ರಿಪ್ಪನ್‌ಪೇಟೆ ; ತಾಳಗುಪ್ಪ ನಿಲ್ದಾಣದಿಂದ ಹೊರಡುವ ಎಕ್ಸ್‌ಪ್ರೆಸ್ ರೈಲು ಅರಸಾಳು ಮಾಲ್ಗುಡಿ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ರಾಜಧಾನಿ ಸೇರಿದಂತೆ ಇತರ ಕಡೆಗೆ ಸಂಚರಿಸುವ ಪ್ರಯಾಣಿಕರು ಆಗ್ರಹಿಸಿದರು.
ತಾಳಗುಪ್ಪದಿಂದ ಬೆಳಗ್ಗೆ 5 ಗಂಟೆಗೆ ಹೊರಡುವ ಇಂಟರ್‌ಸಿಟಿ ರೈಲು ಸಾಗರ-ಆನಂದಪುರ ಮಾರ್ಗವಾಗಿ ಹೋಗುವ ಅರಸಾಳು ಮಾಲ್ಗುಡಿ ರೈಲ್ವೆ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರು ಶಿವಮೊಗ್ಗ, ಭದ್ರಾವತಿ, ತರೀಕೆರೆ, ಬಿರೂರು, ಕಡೂರು ಮಾರ್ಗದ ಬೆಂಗಳೂರು ಹೋಗಲು ಆನಂದಪುರ ರೈಲ್ವೆ ನಿಲ್ದಾಣಕ್ಕೆ ಹೋಗಿ ಪ್ರಯಾಣಿಸುವಂತಾಗಿದೆ ಎಂದು ಪ್ರಯಾಣಿಕರು ತಮ್ಮ ಅಂತರಾಳದ ನೋವಯನ್ನು ಮಾಧ್ಯಮದವರಲ್ಲಿ ಹಂಚಿಕೊಂಡರು.

ಕೋಣಂದೂರು, ಹುಂಚ, ಗುಡ್ಡೆಕೊಪ್ಪ, ಅಮೃತ, ಜಂಬಳ್ಳಿ, ಬಿದರಹಳ್ಳಿ, ಹೆದ್ದಾರಿಪುರ, ಕಲ್ಲೂರು, ತಳಲೆ, ಕಳಸೆ, ಬೆಳ್ಳೂರು, ಹಾರೋಹಿತ್ತಲು, ಬಸವಾಪುರ, ಬೆನವಳ್ಳಿ, ರಿಪ್ಪನ್‌ಪೇಟೆ, ಗವಟೂರು, ಕುಕ್ಕಳಲೇ, ಬಾಳೂರು, ಹಾಲುಗುಡ್ಡೆ ಇನ್ನಿತರ ಗ್ರಾಮಗಳಲ್ಲಿನ ವಿದ್ಯಾವಂತ ನಿರುದ್ಯೋಗಿಗಳು ಮತ್ತು ಅನಾರೋಗ್ಯ ಪೀಡಿತರು, ಮಹಿಳೆಯರು ಸೇರಿದಂತೆ ರಾಜಕೀಯ ಮುಖಂಡರು ರಾಜಧಾನಿ ಬೆಂಗಳೂರಿಗೆ ಹೋಗಿ ಬರಲು ಕೇವಲ ಮೂರರಿಂದ ನಾಲ್ಕು ಕೀ.ಮೀ ದೂರದ ಅರಸಾಳು ನಿಲ್ದಾಣಕ್ಕೆ ಹೋಗಿ ರೈಲು ಹತ್ತುವ ವ್ಯವಸ್ಥೆಯಿದ್ದರೂ ಕೂಡಾ ಮುಂಜಾನೆಯ ಇಂಟರ್‌ಸಿಟಿ ರೈಲು ಹತ್ತಲು ಸುಮಾರು ಹತ್ತು ಹನ್ನೆರಡು ಕಿ.ಮೀ ದೂರದ ಆನಂದಪುರ ಹೋಗಿ ಪ್ರಯಾಣಿಸಬೇಕಾದ ಅನಿರ್ವಾತೆ ಎದುರಾಗಿದೆ ಎಂದು ದೂರಿದರು.
ಇನ್ನಾದರೂ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರು ಇತ್ತ ಗಮನಹರಿಸಿ ಮತದಾರರ ಸಮಸ್ಯೆಗೆ ಪರಿಹಾರ ಕಲ್ಪಿಸುವತ್ತಾ ಮುಂದಾಗುವರೆ ಕಾದು ನೋಡಬೇಕಾಗಿದೆ.