ತೀರ್ಥಹಳ್ಳಿ : ಬೆಟ್ಟಮಕ್ಕಿಯಲ್ಲಿರುವ 110/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಸೆ.8ರ ಮಂಗಳವಾರ ಬೆಳಿಗ್ಗೆ 9:30 ರಿಂದ ಸಂಜೆ 6:00 ಗಂಟೆಯವರೆಗೆ ತೀರ್ಥಹಳ್ಳಿ ತಾಲೂಕಿನ ಹಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಮೆಸ್ಕಾಂ ಇಲಾಖೆ ತಿಳಿಸಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಪ್ರದೇಶಗಳು, ಮುಳುಬಾಗಿಲು, ಹೊಸಳ್ಳಿ, ಹಾರೋಗೊಳಿಗೆ, ಮೇಲಿನಕುರುವಳ್ಳಿ, ದೇವಂಗಿ, ಬಸವಾನಿ, ಮೇಳಿಗೆ, ಕಟ್ಟೆಹಕ್ಕಲು, ಶೇಡ್ಗಾರು, ನೆರಟೂರು, ಆರಗ, ಸಾಲೂರು, ನೊಣಬೂರು, ಅರಳಸುರಳಿ, ಹೊದಲ ಅರಳಾಪುರ ಮತ್ತು ತ್ರಿಯಂಭಕಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಈ ಅನಿವಾರ್ಯ ವಿದ್ಯುತ್ ಕಡಿತದಿಂದಾಗುವ ಅನಾನುಕೂಲತೆಗಾಗಿ ಸಾರ್ವಜನಿಕರು ಹಾಗೂ ಮೆಸ್ಕಾಂ ಗ್ರಾಹಕರು ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

