RIPPONPETE | ಪುರಾಣ ಪ್ರಸಿದ್ದ ಶ್ರೀನಾಗರಹಳ್ಳಿ ನಾಗೇಂದ್ರಸ್ವಾಮಿಯ ಜಾತ್ರಾ ಮಹೋತ್ಸವವು ವಿಜೃಂಭಣೆಯೊಂದಿಗೆ ಸಂಪನ್ನಗೊಂಡಿತು.
ಬೈಕ್ ಮತ್ತು ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ, ಓರ್ವ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ !
ಮುಂಜಾನೆಯಿಂದ ಆರಂಭಗೊಂಡ ಅಭಿಷೇಕ ಪೂಜೆ ಮತ್ತು ಹೂವಿನ ಅಲಂಕಾರ ಪೂಜೆ ನಂತರ ಮಹಾಮಂಗಳಾರತಿಯೊಂದಿಗೆ ನಾಗೇಂದ್ರ ಸ್ವಾಮಿಗೆ ಹರಕೆ ಹಣ್ಣು-ಕಾಯಿ ಸಮರ್ಪಿಸಿ ದೇವರ ದರ್ಶನ ಪಡೆದರು.

ಮದುವೆ, ಸಂತಾನ ಭಾಗ್ಯ, ಬೆಳೆ ಸಂವೃದ್ಧಿಯಾಗಿ ಬೆಳೆದು ಉತ್ತಮ ಫಸಲು ಬರುವಂತಾಗಲಿ ಎಂದು ಹೀಗೆ ದೇವರಲ್ಲಿ ಪ್ರಾರ್ಥಿಸಿ ಹರಕೆ ಇಟ್ಟರು ಬರುವ ಬೇಸಿಗೆಯ ಕೂಳೆ ಪಂಚಮಿಯ ಒಳಗೆ ಈಡೇರುವುದೆಂಬ ನಂಬಿಕೆ ಇಲ್ಲಿನ ವಿಶೇಷವೆಂದು ದೇವಸ್ಥಾನ ಪ್ರಧಾನ ಅರ್ಚಕರು ಮಾಧ್ಯಮದವರಿಗೆ ತಿಳಿಸಿದರು.
ನೀವು ಕೂಡ ಸ್ವಂತ ಉದ್ದಿಮೆ ಶುರುಮಾಡಬೇಕೆ? ಇಲ್ಲಿವೆ ಕರ್ನಾಟಕ ಸರ್ಕಾರ ನೀಡುವ ಸ್ವಯಂ ಉದ್ಯೋಗ ಸಾಲ ಯೋಜನೆಗಳು !
ದೇವಸ್ಥಾನ ಮುಜರಾಯಿ ಇಲಾಖೆ ಒಳಪಟ್ಟಿರುವ ಹಿನ್ನೆಲೆಯಲ್ಲಿ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಮತ್ತು ದೇವಸ್ಥಾನ ಧರ್ಮದರ್ಶಿ ಸಮಿತಿ ಅಧ್ಯಕ್ಷ ಗೇರುಗಲ್ಲು ಸತೀಶ್, ಹುಗುಡಿ ವರ್ತೇಶಗೌಡ,
ವೀರಭದ್ರಪ್ಪಗೌಡ ಹುಗುಡಿ ಸಮಿತಿಯ ಇನ್ನಿತರರು ಹಾಜರಿದ್ದರು.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.