ಹೊಸನಗರ : ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಹುದ್ದೆಯಲ್ಲಿ ಬದಲಾವಣೆಯಾಗಿದ್ದು ಶಂಕರಗೌಡ ಪಾಟೀಲ್‌ರನ್ನು ವರ್ಗಾವಣೆಗೊಳಿಸಿ ನೂತನವಾಗಿ ಸಂತೋಷ ಬಾಗೋಜಿ ಪಿಎಸ್‌ಐ ಆಗಿ ಅಧಿಕಾರವನ್ನು ಸೋಮವಾರ ಸಂಜೆ ಸ್ವೀಕರಿಸಿದರು.
ನೂತನವಾಗಿ ಅಧಿಕಾರ ವಹಿಸಿಕೊಂಡ ಸಂತೋಷ್ ಬಾಗೋಜಿಯನ್ನು ಹೊಸನಗರದ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ ಸಮಿತಿಯ ವತಿಯಿಂದ ಬೃಂದಾವನ ಸಮಿತಿಯ ಅಧ್ಯಕ್ಷ ವಿಜೇಂದ್ರ ಶೇಟ್, ಸಮಿತಿಯವರು ಸರ್ಕಲ್ ಇನ್ಸ್ಪೇಕ್ಟರ್‌ರಾಗಿ ಕಾರ್ಯನಿರ್ವಹಿಸುತ್ತಿರುವ ಗೌಡಪ್ಪ ಗೌಡರ್ ಹಾಗೂ ನೂತನವಾಗಿ ಆಗಮಿಸಿದ ಪಿಎಸ್‌ಐರನ್ನು ಮಠದ ಆವರಣದಲ್ಲಿ ಅದ್ದೂರಿಯಾಗಿ ಸನ್ಮಾನಿಸಿ ಹೊಸನಗರ ಪಟ್ಟಣದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಲಿ ಹಾಗೂ ಮುಂದಿನ ದಿನದಲ್ಲಿ ಉನ್ನತ ಹುದ್ದೆ ಅಲಂಕರಿಸಲಿ ಎಂದು ಶುಭ ಹಾರೈಸಿದರು.
ಯಾವುದೇ ಕೆಲಸ ಮಾಡಬೇಕಾದರೂ ದೇವರು ಕೃಪೆ ಬೇಕು :
ಯಾವುದೇ ಕೆಲಸ ಮಾಡಬೇಕಾದರೂ ದೇವರ ದೃಷ್ಠಿಯಿಂದ ಮೇಲೆ ನಿಂತಿರುತ್ತದೆ ದೇವರು ಕರುಣಿಸಿದರೇ ಮಾತ್ರ ಕೆಲಸದಲ್ಲಿ ಏಳಿಗೆ ಕಾಣಲು ಸಾಧ್ಯವೆಂದು ಸನ್ಮಾನ ಸ್ವೀಕರಿಸಿ ಸರ್ಕಲ್ ಇನ್ಸ್ಪೇಕ್ಟರ್ ಗೌಡಪ್ಪ ಗೌಡರ್ ಹೇಳಿದರು.
ನಾವು ಮಾಡುವ ಕೆಲಸ ನಮ್ಮ ಮನಸ್ಸಿಗೆ ತೃಪ್ತಿಯಾಗುವ ಹಾಗೇ ಇರಬೇಕು. ಯಾರೊಬ್ಬರ ಹಿತಕ್ಕಾಗಿ ಸೇವೆ ಸಲ್ಲಿಸುವುದಲ್ಲ ಅದು ಅಲ್ಲದೇ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುವಾಗ ಜಾಗೃತರಾಗಿ ಹೆಜ್ಜೆ ಇಡಬೇಕು. ಆ ಕೆಲಸವನ್ನು ನೂತನವಾಗಿ ಪಿಎಸ್‌ಐಯಾಗಿ ಆಗಮಿಸಿದ ಸಂತೋಷ್ ಮಾಡುತ್ತಾರೆ ಎಂಬ ನಂಬಿಕೆಯಿದೆ ಯಾರಿಗೂ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂತೆ ನಿಷ್ಠೆಯಿಂದ ಸೇವೆ ಸಲ್ಲಿಸಲಿ ಎಂದರು.
ಈ ಸನ್ಮಾನಿಸುವ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಬೃಂದಾವನ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಕಂಚುಗಾರ್, ಅಧ್ಯಕ್ಷ ವಿಜೇಂದ್ರ ಶೇಟ್, ಪ್ರಧಾನ ಅರ್ಚಕರಾದ ಟಿ.ಆರ್. ಪ್ರಸನ್ನಭಟ್, ಉಪಾಧ್ಯಕ್ಷ ಚಂದ್ರಶೇಖರಶೇಟ್, ಕಾರ್ಯದರ್ಶಿ ರಾಧಾಕೃಷ್ಣ, ಸಹಕಾರ್ಯದರ್ಶಿ ರಂಗನಾಥ್ ಎನ್, ಖಜಾಂಚಿ ವಾಸುದೇವ ಪಿ, ನಿರ್ದೇಶಕರಾದ ಜಿ. ವಾದಿರಾಜ್ ಭಟ್, ಸದಾಶಿವ ಶ್ರೇಷ್ಠಿ, ರವಿ ಶೇಟ್, ಹರೀಶ್ ಕೆ.ಆರ್, ಸುದೇಶ್ ಕಾಮತ್, ಗಣೇಶ್ ಶೇಟ್, ಧನಂಜಯ ಮಂಡಾನಿ, ಹೆಚ್.ಎಂ ನಿತ್ಯಾನಂದ ನಾಯ್ಕ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

