾನಿಸಲಾಗುವುದು.ಎಂದರು.

ಈ ಬಾರಿಯ ಜಾತ್ರೆಯ ವಿಶೇಷ ಆಕರ್ಷಣೆಗಳಾಗಿ ವಿಜಯ್ ಅಮ್ಯೂಸ್‌ಮೆಂಟ್‌ನವರಿಂದ ರೋಮಾಂಚನಕಾರಿ ಮೈ ಜುಂ ಎನ್ನುವ ಜಾಯಿಂಟ್‌ವೀಲ್, ಕೋಲಂಬಸ್, ಬ್ರೇಕ್ ಡ್ಯಾನ್ಸ್, ಮಾರುತಿ ಡೂಮ್, ಮಕ್ಕಳ ರೈಲು, ಮ್ಯಾಜಿಕ್ ಷೋ ಡಾಗ್ ಷೋ ಹಾಗೂ ಇನ್ನೂ ಹತ್ತು ಹಲವಾರು ರೀತಿಯ ವಿಶೇಷ ಮನೋರಂಜನೆಗಳು ಇದ್ದು ಅದರ ಜೊತೆಗೆ ಪ್ರತಿ ದಿನ ರಾತ್ರಿ ಪ್ರಖ್ಯಾತ ದೂರದರ್ಶನ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮವಿದ್ದು ಫೆ. 6ರ ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮ, 7ರ ಶುಕ್ರವಾರ ಭದ್ರಾವತಿ ತಂಡದಿಂದ ಆರ್ಕೆಸ್ಟ್ರಾ, 8ರ ಶನಿವಾರ ಲೈವ್ ಮ್ಯೂಸಿಕ್ ಆರ್ಕೆಸ್ಟ್ರಾ, 9ರ ಭಾನುವಾರ ಮೂರು ಮತ್ತು ಖ್ಯಾತಿಯ ಕುಂದಾಪುರ ರೂಪಕಲಾ ತಂಡದಿಂದ ಇನ್ಸ್‌ಪೆಕ್ಟರ್ ಅಣ್ಣಪ್ಪ ನಾಟಕ, 10ರ ಸೋಮವಾರ ಡೆಸ್ಟನಿ ಡ್ಯಾನ್ಸ್ ಕೊಪ್ಪದವರಿಂದ ನೃತ್ಯ ಕಾರ್ಯಕ್ರಮ, 11ರ ಮಂಗಳವಾರ ಮ್ಯೂಸಿಕಲ್ ನೈಟ್ ಹಾಗೂ ವೈವಿದ್ಯಮಯ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಒಟ್ಟು 9 ದಿನಗಳ ಕಾಲ ಹೊಸನಗರದಲ್ಲಿ ಅದ್ದೂರಿಯಾಗಿ ಮಾರಿಜಾತ್ರೆ ನಡೆಯಲಿದ್ದು ದೇವಸ್ಥಾನದ ಭಕ್ತಾರು ಹಾಗೂ ಸಾರ್ವಜನಿಕರು ಜಾತ್ರಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.

ಈ ಸಂದರ್ಭದಲ್ಲಿ ಮಾರಿಕಾಂಬಾ ದೇವಿ ಜಾತ್ರಾ ಕಮಿಟಿಯ ಮುಖ್ಯಸ್ಥ ಹೆಚ್.ಎನ್.ನಾಗರಾಜ್, ಕಾರ್ಯದರ್ಶಿ ಟಿ.ಆರ್.ಸುನೀಲ್, ಖಜಾಂಚಿ ಪಿ.ಮನೋಹರ್, ಸದಸ್ಯರಾದ ಹೆಚ್.ಎಸ್.ಗಿರೀಶ್, ನಾರಾಯಣ, ಗೋಪಾಲ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]