Ripponpete

ಅಮ್ಮನಘಟ್ಟ ನೂತನ ಶಿಲಾಮಯ ದೇವಾಲಯ ಲೋಕಾರ್ಪಣೆ ; ದೇವಸ್ಥಾನದಲ್ಲಿ ಜಾತಿ ಭೇದ ಭಾವನೆ ಬೇಡ

ರಿಪ್ಪನ್‌ಪೇಟೆ ; ದೇವಸ್ಥಾನದಲ್ಲಿ ಎಲ್ಲಾ ಧರ್ಮಿಯರನ್ನು ಸಮಾನತೆಯಿಂದ ಕಾಣುವಂತಾಗಬೇಕು. ಜಾತಿ ಭೇದ ಭಾವನೆಯಿಂದ ನೋಡದೆ ಭಕ್ತಿ ಭಾವದಲ್ಲಿ ಕಾಣುವಂತಾಗಬೇಕು. ಮರ ಹೇಗೆ ಎಲ್ಲ ಧರ್ಮೀಯರಿಗೂ ನೆರಳು ಕೊಡುತ್ತದೋ ಹಾಗೆ ದೇವಸ್ಥಾನಗಳು ಸರ್ವರನ್ನು ಸಮಾನ ದೃಷ್ಠಿಯಲ್ಲಿ ನೋಡುವಂತಾಗಬೇಕು ಎಂದು ಹಾವೇರಿ ಜಿಲ್ಲೆ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಕೋಡೂರು ಸಮೀಪದ ಇತಿಹಾಸ ಪ್ರಸಿದ್ದ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ಶಿಲಾಮಯ ಕಟ್ಟಡದ ಮಹಾದ್ವಾರವನ್ನು ಉದ್ಘಾಟಿಸಿ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಧರ್ಮದಲ್ಲಿ ರಾಜಕೀಯವನ್ನು ಬೆರೆಸದೆ ಎಲ್ಲರನ್ನು ಸಂಘಟಿಸುವ ಮೂಲಕ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವುದರೊಂದಿಗೆ ಸಮಾಜದಲ್ಲಿ ಶಾಂತಿ ನೆಮ್ಮದಿಯೊಂದಿಗೆ ಸಾಮಾರಸ್ಯ ಬೆಳೆಸಿಕೊಳ್ಳಲು ಸಾಧ್ಯವೆಂದ ಅವರು, ಹಿಂದೆ ಏನಾದರು ಮನೆಯಲ್ಲಿ ಕಾಯಿಲೆ ಕಾಣಿಸಿಕೊಂಡರೆ ಹಳ್ಳಿಗಳಲ್ಲಿ ದೆವ್ವ ಭೂತ ಚೇಷ್ಟೆ ಎಂದು ದೇವರು ಬಂದಿದೆ ಎಂದು ಕೆಲವರು ಮೂಡನಂಬಿಕೆಯಿಂದ ಸಾಕಷ್ಟು ಮುಗ್ದರು ಬಲಿಯಾಗುವ ಕಾಲವಿತ್ತು ಈಗ ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗಿ ಎಲ್ಲರೂ ಬದಲಾವಣೆಯಾಗುವ ಮೂಲಕ ಮೂಢನಂಬಿಕೆಯಿಂದ ದೂರ ಸರಿಯುವಂತಾಗಿದ್ದಾರೆ. ಇದಕ್ಕೆಲ್ಲ ಕಾರಣ ಶಿಕ್ಷಣ ಎಂದು ಹೇಳಿದರು.

ಆನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಿಟ್ಟೂರು ನಾರಾಯಣಗುರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ ಹಾಗೂ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಮತ್ತು ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಉಪಸ್ಥಿತರಿದ್ದು ತಮ್ಮ ಉಪದೇಶಾಮೃತವನ್ನು ನೀಡಿದರು.

ಸಮಾರಂಭದದ ಅಧ್ಯಕ್ಷತೆಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ವಹಿಸಿ ಮಾತನಾಡಿ, ಅಧಿಕಾರವಿದ್ದಾಗ ಕರೆಯುವುದು ಅಧಿಕಾರವಿಲ್ಲದಿದ್ದರೆ ಕಡೆಗಣಿಸುವುದು ಯಾರಿಗೂ ಶೋಭೆ ತರುವುದಿಲ್ಲ. ದೇವಸ್ಥಾನದಲ್ಲಿ ಎಲ್ಲರೂ ಸಮಾನರು ದೇವರಲ್ಲಿ ಭಕ್ತಿ ಸಮಾಜದ ಹಿರಿಯರಿಗೆ ಗೌರವ ಭಾವನೆಯಿಂದ ಇದ್ದರೆ ಮಾತ್ರ ಎಲ್ಲರಿಗೂ ಶ್ರೇಯಸ್ಸು ಎಂದು ಹೇಳಿ, ದೇವಸ್ಥಾನದ ಸಮಗ್ರ ಅಭಿವೃದ್ದಿಗೆ ಇನ್ನೂ ಮೂರು ವರ್ಷದಲ್ಲಿ ಸರ್ಕಾರದಿಂದ ಎಷ್ಟು ಅನುದಾನವನ್ನು ಕೇಳುತ್ತೀರಾ ಅಷ್ಟು ಹಣವನ್ನು ಭರಿಸುವ ಭರವಸೆ ನೀಡಿ, ಸ್ವಾಮಿರಾವ್ ರವರು 95 ವರ್ಷದ ಇಳಿ ವಯಸ್ಸಿನಲ್ಲೂ ದೇವರ ಕೆಲಸವನ್ನು ಯುವಕರು ಮಾಡುವಂತೆ ನಿರ್ವಹಿಸಿರುತ್ತಾರೆ ಅವರನ್ನು ನಮ್ಮ ರಾಜಕೀಯ ಗುರುಗಳಾದ ಬಂಗಾರಪ್ಪ ಮತ್ತು ಕಾಗೋಡು ತಿಮ್ಮಪ್ಪನವರಿಗೆ ಕೊಡುವಷ್ಟೆ ಗೌರವವನ್ನು ನಾನು ಮಾಡುತ್ತಿದ್ದೇನೆಂದು ಹೇಳಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಶಾಸಕ ಆರಗ ಜ್ಞಾನೇಂದ್ರ, ಗ್ಯಾರಂಟಿ ಸಮಿತಿಯ ತಾಲ್ಲೂಕು ಅಧ್ಯಕ್ಷ ಹೆಚ್.ಬಿ.ಚಿದಂಬರ್, ಕೋಡೂರು ಗ್ರಾಮ ಪಂಚಾಯಿತಿ ಆಧ್ಯಕ್ಷ ಜಯಪ್ರಕಾಶ್, ಮುಂಬಾರು ಗ್ರಾಮ ಪಂಚಾಯಿತ್ ಅಧ್ಯಕ್ಷ ಎನ್.ಕುಮಾರ್, ಮಾರುತಿಪುರ ಗ್ರಾಮ ಪಂಚಾಯಿತ್ ಅಧ್ಯಕ್ಷೆ ಜಯಮ್ಮ ದೇವರಾಜ್ ತಹಶೀಲ್ದಾರ್ ರಶ್ಮಿ ಹಾಲೇಶ್, ಇಒ ನರೇಂದ್ರ, ಜೇನುಕಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಸ್ವಾಮಿರಾವ್, ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಹಾಜರಿದ್ದರು.

ದೇವಸ್ಥಾನಗಳು ಧಾರ್ಮಿಕ ಕೇಂದ್ರಗಳಾಗಬೇಕು ;
ದೇವಸ್ಥಾನಗಳಲ್ಲಿ ರಾಜಕೀಯ ತರದೆ ಎಲ್ಲರನ್ನು ಸಮಾನವಾಗಿ ಕಾಣುವಂತಾಗಬೇಕು. ದೇವರಲ್ಲಿ ಭಕ್ತಿ, ಗುರು-ಹಿರಿಯರಲ್ಲಿ ಗೌರವ ಭಾವನೆ ಬೆಳೆಸಿಕೊಂಡಾಗ ಮಾತ್ರ ಶಾಂತಿ ನೆಮ್ಮದಿಯನ್ನು ಕಾಣಬಹುದಾಗಿದೆ.
– ಗೋಪಾಲಕೃಷ್ಣ ಬೇಳೂರು, ಶಾಸಕ

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]