HOSANAGARA | ತಾಲ್ಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ಕಸಬಾ ಹೋಬಳಿ ವರಕೋಡು ಗ್ರಾಮದ ದೊರೆದಿಂಬ ಗ್ರಾಮದ ಜೈನಾಬಿ ಕೋಂ ಮಾಸಿಂಸಾಬ್ ಎಂಬುವವರ ಮನೆಯ ಮೇಲೆ ಸೋಮವಾರ ರಾತ್ರಿ ಮನೆ ಪಕ್ಕದಲ್ಲಿದ್ದ ಅಕೇಶಿಯ ಮರ ಮನೆಯ ಮೇಲೆ ಬಿದ್ದು ಮನೆ, ಕೊಟ್ಟಿಗೆ ಸಂಪೂರ್ಣ ಜಖಂಗೊಂಡಿದೆ.
ಭಾರಿ ಮಳೆಗೆ ಮನೆ ಬಿದ್ದ ತೆಂಗಿನಮರ, ಲಕ್ಷಾಂತರ ರೂ. ನಷ್ಟ !

ಗ್ರಾಮ ಲೆಕ್ಕಾಧಿಕಾರಿ ಭೇಟಿ:
ಹೊಸನಗರ ಕಂದಾಯ ಇಲಾಖೆಯ ತಹಶೀಲ್ದಾರ್ ರಶ್ಮಿ ಹಾಲೇಶ್‌ರವರ ಆದೇಶದ ಮೇರೆಗೆ ಗ್ರಾಮ ಆಡಳಿತಾಧಿಕಾರಿ ಕೌಶಿಕ್ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲ ನಡೆಸಿದರು. ನಷ್ಟದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ವರದಿ ಸಲ್ಲಿಸಲಾಗುವುದು ಎಂದರು.
ದಾಸರಾಯನ ಕೆರೆ ದಂಡೆ ಕುಸಿತ, ತಹಶೀಲ್ದಾರ್ ರಶ್ಮಿ ಭೇಟಿ, ಪರಿಶೀಲನೆ
HOSANAGARA | ತಾಲ್ಲೂಕಿನಾದ್ಯಂತ ಮೂರು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಪರಿಣಾಮ ಮಸಗಲ್ಲಿ ಗ್ರಾಮದ ಭೀಮನಕೆರೆ ದಾಸರಾಯನ ಕೆರೆಯ ದಂಡೆ ಕುಸಿದು ಜಮೀನುಗಳಿಗೆ ನೀರು ನುಗ್ಗಿದೆ.

ತಹಶೀಲ್ದಾರ್ ಭೇಟಿ :
ದಾಸರಾಯನ ಕೆರೆಯ ದಂಡೆ ಕುಸಿತದ ವಿಷಯ ತಿಳಿದು ತಹಶೀಲ್ದಾರ್ ರಶ್ಮಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಳೆಯ ಪ್ರಮಾಣ ಕಡಿಮೆಯಾದಂತೆ ಕುಸಿತವನ್ನು ತಡೆಯಲು ಸರ್ಕಾರದಿಂದ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದರು.

