ಹೊಸನಗರ

ಹೊಸನಗರದಲ್ಲಿ ಜ. 16, 17 ಮತ್ತು 18 ರಂದು ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ

HOSANAGARA ; ಇಲ್ಲಿನ ನೆಹರು ಮೈದಾನದಲ್ಲಿ ಜನವರಿ 16, 17 ಮತ್ತು 18ರಂದು ಹೊಸನಗರ ತಾಲ್ಲೂಕು ಸತತ 3ನೇ ಬಾರಿಗೆ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಹೊಸನಗರ ಬ್ರದರ್ಸ್ ನವರಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಕ್ರೀಡಾಕೂಟದ ಅಧ್ಯಕ್ಷ ಸಂತೋಷ್ ಕೊಟ್ಯಾನ್‌ ತಿಳಿಸಿದರು.

WhatsApp Group Join Now
Telegram Group Join Now
Instagram Group Join Now

ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಸತತ ಮೂರು ವರ್ಷಗಳಿಂದ ಹೊಸನಗರ ಬ್ರದರ್ಸ್ ಎಂಬ ಹೆಸರಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದ್ದು ಸುಮಾರು ಅಂದಾಜು ವೆಚ್ಚ 20 ಲಕ್ಷ ರೂ. ದಾಟಲಿದೆ. ಪ್ರಥಮ ಬಹುಮಾನವಾಗಿ 3 ಲಕ್ಷ ರೂ. ಹಾಗೂ ದ್ವಿತೀಯ ಬಹುಮಾನವಾಗಿ 2 ಲಕ್ಷ ರೂ. ಹಾಗೂ ತೃತೀಯ ಬಹುಮಾನವಾಗಿ 60 ಸಾವಿರ ರೂ. ಚತುರ್ಥ ಬಹುಮಾನವಾಗಿ 40 ಸಾವಿರ ರೂ. ಇದರ ಜೊತೆಗೆ ಬ್ಯಾಟಿಂಗ್, ಬೌಲಿಂಗ್ ಸರಣಿ ಶ್ರೇಷ್ಠ ಪಂದ್ಯ ಪುರುಷೋತ್ತಮ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು.

ಪಂದ್ಯಾವಳಿಯ ವಿಶೇಷತೆ ಎಂದರೆ ರಾಷ್ಟೀಯ ಮತ್ತು ರಾಜ್ಯ ಹಾಗೂ ಮಲೆನಾಡು ಪ್ರತಿಷ್ಠಿತ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು ಈ ಪಂದ್ಯಾವಳಿಯ ನೇರಪ್ರಸಾರವನ್ನು ನೀಡಲಾಗುವುದು ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲ್ಲೂಕಿನ ಕ್ರೀಡಾಭಿಮಾನಿಗಳು ಹಾಗೂ ಹೊಸನಗರದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿ ಕ್ರೀಡಾಪಟುಗಳನ್ನು ಉತ್ಸಾಹದೊಂದಿಗೆ ಕ್ರಿಕೆಟ್ ಆಟಗಾರರಿಗೆ ಆಟವಾಡಲು ಉತ್ತೇಜಿಸಬೇಕೆಂದು ಈ ಮೂಲಕ ಕೇಳಿಕೊಂಡರು.

ಈ ಪತ್ರಿಕಾಗೋಷ್ಠಿಯಲ್ಲಿ ಸಂದರ್ಭದಲ್ಲಿ ಮಹೇಶ್ ಬಾಣಿಗ, ಉದಯಶೆಟ್ಟಿ, ಇಸ್ಮಾಯಿಲ್, ಪ್ರವೀಣ್ ಜಿ.ಎಸ್, ಪ್ರವೀಣ್ ಹೆಚ್.ವಿ, ವಿಕ್ರಮ್, ಗಣೇಶ್, ರಾಘವೇಂದ್ರ, ಅನೂಪ್, ತೌಫಿಕ್, ವಿನಯ್‌ಕುಮಾರ್, ಸುರೇಂದ್ರ ಕೊಟ್ಯಾನ್, ಕಟ್ಟೆ ಸುರೇಶ, ಮುಜೀಬ್, ಸುನೀಲ್ ಪಟೋಡಿ, ಕಾರ್ತಿಕ್, ವೆಂಕಟೇಶ್, ವಿಜು, ರೋಹಿತ್ ಗೌಡ, ಹೆಚ್.ಎಸ್. ರಾಘವೇಂದ್ರ, ಅವಿನಾಶ್, ಮಾಂತೇಶ್, ಸಂದೀಪ್ ಶರತ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]