ಎರಡು ಪುಟ್ಟ ಕಂದಮ್ಮಗಳನ್ನು ಬಾವಿಗೆ ತಳ್ಳಿ ತಾನು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ತಾಯಿ, ಮತ್ತಿಕೈ ಗ್ರಾಮದಲ್ಲೀಗ ಆವರಿಸಿದ ಸೂತಕದ ಛಾಯೆ !

Written by malnadtimes.com

Updated on:

HOSANAGARA | ಅದೇನು ಕೌಟುಂಬಿಕ ಸಮಸ್ಯೆ ಎದುರಾಗಿತ್ತೋ ಏನೋ. ಆ ಮಹಾ ತಾಯಿ, ತನ್ನ ಇಬ್ಬರು ಕಂದಮ್ಮಗಳ ಜೊತೆ ಪ್ರಾಣ ಕಳೆದುಕೊಂಡಿದ್ದಾಳೆ. ಇನ್ನು ಸರಿಯಾಗಿ ಪ್ರಪಂಚವೇ ನೋಡದ ಚಿಣ್ಣರು, ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಈ ಹೃದಯ ವಿದ್ರಾವಕ ಘಟನೆಯಿಂದ ಇಡೀ ಗ್ರಾಮದಲ್ಲೀಗ ಸೂತಕದ ಛಾಯೆ ಆವರಿಸಿದೆ.

WhatsApp Group Join Now
Telegram Group Join Now
Instagram Group Join Now

Gruha Lakshmi DBT Status : ಸೇವಾ ಸಿಂಧುವಿನಲ್ಲಿ ಗೃಹಲಕ್ಷ್ಮಿ ಡಿಬಿಟಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ?

ಅಷ್ಟಕ್ಕೂ ಈ ಹೃದಯವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಹೋಬಳಿಯ ಸಂಪೆಕಟ್ಟೆ ಗ್ರಾಪಂ ವ್ಯಾಪ್ತಿಯ ಮತ್ತಿಕೈ ಗ್ರಾಮದ ಚಂಪಕಾಪುರ ಎಂಬಲ್ಲಿ ನಡೆದಿದೆ.

ಒಂದು ಕಡೆ, ಮೂರು ಶವಗಳ ಮುಂದೆ ರೋಧಿಸುತ್ತಿರುವ ಕುಟುಂಬಸ್ಥರು. ಮತ್ತೊಂದು ಕಡೆ ಗ್ರಾಮದಲ್ಲಿ ಸೂತಕದ ಛಾಯೆಯೊಂದಿಗೆ ನೀರವ ಮೌನ. ಅದ್ಯಾವುದೋ ಕೌಟುಂಬಿಕ ಸಮಸ್ಯೆ ವಿಚಾರದಲ್ಲಿ ಈ ಗ್ರಾಮದ ಮಹಿಳೆಯೊಬ್ಬರು, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲಾ, ತನ್ನೆರೆಡು ಪುಟ್ಟ ಕಂದಮ್ಮಗಳನ್ನು ಸಹ ಮೊದಲು ಬಾವಿಗೆ ತಳ್ಳಿ, ಬಳಿಕ ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮತ್ತಿಕೈ ಗ್ರಾಮದಲ್ಲಿಯೇ ಇಂತಹದೊಂದು ಹೃದಯವಿದ್ರಾವಕ ಘಟನೆ ನಡೆದಿದ್ದು, ತನ್ನೆರೆಡು ಮಕ್ಕಳೊಂದಿಗೆ ತಾಯಿ ವಾಣಿ (32) ಆತ್ಮಹತ್ಯೆಗೆ ಶರಣಾದ ದುರ್ದೈವಿಯಾಗಿದ್ದಾಳೆ. ಜೊತೆಗೆ ಮಕ್ಕಳಾದ ಸಮರ್ಥ (12), ಸಂಪದ (06) ಮೃತರಾದ ದುರ್ಧೈವಿಗಳು.

ಏಣಿ ತಂದ ಆಪತ್ತು, ವಿದ್ಯುತ್ ತಗುಲಿ ವ್ಯಕ್ತಿ ಸಾವು !

ಇನ್ನು ಇಲ್ಲಿನ ಚಂಪಕಾಪುರ ವಾಸಿ ಕೃಷಿಯೊಂದಿಗೆ ಎಲೆಕ್ಟ್ರಿಷಿಯನ್ ಕೆಲಸ ನಿರ್ವಹಿಸುತ್ತಿದ್ದ ರಾಜೇಶ್ ಎಂಬುವವರ ಪತ್ನಿ ವಾಣಿ ಆತ್ಮಹತ್ಯೆ ನಿರ್ಧಾರಕ್ಕೆ ಕಾರಣ ತಿಳಿದು ಬಂದಿಲ್ಲ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದರೂ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ರಾಜೇಶ್ ಪಕ್ಕದ ಮನೆಯ ಬಾವಿಗೆ ಹಾರಿರುವ ವಾಣಿ, ಮಾನಸಿಕ ಖಿನ್ನತೆ, ಕುಟುಂಬ ನಿರ್ವಹಣೆಯ ಒತ್ತಡದಿಂದ ಬಳಲುತ್ತಿದ್ದರೆಂದು ಹೇಳಲಾಗಿದೆ.

ಸದ್ಯ ಮೃತ ದೇಹಗಳನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದ್ದು, ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ನೀವು ಕೂಡ ಸ್ವಂತ ಉದ್ದಿಮೆ ಶುರುಮಾಡಬೇಕೆ? ಇಲ್ಲಿವೆ ಕರ್ನಾಟಕ ಸರ್ಕಾರ ನೀಡುವ ಸ್ವಯಂ ಉದ್ಯೋಗ ಸಾಲ ಯೋಜನೆಗಳು !

ನಗರ ಠಾಣೆ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಒಟ್ಟಿನಲ್ಲಿ, ಮಹಿಳೆ ಜೊತೆಗೆ ಇಬ್ಬರು ಮಕ್ಕಳ ಸಾವು ಇಡೀ ಗ್ರಾಮದಲ್ಲಿ ಸೂತಕದ ಛಾಯೇ ಆವರಿಸಿದ್ದು, ಪುಟ್ಟ ಕಂದಮ್ಮಗಳ ಸಾವು ಕರುಳು ಕಿವುಚುವಂತಾಗಿದೆ.ಏನೇ ಆಗಲಿ ಪ್ರಪಂಚದ ಅರಿವೇ ಇಲ್ಲದ ಮಕ್ಕಳ ಅಗಲಿಕೆಗೆ ಇಡೀ ಗ್ರಾಮ ಕಂಬನಿ ಮಿಡಿಯುವಂತಾಗಿದೆ.

Leave a Comment