ರಿಪ್ಪನ್‌ಪೇಟೆ ; ರಿಪ್ಪನ್‌ಪೇಟೆ ಭಾಗದ ಅಪ್ಪೆಮಿಡಿ ಉಪ್ಪಿನಕಾಯಿ ರಾಜ್ಯಾದ್ಯಂತ ಅಲ್ಲದೇ ಹೊರ ರಾಜ್ಯದಲ್ಲೂ ಪ್ರಖ್ಯಾತಿ ಪಡೆದಿದೆ.
ಹೌದು, ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ 550 ವರ್ಷ ಪೂರೈಸಿದ ಸಂಭ್ರಮಕ್ಕೆ ನ.27 ರಿಂದ ಡಿ.7ರವರೆಗೆ 10 ದಿನಗಳ ಕಾಲ ಸಾರ್ಧ ಪಂಚಶತಮಾನೋತ್ಸವ ಕಾರ್ಯಕ್ರಮಕ್ಕೆ ರಿಪ್ಪನ್‌ಪೇಟೆಯ ಉಪ್ಪಿನಕಾಯಿ ತಲುಪಿದೆ.
ಪಟ್ಟಣದ ಹೊಸನಗರ ರಸ್ತೆಯ ನಿವಾಸಿ ಸತೀಶ್ ಕಿಣಿ ಮತ್ತು ಪೂರ್ಣಿಮಾ ಕಿಣಿ ದಂಪತಿಗಳು ಸ್ವತಃ ಮನೆಯಲ್ಲೇ 1,450 ಕೆಜಿ ಉಪ್ಪಿನಕಾಯಿಯನ್ನು ತಯಾರಿಸಿ ಗೋವಾದ ಪರ್ತಗಾಳಿ ಮಠಕ್ಕೆ ಸೇವಾರೂಪದಲ್ಲಿ ಸಮರ್ಪಿಸಿದ್ದಾರೆ.

ಮಠಕ್ಕೆ 550 ವರ್ಷ ಪೂರೈಸಿದ ಸಂದರ್ಭದಲ್ಲಿ 550 ಕೋಟಿ ರಾಮನಾಮ ಜಪ ಸಮರ್ಪಣೆಯನ್ನು ದೇಶಾದ್ಯಂತ ಮಾಡಲಾಗಿದೆ. ನ.28ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪರ್ತಗಾಳಿ ಮಠಕ್ಕೆ ತೆರಳಿ 77 ಅಡಿಯ ಶ್ರೀರಾಮ ದೇವರ ಕಂಚಿನ ಪ್ರತಿಮೆಯನ್ನು ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





