ಭೂ ಪರಿವರ್ತನೆಯ ನಿವೇಶನಗಳ 9&11 ಮಾಡಲು ಗ್ರಾಮಾಡಳಿತ ನಿರ್ಲಕ್ಷ್ಯ, ಆದಾಯ ಬರುವ ವ್ಯವಸ್ಥೆಗೆ ಕತ್ತರಿ !

Written by malnadtimes.com

Published on:

RIPPONPETE ; 1984-95ನೇ ಸಾಲಿನಲ್ಲಿ ಉಪವಿಭಾಗಾಧಿಕಾರಿಗಳು ಖಾಸಗಿಯವರ ಜಮೀನಿನಲ್ಲಿ ಭೂಪರಿವರ್ತನೆ ಮಾಡುವ ಅಧಿಕಾರ ಹೊಂದಿದ್ದು ಆ ಸಂದರ್ಭದಲ್ಲಿ ಭೂ ಪರಿವರ್ತನೆಯಾದ ಜಾಗದ ನಿವೇಶನಗಳನ್ನು ಗ್ರಾಮಾಡಳಿತ ಹಾಲಿ 9&11 ಮಾಡಲು ವಿಳಂಬ ಧೋರಣೆ ತಾಳಿರುವುದರ ಹಿಂದಿನ ಮರ್ಮವೇನು ಎಂಬುದು ಸಾರ್ವಜನಿಕರಲ್ಲಿ ಸಂಶಯಕ್ಕೆ ಎಡೆಮಾಡಿದಂತಾಗಿದೆ.

WhatsApp Group Join Now
Telegram Group Join Now
Instagram Group Join Now

ಭೂ ಪರಿವರ್ತನೆ ಮಾಡಲಾದ ನಿವೇಶನಗಳನ್ನು ಹಲವರು ಮಾರಾಟ ಮಾಡುವ ಮೂಲಕ ನೋಂದಾಣಿಕರಾರಿ ಕಛೇರಿಯಲ್ಲಿ ರಿಜಿಸ್ಟರ್ ಆಗಿರುತ್ತವೆ. ಇದರಿಂದ ಸ್ಥಳೀಯ ಗ್ರಾಮಾಡಳಿತಕ್ಕೆ ಹೆಚ್ಚಿನ ರೆವಿನ್ಯೂ ಸಹ ಬರುತ್ತದೆ. ಆದರೆ ಇತ್ತೀಚಿನ ಸರ್ಕಾರಗಳು ಅನುಷ್ಟಾನಗೊಳಿಸಿರುವ ನಗರ ಗ್ರಾಮಾಂತರ ಯೋಜನಾ ಇಲಾಖೆಯ ಮೂಲಕ ರೆವಿನ್ಯೂ ಜಾಗವನ್ನು ಅಲಿನೇಷನ್ (ಭೂಪರಿವರ್ತನೆ) ಮಾಡಿ ಪ್ಲಾನ್ ಅಂಡ್ ಎಸ್ಟಿಮೆಂಟ್‌ಗೆ ಅನುಮೋದನೆ ನೀಡುವ ಮುನ್ನ ಸಂಪರ್ಕ ರಸ್ತೆ 30 ಅಡಿ ಅಗಲ ಹಾಗೂ ಬಪರ್ ಝೋನ್ ಮತ್ತು ಕ್ರೀಡಾಂಗಣ ಬಾಕ್ಸ್ ಡೈನೇಜ್ (ಒಳಚಂರಡಿ), ಪಾರ್ಕಿಂಗ್, ವಿದ್ಯುತ್ ವ್ಯವಸ್ಥೆ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆಯಿಂದರೆ ಮಾತ್ರ ಅನುಮತಿ ನೀಡುತ್ತಿದ್ದು ಈ ರೀತಿಯಲ್ಲಿ ಭೂ ಪರಿವರ್ತನೆಯಾದ ನಿವೇಶನಗಳಿಗೆ ಪಂಚಾಯ್ತಿ ಎನ್.ಓ.ಸಿ.ಯನ್ನು ಸಹ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಈ ರೀತಿಯಲ್ಲಿ ಭೂ ಪರಿವರ್ತನೆಯಾದ ನಿವೇಶನಗಳಿಗೆ ರಾಜ್ಯ ಗ್ರಾಮೀಣಾಭಿವೃದ್ದಿ ಪಂಚಾಯಿತ್ ರಾಜ್ ಇಲಾಖೆಯವರು ಸ್ಥಳೀಯಾಡಳಿತ ತನ್ನ ಸಂಪನ್ಮೂಲ ಹೆಚ್ಚಳಕ್ಕೆ ಕಡ್ಡಾಯವಾಗಿ 9&11 ಮಾಡಿಸುವುದು ಇದರಿಂದ ನಿವೇಶನ ಖರೀಧಿದಾರರಿಗೆ
ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಸುಲಭವಾಗಿ ಗೃಹ ನಿರ್ಮಾಣ ಇನ್ನಿತರ ಅಭಿವೃದ್ದಿ ಸಾಲ ಸೌಲಭ್ಯ ಪಡೆಯಲು ಸಹಕಾರಿಯಾಗುತ್ತಿತ್ತು. ಆದರೆ ಇಲ್ಲಿನ ಗ್ರಾಮಾಡಳಿತದಲ್ಲಿ ಅದಾಯ ತರುವಂತಹ ಸುಲಭ ವ್ಯವಸ್ಥೆಯಿದ್ದರೂ ಕೂಡಾ ಹಿಂದೆ 1984-95ನೇ ಸಾಲಿನಲ್ಲಿ ಉಪವಿಭಾಗಾಧಿಕಾರಿಗಳು ಖಾಸಗಿಯವರ ಜಮೀನಿನಲ್ಲಿ ಭೂಪರಿವರ್ತನೆ ಮಾಡಲಾಗಿರುವ ಜಾಗದಲ್ಲಿನ ನಿವೇಶನಗಳಿಗೆ 9&11 ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದರೆ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ನಿರ್ಣಯವಾಗಬೇಕು ಎಂದು ಹೇಳುತ್ತಾರೆ. ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಮಾಡಬಹುದೆಂದು ನಿರ್ಣಯಿಸಿದರೂ ಕೂಡಾ ಅಧಿಕಾರಿವರ್ಗ ಇಲ್ಲ ಸಲ್ಲದ ಸಬೂಬು ಹೇಳಿ ವಿಳಂಬ ಮಾಡುತ್ತಿದ್ದಾರೆ ಕಾರಣ ಏನು ಎಂಬ ಬಗ್ಗೆ ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರು ರಿಪ್ಪನ್‌ಪೇಟೆಗೆ ಭೇಟಿ ನೀಡಿದಾಗ ಮಾಧ್ಯಮದವರು ಈ ವಿಚಾರವಾಗಿ ಪ್ರಸ್ತಾಪಿಸಿದಾಗ ನನಗೂ ಗೊತ್ತಿಲ್ಲ ಈ ಬಗ್ಗೆ ನಗರ ಗ್ರಾಮಾಂತರ ಯೋಜನಾ ಇಲಾಖೆಯವ ಮತ್ತು ಕಂದಾಯ ಇಲಾಖೆಯ ಆಯುಕ್ತರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಆದರೆ ಸ್ಥಳೀಯ ಗ್ರಾಮಾಡಳಿತಕ್ಕೆ ಆದಾಯ ತರುವಂತಹ ಹಿಂದೆ 1984-95ನೇ ಸಾಲಿನಲ್ಲಿ ಉಪವಿಭಾಗಾಧಿಕಾರಿಗಳು ಖಾಸಗಿಯವರ ಜಮೀನಿನಲ್ಲಿ ಭೂಪರಿವರ್ತನೆ ಮಾಡಲಾಗಿರುವ ಜಾಗದಲ್ಲಿನ ನಿವೇಶನಗಳಿಗೆ 9&11 ಮಾಡಿಕೊಡುವ ವ್ಯವಸ್ಥೆಯನ್ನು ಸರ್ಕಾರ ಪರಾಮರ್ಶೆ ಮಾಡಿ ತಕ್ಷಣ ಅನುಷ್ಟಾನಗೊಳಿಸಿದಲ್ಲಿ
ಸ್ಥಳೀಯಾಡಳಿತಕ್ಕೆ ಹೆಚ್ಚು ರೆವಿನ್ಯೂ ಸಂಗ್ರಹವಾಗುವ ಮೂಲಕ 15ನೇ ಹಣಕಾಸು ಯೋಜನೆಗೆ ಪುಷ್ಟಿ ನೀಡಿದಂತಾಗುವುದೆಂಬ ಕಲ್ಪನೆ ಸಾರ್ವಜನಿಕರದಾಗಿದೆ.

ಹಣಬಲವಿದ್ದವರೂ ಬದುಕುತ್ತಾರೆ. ಆದರೆ ಬಡವರಾದ ಹಲವರು ಜೀವನದಲ್ಲಿ ಒಂದು ಭೂಪರಿವರ್ತನೆ ಜಾಗವನ್ನು ಖರೀದಿಸಿಕೊಂಡು ನೋಂದಣಿ ಮಾಡಿಸಿಕೊಂಡು 9&11 ದಾಖಲೆ ಪತ್ರಕ್ಕಾಗಿ ಬಕಪಕ್ಷಿಯಂತೆ ಗ್ರಾಮಾಡಳಿತದ ಕಛೇರಿಗೆ ಅಲೆಯುವಂತಾಗಿದೆ ಇನ್ನಾದರೂ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಸರ್ಕಾರ ಇತ್ತ ಗಮನಹರಿಸಿ ಮುಕ್ತಿ ನೀಡುವರೇ ಕಾದು ನೋಡಬೇಕಾಗಿದೆ.

Leave a Comment