ಸೆಪ್ಟೆಂಬರ್ 22 ರಿಂದ ಸಾಗರದಲ್ಲಿ ಸಂಭ್ರಮದ ‘ನವರಾತ್ರ ನಮಸ್ಯಾ’ — ನಾಳೆ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಅದ್ದೂರಿ ಪುರಪ್ರವೇಶ

Written by Koushik G K

Published on:

ಸಾಗರ: ಸಾಗರ ಅಗ್ರಹಾರದಲ್ಲಿ ಸೆಪ್ಟೆಂಬರ್ 22ರಿಂದ ಆರಂಭವಾಗಲಿರುವ “ನವರಾತ್ರ ನಮಸ್ಯಾ” ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಪೂರ್ಣಗೊಂಡಿದೆ. ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕಾಗಿ ಸಾಗರ ಪಟ್ಟಣದಾದ್ಯಂತ ಈಗಾಗಲೇ ಸಂಭ್ರಮದ ವಾತಾವರಣ ಮೂಡಿದೆ.

WhatsApp Group Join Now
Telegram Group Join Now
Instagram Group Join Now

ಧಾರ್ಮಿಕ ಕಾರ್ಯಕ್ರಮಗಳ ವೈಭವ

📢 Stay Updated! Join our WhatsApp Channel Now →

ನವರಾತ್ರ ನಮಸ್ಯಾ ಅಂಗವಾಗಿ ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ 3.30ರಿಂದ 5 ಗಂಟೆಯವರೆಗೆ ಲಲಿತೋಪಾಖ್ಯಾನ ಪ್ರವಚನ ಇರಲಿದೆ. ನಂತರ ದೀಪಾಲಂಕಾರ, ದುರ್ಗಾದೀಪ ಪೂಜೆ, ಕುಂಕುಮಾರ್ಚನೆ ಸೇರಿದಂತೆ ವಿಶೇಷ ಆರಾಧನೆ ನಡೆಯಲಿದೆ. ಏಕಾದಶಿಯಂದು ಶ್ರೀಚಕ್ರ ಪೂಜೆ ವಿಶೇಷ ಆಕರ್ಷಣೆಯಾಗಲಿದೆ.

ಸಮಿತಿಯ ಭವ್ಯ ಸಿದ್ಧತೆ

ಹೊಸನಗರ, ಸಾಗರ ಹಾಗೂ ಸಿದ್ದಾಪುರವನ್ನು ಒಳಗೊಂಡ ಸಾಗರ ಪ್ರಾಂತ್ಯದ ಶಿಷ್ಯಭಕ್ತರ ಸಮಿತಿ ಈ ಬಾರಿ ನವರಾತ್ರ ನಮಸ್ಯಾಕ್ಕೆ ಭಾರೀ ಸಿದ್ಧತೆ ನಡೆಸಿದ್ದು, ಅಕ್ಷತಾಭಿಯಾನದ ಮೂಲಕ ಮನೆಮನೆಗೆ ಆಹ್ವಾನ ನೀಡಲಾಗಿದೆ. ಮಾತೃವಿಭಾಗದ ಮಾತೆಯರು, ಉಡಿ ಸೇವೆ ಹಾಗೂ ಶಿಷ್ಯಭಕ್ತರು ಸೇರಿಕೊಂಡು ಅಪಾರ ಸಂಖ್ಯೆಯಲ್ಲಿ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ.

ಒಟ್ಟು 14 ವಿಭಾಗಗಳ ಸಮಿತಿಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ರೂಪುಗೊಂಡಿದ್ದು, ಪ್ರತಿ ವಿಭಾಗದಲ್ಲಿ 10ಕ್ಕೂ ಹೆಚ್ಚು ಸಹಸಂಚಾಲಕರು ಕಾರ್ಯನಿರ್ವಹಿಸಲಿದ್ದಾರೆ. ಹೀಗಾಗಿ 500 ಕ್ಕೂ ಹೆಚ್ಚು ಕಾರ್ಯಕರ್ತರು ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮದ ಯಶಸ್ಸಿಗಾಗಿ ಸೇವೆ ಸಲ್ಲಿಸಲಿದ್ದಾರೆ.

ಪುರಪ್ರವೇಶ ಭವ್ಯ ಮೆರವಣಿಗೆ

ನವರಾತ್ರ ನಮಸ್ಯಾಕ್ಕೆ ಸಾನ್ನಿಧ್ಯ ವಹಿಸಲಿರುವ ಶ್ರೀ ರಾಘವೇಶ್ವರ ಭಾರತೀ ಶ್ರೀಗಳವರ ಪುರಪ್ರವೇಶ ಕಾರ್ಯಕ್ರಮ ಸೆಪ್ಟೆಂಬರ್ 20, ಶನಿವಾರ ಸಂಜೆ 5.30ಕ್ಕೆ ನಡೆಯಲಿದೆ. ಶಾರದಾಂಬ ವೃತ್ತದಿಂದ ಚಾಮರಾಜಪೇಟೆ ಮಾರ್ಗವಾಗಿ ಗಣಪತಿ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ಆಯೋಜಿಸಲಾಗಿದ್ದು, 500 ಕ್ಕೂ ಹೆಚ್ಚು ಮಾತೆಯರಿಂದ ಪೂರ್ಣಕುಂಭ ಸ್ವಾಗತ ಸಿದ್ಧವಾಗಿದೆ.

ಮೆರವಣಿಗೆಯಲ್ಲಿ ನಾದಸ್ವರ ವಾದನ, ಮೂರು ಪ್ರಸಿದ್ಧ ಚಂಡೆ ತಂಡಗಳ ಚೆಂಡೆ ವಾದನ, ಶ್ರೀರಾಮನ ಆಕೃತಿಯ ವಿಶೇಷ ಮೂರ್ತಿ, 20 ಕ್ಕೂ ಹೆಚ್ಚು ಸಮಾಜಗಳ ಭಜನಾ ತಂಡಗಳ ಪ್ರದರ್ಶನ ಹಾಗೂ ಕುಂದಾಪುರ ಶಿರೂರಿನ ಕಲಾವಿದರಿಂದ ನೃತ್ಯ ಭಜನಾ ವಿಶೇಷ ಆಕರ್ಷಣೆಯಾಗಲಿದೆ.

Leave a Comment