ಶಿವಮೊಗ್ಗ

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ! ‘ದುರ್ಗಾಂಬಾ ಮೋಟರ್ಸ್’ ಏಜೆಂಟ್ ತಪ್ಪಿಗೆ ‘ಶ್ರೀ ದುರ್ಗಾಂಬಾ’ ಬಸ್ ತಡೆದು ಪ್ರತಿಭಟನೆ : ನಾಗರಾಜ್ ಕುರುವಳ್ಳಿ ನಡೆಗೆ ತೀವ್ರ ಆಕ್ರೋಶ

The action of Nagaraj Kuruvalli, president of the 'Jaya Karnataka' organization—who staged a protest by intercepting a bus belonging to one organization due to a mistake committed by the staff of a different organization—has now sparked intense public discussion and outrage.

Durgambha – Sri Durgambha

ಶಿವಮೊಗ್ಗ: ಪ್ರಯಾಣಿಕರಿಗೆ ಆದ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಉತ್ತಮ ಬೆಳವಣಿಗೆಯೇ ಸರಿ. ಆದರೆ, ಸರಿಯಾದ ಮಾಹಿತಿ ಇಲ್ಲದೆ ಒಂದು ಸಂಸ್ಥೆಯ ಸಿಬ್ಬಂದಿ ಮಾಡಿದ ತಪ್ಪಿಗೆ ಮತ್ತೊಂದು ಸಂಸ್ಥೆಯ ಬಸ್ ತಡೆದು ಪ್ರತಿಭಟನೆ ನಡೆಸಿರುವ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ನಾಗರಾಜ್ ಕುರುವಳ್ಳಿ ನಡೆ ಇದೀಗ ಸಾರ್ವಜನಿಕರ ತೀವ್ರ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

WhatsApp Group Join Now
Telegram Group Join Now
Instagram Group Join Now

ಘಟನೆಯ ಹಿನ್ನೆಲೆ ಏನು?

ಸುಮಾರು ಒಂದು ವಾರದ ಹಿಂದೆ ಶಿವಮೊಗ್ಗದಲ್ಲಿ ರಾತ್ರಿ 10:30ರ ಸುಮಾರಿಗೆ ತೀರ್ಥಹಳ್ಳಿಗೆ ಬರಬೇಕಿದ್ದ ಪ್ರಯಾಣಿಕರನ್ನು ‘ದುರ್ಗಾಂಬಾ ಮೋಟರ್ಸ್’ (Durgamba Motors) ಬಸ್ಸಿನ ಏಜೆಂಟ್ ಬಸ್ಸಿಗೆ ಹತ್ತಿಸಿಕೊಳ್ಳದೆ ಕಿರಿಕಿರಿ ಉಂಟುಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಪ್ರಯಾಣಿಕರಿಗೆ ಮುಂದಿನ ದಿನಗಳಲ್ಲಿ ಇಂತಹ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಜಯ ಕರ್ನಾಟಕ ಸಂಘಟನೆಯ ನಾಗರಾಜ್ ಕುರುವಳ್ಳಿ ಇಂದು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಏಜೆಂಟ್ ಮಾಡಿದ ತಪ್ಪನ್ನು ಖಂಡಿಸಿ, ಪ್ರಯಾಣಿಕರ ಪರ ನಿಂತಿದ್ದು ಸ್ವಾಗತಾರ್ಹವಾದರೂ, ಅವರು ತಡೆದಿದ್ದು ಮಾತ್ರ ತಪ್ಪು ಸಂಸ್ಥೆಯ ಬಸ್ಸನ್ನು ಎಂಬುದು ವಿಪರ್ಯಾಸ!

‘ದುರ್ಗಾಂಬಾ ಮೋಟರ್ಸ್’ ಬೇರೆ, ‘ಶ್ರೀ ದುರ್ಗಾಂಬಾ’ ಬೇರೆ!

ಹೌದು, ಹೆಸರು ಒಂದೇ ರೀತಿ ಇದೆ ಎಂಬ ಕಾರಣಕ್ಕೆ ನಾಗರಾಜ್ ಕುರುವಳ್ಳಿ ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ಅಸಲಿಗೆ ‘ದುರ್ಗಾಂಬಾ ಮೋಟರ್ಸ್’ ಸಂಸ್ಥೆಯ ಮಾಲೀಕರು ಸದಾನಂದ ಚಾತ್ರ ಹಾಗೂ ಕೃಷ್ಣಾನಂದ ಚಾತ್ರ ಅವರಾಗಿದ್ದಾರೆ. ಆದರೆ, ಇಂದು ಪ್ರತಿಭಟನಾಕಾರರು ತಡೆದಿರುವುದು ‘ಶ್ರೀ ದುರ್ಗಾಂಬಾ’ (Sri Durgamba) ಸಂಸ್ಥೆಯ ಬಸ್ಸನ್ನು.

‘ಶ್ರೀ ದುರ್ಗಾಂಬಾ’ ಸಂಸ್ಥೆಯ ಮಾಲೀಕರು ಸಚ್ಚಿದಾನಂದ ಚಾತ್ರ ಅವರಾಗಿದ್ದು, ಇವರು ಪ್ರಸಿದ್ಧ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಕಮಲಶಿಲೆ ದೇವಸ್ಥಾನದ ಅನುವಂಶಿಕ ಧರ್ಮದರ್ಶಿಗಳೂ ಆಗಿದ್ದಾರೆ. ಈ ಎರಡೂ ಬಸ್ ಕಂಪನಿಗಳ ವ್ಯವಹಾರ ಹಾಗೂ ಮಾಲೀಕತ್ವ ಸಂಪೂರ್ಣ ಬೇರೆ ಬೇರೆಯಾಗಿದೆ.

ಗೌರವಕ್ಕೆ ಧಕ್ಕೆ:

ಕ್ಷಮೆಯಾಚನೆಗೆ ಆಗ್ರಹ ಈ ಕನಿಷ್ಠ ಮಾಹಿತಿಯನ್ನೂ ತಿಳಿಯದ ನಾಗರಾಜ್ ಕುರುವಳ್ಳಿ, ಸಂಬಂಧವೇ ಇಲ್ಲದ ‘ಶ್ರೀ ದುರ್ಗಾಂಬಾ’ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ವಿಡಿಯೋದಲ್ಲಿ ಪದೇ ಪದೇ “ಕಮಲಶಿಲೆಯಲ್ಲಿ ಅನ್ನ ಹಾಕ್ತಾರೆ, ಅವರ ಮೇಲೆ ಗೌರವ ಇದೆ” ಎಂದೆಲ್ಲಾ ಉಲ್ಲೇಖಿಸುವ ಮೂಲಕ, ತಪ್ಪೇ ಮಾಡದ ಕಮಲಶಿಲೆ ಧರ್ಮದರ್ಶಿ ಸಚ್ಚಿದಾನಂದ ಚಾತ್ರ ಅವರ ಹೆಸರಿಗೆ ಹಾಗೂ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಹೀಗಾಗಿ ನಾಗರಾಜ್ ಅವರು ಕೂಡಲೇ ಸಚ್ಚಿದಾನಂದ ಚಾತ್ರ ಅವರ ಬಳಿ ಬಹಿರಂಗ ಕ್ಷಮೆಯಾಚಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಸಾರ್ವಜನಿಕರ ಪ್ರಶ್ನೆ ಏನು?

ಜನರಿಗೆ ಸಹಾಯ ಮಾಡುವ ಭರದಲ್ಲಿ ಅಥವಾ ಜನಮನ್ನಣೆ ಗಳಿಸುವ ಉದ್ದೇಶದಿಂದ ಸತ್ಯಾಸತ್ಯತೆ ಅರಿಯದೆ ಈ ರೀತಿ ಪ್ರತಿಭಟನೆ ಮಾಡುವುದು ಎಷ್ಟು ಸರಿ? ಯಾವುದೇ ತಪ್ಪು ಮಾಡದ ಬಸ್ಸನ್ನು ದಾರಿಯಲ್ಲಿ ತಡೆದು, ಅದರಲ್ಲಿ ತುರ್ತು ಕೆಲಸಕ್ಕೆ ಅಥವಾ ಆಸ್ಪತ್ರೆಗೆಂದು ಹೊರಟಿದ್ದ ಪ್ರಯಾಣಿಕರಿಗೆ ತೊಂದರೆ ಕೊಡುವುದು ಯಾವ ನ್ಯಾಯ? ಶಿವಮೊಗ್ಗದಲ್ಲಿ ಏಜೆಂಟ್ ಮಾಡಿದ್ದು ಎಷ್ಟು ತಪ್ಪೋ, ಪೂರ್ವಾಪರ ತಿಳಿಯದೆ ಬೇರೆ ಕಂಪನಿಯ ಬಸ್ ತಡೆದು ಪ್ರತಿಭಟನೆ ಮಾಡಿರುವ ನಾಗರಾಜ್ ಕುರುವಳ್ಳಿ ಅವರ ನಡೆಯೂ ಅಷ್ಟೇ ತಪ್ಪು ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!