ಹೊಸನಗರ ; ನಾಯಕತ್ವ ಗುಣ ಬೆಳೆಸಿಕೊಳ್ಳುವ ಮೂಲಕ ಯಶಸ್ವಿ ಜೀವನ ರೂಪಿಸಿಕೊಳ್ಳಲು ಎನ್ಎಸ್ಎಸ್ ಶಿಬಿರಗಳು ಮಹತ್ವದ ಸಾಧನ ಎಂದು ಕುವೆಂಪು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭ ಮರವಂತೆ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಹುಂಚ ಗ್ರಾಪಂ ವ್ಯಾಪ್ತಿಯ ಸುಮಟಗಾರು ಹಿರಿಯ ಪ್ರಾಥಮಿಕ ಪಾಠ ಶಾಲೆಯ ನಾಟ್ಯರಾಣಿ ಶಾಂತಲೆ ಸಭಾಭವನದಲ್ಲಿ ನಡೆದ ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಒಂದು ಮತ್ತು ಎರಡರ ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಜೀವನ ರೂಪಗೊಳ್ಳಲು ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ಮಹತ್ತರ ಸಾಧನವಾಗಿದೆ. ಇಲ್ಲಿ ನಡೆದ ಶಿಬಿರ ಪರಿಪೂರ್ಣತೆ ಹೊಂದಿದ್ದು ವಿದ್ಯಾರ್ಥಿಗಳ ಮುಂದಿನ ಜೀವನ ಮಟ್ಟಕ್ಕೆ ದಾರಿದೀಪವಾಗಿದೆ ಎಂದು ಹಾರೈಸಿದರು.

ಕೊಡಚಾದ್ರಿ ಕಾಲೇಜಿನ ಪ್ರಾಂಶುಪಾಲ ಡಾ. ಕೆ ಉಮೇಶ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿದ ತೀರ್ಥಹಳ್ಳಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ ಸಿ ಸೌಮ್ಯ, ಶಿಬಿರಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಮೂರ್ತ ಸ್ವರೂಪದಿಂದ ಮೂರ್ತ ಸ್ವರೂಪಕ್ಕೆ ಕೊಂಡೊಯ್ಯುವುದೇ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ ಎಂದು ಪ್ರೇರಕಶಕ್ತಿ ಹಾಗೂ ಪ್ರೇರಣೆಯಿಂದ ಉತ್ತಮ ಹಾಗೂ ಬದುಕನ್ನು ರೂಪಿಸಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಂಗಲ ದೇವರಾಜ್ ಸಮಟಗಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ, ಸಹ ಶಿಕ್ಷಕಿ ಅಂಬಿಕಾ, ಎಸ್ಡಿಎಂಸಿ ಅಧ್ಯಕ್ಷ ಎಂ ಎಸ್ ಮಹೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಈಶ್ವರ ಗೌಡ, ನಿವೃತ್ತ ಉಪನ್ಯಾಸಕರು, ಶಿಕ್ಷಣ ತಜ್ಞ ಗುರೂಜಿ ಶ್ರೀಧರಮೂರ್ತಿ, ಸಿ.ಆರ್.ಪಿ ದೀಪ, ಕೊಡಚಾದ್ರಿ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ. ಪ್ರಭಾಕರ್, ಸಾಧನ ಲೋಕೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ಶಿಬಿರಾರ್ಥಿಗಳು ಉತ್ತಮ ವಾತಾವರಣದಲ್ಲಿ ರಾಷ್ಟ್ರೀಯ ಸೇವಾಯೋಜನಾ ಸಪ್ತಾಹದಲ್ಲಿ ಭಯ ಆತಂಕದೊಂದಿಗೆ ಪಾಲ್ಗೊಂಡಿದ್ದು ಈಗ ಮದುಮಗಳು ತವರು ಮನೆಯಿಂದ ಗಂಡನ ಮನೆಗೆ ಹೋಗುವ ರೀತಿಯಲ್ಲಿ ಹೋಗುತ್ತಿರುವುದು ಭಾಸವಾಗುತ್ತಿದೆ ಎಂದು ಅಭಿಪ್ರಾಯಸಿದರು.

ಶಿಬಿರಾರ್ಥಿಗಳು ಮಾತನಾಡಿ, ಶಿಬಿರದಲ್ಲಿ ಒಂದು ತುಂಬು ಕುಟುಂಬದಂತೆ ಇದೀಗ ಶಿಬಿರ ಮುಗಿಸಿ ಹೊರಟಿರುವುದು ತೀವ್ರ ಬೇಸರವಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಾಗವೇಣಿ ಕೆ.ಆರ್ ಪ್ರಾರ್ಥಿಸಿದರು. ಶಿಬಿರಾಧಿಕಾರಿ ರಾಕೇಶ್ ಸ್ವಾಗತಿಸಿದರು. ವರ್ಷಿತಾ, ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ಶಿಬಿರಾಧಿಕಾರಿ ಕೆ.ಎಸ್ ಮೇದಿನಿ ಮನ್ನಿಸಿದರು.