ಸಾಗರ : ಹಣಕಾಸಿನ ವಿಚಾರಕ್ಕೆ ಕೆಫೆ ಮಾಲಿಕ ಹಾಗೂ ಕಾರ್ಮಿಕನ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ.
ಇಲ್ಲಿನ ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಟಿಂಕು ಶರ್ಮಾ (30) ಮೃತ ವ್ಯಕ್ತಿಯಾಗಿದ್ದು ಈತನ ಶವ ಹೊಂಡಾಸಿಟಿ ಕಾರಿನಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾಗಿದೆ. ಕೆಫೆ ಮಾಲಿಕ ಇಮ್ರಾನ್ (30), ಕೊಲೆ ಆರೋಪಿ ಎಂದು ಗುರುತಿಸಲಾಗಿದೆ.
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾಲಿಕ ಹಾಗೂ ಕಾರ್ಮಿಕನ ನಡುವೆ ನಿನ್ನೆ ರಾತ್ರಿಯಿಂದಲೂ ಜಗಳ ನಡೆಯುತ್ತಿತ್ತು, ಬೆಳಗ್ಗೆ ಕೂಡ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಪಿ ಹಾಗೂ ಮೃತನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಮಾಲಿಕ ಇಮ್ರಾನ್ ಕೆಲಸದಾಳುವಿಗೆ ಹಲ್ಲೆ ಮಾಡಿದ್ದಾನೆ ಎಂದು ಶಿವಮೊಗ್ಗ ಎಸ್‌ಪಿ ನಿಖಿಲ್ ಪ್ರಾಥಮಿಕ ಮಾಹಿತಿ ನೀಡಿದರು.
ಆರೋಪಿ ಇಮ್ರಾನ್ ಸಾಗರ ಠಾಣೆ ಪೊಲೀಸರ ವಶದಲ್ಲಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

