ಶಿವಮೊಗ್ಗ

ಗೃಹಲಕ್ಷ್ಮಿಯರಿಗೆ ದಸರಾ ಬಂಪರ್ ಗಿಫ್ಟ್: 33ನೇ ಕಂತಿನ ₹2,000 ಹಣ ಖಾತೆಗೆ ಜಮೆ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

The 33rd installment of the ‘Gruhalakshmi’ scheme—the most popular among the government’s five guarantee schemes—has been successfully released, with Rs 2,000 credited directly into the bank accounts of each eligible woman.

Gruhalaxmi Scheme

ಶಿವಮೊಗ್ಗ: ನಾಡಹಬ್ಬ ದಸರಾ ಸಂಭ್ರಮದಲ್ಲಿರುವ ಮಹಿಳೆಯರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ‘ಗೃಹಲಕ್ಷ್ಮಿ’ ಯೋಜನೆಯ 33ನೇ ಕಂತಿನ ಹಣವನ್ನು ಯಶಸ್ವಿಯಾಗಿ ಬಿಡುಗಡೆ ಮಾಡಲಾಗಿದ್ದು, ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ತಲಾ 2,000 ರೂಪಾಯಿ ಜಮೆಯಾಗಿದೆ.

WhatsApp Group Join Now
Telegram Group Join Now
Instagram Group Join Now

ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಈ ಯೋಜನೆಯಡಿ, ಶಿವಮೊಗ್ಗ ಜಿಲ್ಲೆಯಲ್ಲೂ ಹಣ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ಮಾಹಿತಿ ನೀಡಿದ್ದಾರೆ.

3.78 ಲಕ್ಷ ಮಹಿಳೆಯರಿಗೆ ಒಟ್ಟು ₹75.60 ಕೋಟಿ ಸಂದಾಯ ಪ್ರಸ್ತುತ ಬಿಡುಗಡೆಯಾಗಿರುವ 33ನೇ ಕಂತಿನಲ್ಲಿ ಶಿವಮೊಗ್ಗ ಜಿಲ್ಲೆಯ ಒಟ್ಟು 3,78,031 ಅರ್ಹ ಮಹಿಳಾ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಿದೆ. ನೇರ ನಗದು ವರ್ಗಾವಣೆ (DBT) ಮೂಲಕ ಫಲಾನುಭವಿಗಳ ಖಾತೆಗೆ ಒಟ್ಟು 75,60,62,000 ರೂ. (75.60 ಕೋಟಿ ರೂಪಾಯಿ) ಮೊತ್ತವನ್ನು ಜಮೆ ಮಾಡಲಾಗಿದೆ.

ಈವರೆಗೆ ಫಲಾನುಭವಿಗಳಿಗೆ ಸಿಕ್ಕ ಒಟ್ಟು ಹಣವೆಷ್ಟು?

ಗೃಹಲಕ್ಷ್ಮಿ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಕಳೆದ 32 ಕಂತುಗಳಲ್ಲಿ ಪ್ರತಿ ಮಹಿಳೆಯರ ಖಾತೆಗೆ ತಲಾ 2,000 ರೂ.ಗಳಂತೆ ಒಟ್ಟು 64,000 ರೂಪಾಯಿಗಳನ್ನು ಸರ್ಕಾರ ಪಾವತಿಸಿತ್ತು. ಇದೀಗ ದಸರಾ ಹಬ್ಬದ ವಿಶೇಷವಾಗಿ 33ನೇ ಕಂತಿನ ಹಣವೂ ಸೇರಿಕೊಂಡಿರುವುದು ಮಹಿಳೆಯರ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.

ಮುಖ್ಯಾಂಶಗಳು (Highlights):

  • ಯೋಜನೆ: ಗೃಹಲಕ್ಷ್ಮಿ ಯೋಜನೆ (33ನೇ ಕಂತು)
  • ಜಿಲ್ಲೆ: ಶಿವಮೊಗ್ಗ
  • ಒಟ್ಟು ಫಲಾನುಭವಿಗಳು: 3,78,031 ಮಹಿಳೆಯರು
  • ಬಿಡುಗಡೆಯಾದ ಒಟ್ಟು ಮೊತ್ತ: ₹75.60 ಕೋಟಿ
  • ಪಾವತಿ ವಿಧಾನ: ನೇರ ನಗದು ವರ್ಗಾವಣೆ (DBT)
Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!