ರಿಪ್ಪನ್‌ಪೇಟೆ: ಸೊರಬದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ 18 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ನಡೆದಿದೆ.
ರಿಪ್ಪನ್‌ಪೇಟೆಯ ಮದೀನಾ ಕಾಲೋನಿ ನಿವಾಸಿ ಶಬ್ಬೀರ್ ಅಹಮದ್ ಅವರ ಪುತ್ರಿ ಆಯಿಷಾ (18) ನಾಪತ್ತೆಯಾದ ಯುವತಿ. ನವೆಂಬರ್ 28 ರಂದು ಸೊರಬದಲ್ಲಿರುವ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋದವರು, ಬಳಿಕ ಮನೆಗೆ ವಾಪಸಾಗಿಲ್ಲ ಎಂದು ತಿಳಿದುಬಂದಿದೆ.
ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಿಂದ ಪ್ರಕಟಣೆ ಹೊರಡಿಸಲಾಗಿದ್ದು, ಕಾಣೆಯಾದ ಆಯಿಷಾ ಅವರ ಬಗ್ಗೆ ಯಾವುದೇ ಸುಳಿವು ಅಥವಾ ಮಾಹಿತಿ ಲಭ್ಯವಾದಲ್ಲಿ ತಕ್ಷಣವೇ ಪೊಲೀಸ್ ಠಾಣೆಗೆ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಮಾಹಿತಿ ನೀಡಬೇಕಾದ ಸಂಪರ್ಕ ಸಂಖ್ಯೆಗಳು:
- ರಿಪ್ಪನ್‌ಪೇಟೆ ಪೊಲೀಸ್ ಠಾಣೆ: 08185-242635
- ಮೊಬೈಲ್ ಸಂಖ್ಯೆ: +91 8277983045
- ಪಿಎಸ್‌ಐ, ರಿಪ್ಪನ್‌ಪೇಟೆ: 9480803365.
