ಟೈಟು ಟೈಟು ಫುಲ್ ಟೈಟು ; ಕರ್ತವ್ಯದಲ್ಲಿದ್ದಾಗಲೇ ಪಾನಮತ್ತನಾಗಿ ರಸ್ತೆ ಪಕ್ಕ ಮಲಗಿದ ಪೊಲೀಸ್ ಕಾನ್ಸ್‌ಟೇಬಲ್ !

Written by Mahesh Hindlemane

Updated on:

ರಿಪ್ಪನ್‌ಪೇಟೆ ; ಕರ್ತವ್ಯದಲ್ಲಿರುವಾಗಲೇ ಪಾನಮತ್ತನಾದ ರಿಪ್ಪನ್‌ಪೇಟೆ ಪೊಲೀಸ್‌ ಕಾನ್ಸ್‌ಟೇಬಲ್‌ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿಯೇ ಮಲಗಿ ಅಪಹಾಸ್ಯಕ್ಕೀಡಾಗಿರುವ ಘಟನೆ ಮಂಗಳವಾರ ನಡೆದಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಕ್ಕದ ರಸ್ತೆಯ ಅಂಚಿನಲ್ಲಿ ಕೆಲಕಾಲ ಮಲಗಿದ್ದ ಕಾನ್ಸ್‌ಟೇಬಲ್ ಶಿವಕುಮಾರ್‌, ಅರೆಗಣ್ಣು ತೆರೆದು ಮಂಪರಿನಲ್ಲಿ ಏನನ್ನೋ ಗೊಣಗುತ್ತಾ ರಸ್ತೆ ಸಂಚಾರಿಗಳ ಗಮನ ಸೆಳೆಯುತ್ತಿದ್ದರು.

ಗಮನಿಸುತಿದ್ದ ಸಾರ್ವಜನಿಕರು ಪೊಲೀಸಪ್ಪನ ಪರಿಯನ್ನು ಕಂಡು ಶಿಸ್ತಿನ ಪೊಲೀಸ್ ಇಲಾಖೆಯಲ್ಲಿ ಇಂತಹವರೂ ಇದ್ದಾರಾ ಎನ್ನುತ್ತಲೇ ಮುಂದೆ ಸಾಗುತಿದ್ದರು.

ಕಳೆದ ಕೆಲವು ತಿಂಗಳ ಹಿಂದೆ ಪಟ್ಟಣದ ಪೊಲೀಸ್‌ ಠಾಣೆಗೆ ನಿಯುಕ್ತಿಗೊಂಡ ಈ ಕಾನ್ಸ್‌ಟೇಬಲ್‌ ಅಂದಿನಿಂದಲೂ ಪಾನಮತ್ತನಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದು ಕೆಲವೊಮ್ಮೆ ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ ತೋರುತಿದ್ದರು ಎಂದು ತಿಳಿದು ಬಂದಿದೆ.

ಇಲಾಖೆಯ ಮೇಲಾಧಿಕಾರಿಗಳು ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯಿಸಿ ತನ್ನ ಹಳೆಯ ಚಾಳಿ ಮುಂದುವರಿಸಿದ್ದಾರೆ ಎಂದು ಸ್ಥಳೀಯರು ಆರೋಪಿದ್ದಾರೆ.

Leave a Comment