ತೀರ್ಥಹಳ್ಳಿ: ಬೆಜ್ಜವಳ್ಳಿ ಮೆಸ್ಕಾಂ ಶಾಖೆಯ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ನಡೆಯುತ್ತಿರುವುದರಿಂದ, ಅಕ್ಟೋಬರ್ 7ರ ಬುಧವಾರದಂದು ತಾಲೂಕಿನ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಫ್-9 ಬಾಳೇಬೈಲು ಫೀಡರ್‌ನಲ್ಲಿ ತುರ್ತು ನಿರ್ವಹಣೆ ಹಾಗೂ ಎಫ್-8 ಹಾರೇಗೊಪ್ಪ ಎಂಬ ಹೊಸ ಪ್ರತ್ಯೇಕ ಮಾರ್ಗ ರಚಿಸುವ ಕಾಮಗಾರಿಯ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಕುಡುಮಲ್ಲಿಗೆ, ವಿಹಂಗಮ, ಬಿಳುವೆ, ಭಾರತಿಪುರ, ಕೆಸರೆ, ಬಾಳಗಾರು, ಕಲ್ಲತ್ತಿ, ಕರ್ಕಿ, ದಬ್ಬಣಗದ್ದೆ, ಅಕ್ಸಾಲೆಕೊಪ್ಪ, ಕೆಂಜಿಗುಡ್ಡೆ, ಹೆಗ್ಗಾರು, ಹಾರೇಗೊಪ್ಪ, ಮಹಿಷಿ, ಹಕ್ಲುಮನೆ ಹಾಗೂ ಕುಡುಮಲ್ಲಿಗೆ ಸುತ್ತಮುತ್ತಲಿನ ಪ್ರದೇಶಗಳು.
ಸಾರ್ವಜನಿಕರು ಹಾಗೂ ಮೆಸ್ಕಾಂ ಗ್ರಾಹಕರು ಸಹಕರಿಸುವಂತೆ ಇಲಾಖೆ ಮನವಿ ಮಾಡಿದೆ.
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.

