Ripponpete

ರಿಪ್ಪನ್‌ಪೇಟೆ ; ರಂಜಾನ್ ಪ್ರಯುಕ್ತ ಶಾಂತಿ ಸಭೆ

ರಿಪ್ಪನ್‌ಪೇಟೆ ; ರಂಜಾನ್ ಹಬ್ಬ ಐದಾರು ದಿನಗಳಲ್ಲಿದ್ದು ಈ ಹಬ್ಬದ ಅಂಗವಾಗಿ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಅಧ್ಯಕ್ಷತೆಯಲ್ಲಿ ಶಾಂತಿ ಸಭೆಯನ್ನು ನಡೆಸಲಾಯಿತು.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆಯಲ್ಲಿ ಮೂರು ಮಸೀದಿಗಳಿದ್ದು ಮುಸ್ಲಿಂ ಸಮುದಾಯದ ಮುಖಂಡರನ್ನು ಹಾಗೂ ಹಿಂದೂ ಸಮುದಾಯದವರನ್ನು ಒಟ್ಟಿಗೆ ಸಭೆಗೆ ಕರೆಯಲಾಗಿದ್ದು ಸಭೆಯಲ್ಲಿ ಸಾಕಷ್ಟು ವಿಚಾರಗಳ ಕುರಿತು ಮುಖಂಡರು ಪ್ರಸ್ತಾಪಿಸಿ ಚರ್ಚಿಸಿದರು.

ಹಬ್ಬದ ಹೆಸರಿನಲ್ಲಿ ಗ್ರಾಮದಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಸೂಕ್ತ ತಿಳುವಳಿಕೆಗಳೊಂದಿಗೆ ಹಬ್ಬವನ್ನು ಸಂಭ್ರಮದಿಂದ ಶಾಂತಿ ಸೌಹಾರ್ದತೆಯಲ್ಲಿ ಆಚರಿಸುವುದರೊಂದಿಗೆ ವರ್ಷದಲ್ಲಿ ಬರುವ ಹಬ್ಬವನ್ನು ಸಡಗರದೊಂದಿಗೆ ಆಚರಿಸಿ ಶಾಂತಿ ನೆಮ್ಮದಿಯಿಂದ ಎಲ್ಲರು ಇರುವಂತೆ ಹೇಳಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಸಭೆಯಲ್ಲಿ ಜುಮ್ಮಾ ಮಸೀಧಿಯ ಅಧ್ಯಕ್ಷ ಹಸನಬ, ಮುಖಂಡರಾದ ಆರ್.ಎ.ಚಾಬುಸಾಬ್, ಅಮೀರ್‌ಹಂಜಾ, ಗ್ರಾಮ ಪಂಚಾಯಿತಿ ನಿಕಟಪೂರ್ವ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಆಸಿಫ್‌ಭಾಷಾ, ರವೀಂದ್ರ ಕೆರೆಹಳ್ಳಿ, ಮೆಕ್ಕಾ ಮಸೀದಿ ಅಧ್ಯಕ್ಷ ಅಮೀರ್‌ಸಾಬ್, ಹಾಗೂ ಕೋಡೂರು ಮಸೀದಿಯ ಅಧ್ಯಕ್ಷ ಅಮೀರ್ ಹಂಜಾ, ಸಾಮಾಜಿಕ ಕಾರ್ಯಕರ್ತ ಟಿ.ಆರ್.ಕೃಷ್ಣಪ್ಪ ಇನ್ನಿತರರು ಭಾಗವಹಿಸಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!