Ripponpete

ದಾದಿಯರ ಸೇವಾ ಕಾರ್ಯ ಒಂದು ಚಂಡಿಕಾಹೋಮಕ್ಕೆ ಸಮ ; ವಿನಯ್‌ಗುರೂಜಿ

ರಿಪ್ಪನ್‌ಪೇಟೆ ; ಆಸ್ಪತ್ರೆಗಳಲ್ಲಿ ರೋಗಿಗಳ ಶುಶ್ರೂಷೆ ಮಾಡುವ ದಾದಿಯರ ಸೇವೆ ಒಂದು ಚಂಡಿಕಾ ಹೋಮ ಮಾಡಿದಷ್ಟಕ್ಕೆ ಸಮವಾಗಿರುತ್ತದೆಂದು ಗೌರಿಗದ್ದೆ ಅವಧೂತ ಸದ್ಗುರು ವಿನಯ್‌ಗುರೂಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆಯ ಗುಡ್‌ಶಪರ್ಡ್ ಶಾಲಾವರಣದಲ್ಲಿ ಓಂ ಶ್ರೀಮಾತೃಶ್ರೀ ಸೇವಾ ಸಮಿತಿ (ರಿ) ಎನ್.ಜಿ.ಓ ಉದ್ಘಾಟನಾ ಸಮಾರಂಭ ಮತ್ತು ಉಡುಪಿ ಆದರ್ಶ ಆಸ್ಪತ್ರೆಯವರ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯೋ ನಾರಾಯಣೋ ಹರಿ ಎಂಬಂತೆ ಗ್ರಾಮೀಣ ಪ್ರದೇಶದಲ್ಲಿನ ಜನರು ದುಡಿಮೆಯಲ್ಲಿಯೇ ತೊಡಗಿಕೊಂಡು ತಮ್ಮ ಅರೋಗ್ಯದ ಕಡೆ ನಿರ್ಲಕ್ಷ್ಯ ವಹಿಸುತ್ತಾರೆ. ಆ ಕಾರಣದಿಂದಾಗಿ ಮನೆಯ ಬಾಗಿಲಿಗೆ ತಜ್ಞ ವೈದ್ಯಾಧಿಕಾರಿಗಳ ತಂಡವನ್ನು ಕರೆಯಿಸಿ ತಮ್ಮಲ್ಲಿನ ಆರೋಗ್ಯದ ಸಮಸ್ಯಗಳ ಕುರಿತು ತಪಾಸಣೆ ಮಾಡಿಸುವ ಕಾರ್ಯವನ್ನು ಮಾಡಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಓಂ ಶ್ರೀಮಾತೃಶ್ರೀ ಸೇವಾ ಸಮಿತಿ (ರಿ)ಎನ್.ಜಿ.ಓ ಅಧ್ಯಕ್ಷೆ ಲೇಖನ ಜಿ.ನಾಯ್ಕ್ ಅಧ್ಯಕ್ಷತೆ ವಹಿಸಿ ಮಾತನಾಡಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
ಲೇಖನವನ್ನು ಮುಂದುವರಿಸಿ ಓದಿ

ನಿಟ್ಟೂರು ನಾರಾಯಣಗುರು ಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಇಂತಹ ಶಿಬಿರಗಳು ಗ್ರಾಮೀಣ ಪ್ರದೇಶದಲ್ಲಿ ಆಗಾಗ ನಡೆಸುವುದರಿಂದಾಗಿ ಜನರಲ್ಲಿನ ಆರೋಗ್ಯದ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಾಧ್ಯವೆಂದರು.

ಶಾಸಕ ಗೋಪಾಲಕೃಷ್ಣ ಬೇಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ದುಡಿಮೆಯೊಂದರಲ್ಲಿ ನಮ್ಮ ಜನರು ತೊಡಗಿಕೊಳ್ಳುವುದರಿಂದ ತಮ್ಮ ಆರೋಗ್ಯ ಕಡೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಆರೋಗ್ಯವಂತರಾಗಿದ್ದರೆ ಮಾತ್ರ ದುಡಿಮೆ ಮಾಡಲು ಸಾಧ್ಯವೆಂದ ಅವರು, ಆರೋಗ್ಯದ ಕಡೆಗೆ ಹಚ್ಚು ಒತ್ತು ನೀಡಬೇಕು ಅದರೊಂದಿಗೆ ಮಕ್ಕಳ ಶಿಕ್ಷಣ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರಗಳು ಶಿಕ್ಷಣ ಅರೋಗ್ಯಕ್ಕೆ ಹೆಚ್ಚಿನ ಸೌಲಭ್ಯಗಳನ್ನು ನೀಡುವುದರೊಂದಿಗೆ ಆಯುಷ್ಮಾನ್‌ ಕಾರ್ಡ್, ಯಶಸ್ವಿನಿ ಕಾರ್ಡ್ ಇನ್ನಿತರ ಯೋಜನೆಗಳ ಮೂಲಕ
ಹೆಚ್ಚು ಒತ್ತು ನೀಡಿ ದುಬಾರಿ ವೆಚ್ಚದ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಗಿದ್ದು ಈ ಸೌಲಭ್ಯದ ಸದ್ಬಳಕೆ ಪಡೆಯುವಂತೆ ಕರೆ ನೀಡಿ, ಇಂತಹ ಶಿಬಿರಗಳು ಪ್ರತಿ ಗ್ರಾಮಗಳಲ್ಲಿ ನಡೆಯುವಂತಾಗಬೇಕು ಎಂದರು.

ಮಾಜಿ ಸಚಿವ ಹರತಾಳು ಹಾಲಪ್ಪ ಭಾಗವಹಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಮಹತ್ವಾಕಾಂಕ್ಷಿ ಯೋಜನೆಗಳಲೊಂದಾದ ಶುಶ್ರೂಷಾ ಯೋಜನೆಯಿಂದ ಗ್ರಾಮೀಣ ಭಾಗದ ರೈತಾಪಿ ವರ್ಗದವರ ಆರೋಗ್ಯ ತಪಾಸಣೆಯನ್ನು ಶಿವಮೊಗ್ಗ ಜಿಲ್ಲೆಯ ಹಾರನಳ್ಳಿಯಲ್ಲಿ ಆರಂಭಿಸಿ ಸರ್ಕಾರದಲ್ಲಿ ಅಕ್ಷಯ ಆರಾಧನಾ, ವಿಶ್ವ ಕೃಪಾಂಕ ಹೀಗೆ ಹತ್ತು ಹಲವು ಜನಹಿತ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿದ ಕೀರ್ತಿ ಬಂಗಾರಪ್ಪರದಾಗಿತ್ತು ಎಂದ ಅವರು, ಇತ್ತೀಚಿನ ವರ್ಷಗಳಲ್ಲಿ ಆಸ್ಪತ್ರೆಗಳು ಹಣ ಮಾಡುವ ಉದ್ದೇಶದಿಂದಾಗಿ ವೈದ್ಯಕೀಯ ಕ್ಷೇತ್ರ ಕಲುಷಿತವಾಗದೆ ಎಂದು ವಿಷಾದ ವ್ಯಕ್ತಪಡಿಸಿ, ವೈದ್ಯಕೀಯ ಕ್ಷೇತ್ರ ಪವಿತ್ರ ಕ್ಷೇತ್ರವಾಗಿದೆ. ಸೇವಾವಧಿಯಲ್ಲಿ ಮಾನವೀಯತೆಯೊಂದಿಗೆ ಸೇವೆ ಮಾಡುವುದು ಪುಣ್ಯದ ಕೆಲಸವಾಗಿದೆ ಎಂದರು.

ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಶಿಮುಲ್ ಅಧ್ಯಕ್ಷ ವಿದ್ಯಾಧರ್, ಆದರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ.ಜಿ.ಎಸ್.ಚಂದ್ರಶೇಖರ್, ಕೆ.ಪಿ.ಸಿಸಿ. ರಾಜ್ಯ ಸಂಚಾಲಕ ಮಂಜುನಾಥ ಭದ್ರಾವತಿ, ಉದ್ಯಮಿ ವಿನಾಯಕ, ಕಾರ್ಯದರ್ಶಿ ಹೇಮಾಂಬಿಕ, ಉಮಾ ಸುರೇಶ್, ಸಂಗೀತ ಜಿ, ಸುಶೀಲ ಕೆ, ತ್ರಿವೇಣಿ, ಸಾಜಿದಾ, ಮೊಹಮ್ಮದ್ ಜಹೀರ್ ಇಇನ್ನಿತರರು ಪಾಲ್ಗೊಂಡಿದರು.

ಪಿಯೂಸ್ ರೋಡ್ರಿಗಸ್ ಪ್ರಾರ್ಥಿಸಿದರು. ಸಬಾಸ್ಟಿನ್‌ಮ್ಯಾಥ್ಯೂಸ್ ಸ್ವಾಗತಿಸಿ, ನಿರೂಪಿಸಿದರು.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Mahesh Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ <strong>'ಮಲ್ನಾಡ್ ಟೈಮ್ಸ್'</strong> ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. <a href="mailto:[email protected]">[email protected]</a>